17ರಂದು ಹಂಸಜ್ಯೋತಿ ವಾರ್ಷಿಕೋತ್ಸವ

7

17ರಂದು ಹಂಸಜ್ಯೋತಿ ವಾರ್ಷಿಕೋತ್ಸವ

Published:
Updated:

ಬೆಂಗಳೂರು: ಹಂಸಜ್ಯೋತಿ ಸಂಸ್ಥೆ ತನ್ನ 37ನೇ ವರ್ಷಾಚರಣೆ ಅಂಗವಾಗಿ ಈ ತಿಂಗಳ 17ರಂದು ಸಂಜೆ ನಗರದ ರವೀಂದ್ರ ಕಲಾಕ್ಷೇತ್ರದಲ್ಲಿ ಸಾಂಸ್ಕೃತಿಕ ಉತ್ಸವವನ್ನು ಹಮ್ಮಿಕೊಂಡಿದೆ.ಉತ್ಸವದಲ್ಲಿ ಸಮೂಹ ಗಾಯನ, ಸುಗಮ ಸಂಗೀತ, ಭಕ್ತಿ ಸಂಗೀತ, ಶಾಸ್ತ್ರೀಯ ವಾದ್ಯ ಸಂಗೀತ, ಶಾಸ್ತ್ರೀಯ ನೃತ್ಯ, ಸಾಹಸ ಕ್ರೀಡಾ ಪ್ರದರ್ಶನ, ಜನಪದ ನೃತ್ಯ ಮೊದಲಾದ ವೈವಿಧ್ಯಮಯ ಕಾರ್ಯಕ್ರಮಗಳನ್ನು ಏರ್ಪಡಿಸಲಾಗಿದೆ ಎಂದು ಸಂಸ್ಥೆಯ ಪ್ರಧಾನ ಕಾರ್ಯದರ್ಶಿ ಮು.ಮುರಳೀಧರ ಶುಕ್ರವಾರ ಪತ್ರಿಕಾಗೋಷ್ಠಿಯಲ್ಲಿ ತಿಳಿಸಿದರು.ವಿವಿಧ ಕ್ಷೇತ್ರಗಳಲ್ಲಿ ಗಣನೀಯ ಸೇವೆ ಸಲ್ಲಿಸಿದ ಏಣಗಿ ಬಾಳಪ್ಪ, ಪಾಟೀಲ ಪುಟ್ಟಪ್ಪ, ಪಿ.ಬಿ. ಶ್ರೀನಿವಾಸ್, ಡಾ. ಹೊ. ಶ್ರೀನಿವಾಸಯ್ಯ ಸೇರಿದಂತೆ 40 ಗಣ್ಯರನ್ನು ಸನ್ಮಾನಿಸಲಾಗುವುದು ಎಂದು ಅವರು ಹೇಳಿದರು.

 

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry