ಭಾನುವಾರ, ಏಪ್ರಿಲ್ 11, 2021
21 °C

17ರಿಂದ ಜಾನುವಾರು ಜಾತ್ರೆ, ವಸ್ತುಪ್ರದರ್ಶನ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |ಸಕಲೇಶಪುರ: ಇದೇ ತಿಂಗಳ 17 ರಿಂದ 31ರ ವರೆಗೆ ನಡೆಯಲಿರುವ 53ನೇ ದನಗಳ ಜಾತ್ರೆ ಹಾಗೂ ವಸ್ತು ಪ್ರದರ್ಶನ  7.68 ಲಕ್ಷ ರೂಪಾಯಿ ಗಳಿಗೆ ಹರಾಜಾಗಿದೆ.

ಪುರಸಭಾ ಅಧ್ಯಕ್ಷ ಎಸ್.ಡಿ. ಆದರ್ಶ ಅಧ್ಯಕ್ಷತೆಯಲ್ಲಿ ಸೋಮ ವಾರ ನಡೆದ ಜಾತ್ರಾ ವಸ್ತುಪ್ರದರ್ಶನದ ಹಾರಾಜಿನಲ್ಲಿ ಒಟ್ಟು 17 ಮಂದಿ ಗುತ್ತಿಗೆದಾರರು ಹೆಚ್ಚಿನ ಬೆಲೆಗೆ ಹರಾಜು ಕೂಗಿದರು.

 ಅರ್ಜಿಯ ಬೆಲೆಯನ್ನು ಈ ಬಾರಿ 2 ಸಾವಿರ ರೂಪಾಯಿಗಳಿಗೆ ನಿಗದಿ ಗೊಳಿಸಿದ್ದರಿಂದ ಪುರಸಭಾ ಖಾತೆಗೆ 34 ಸಾವಿರ ರೂಪಾಯಿ ಹೆಚ್ಚುವರಿ ಆದಾಯ ಬಂದಿದೆ ಎಂದು ಅಧ್ಯಕ್ಷ ಎಸ್.ಡಿ.ಆದರ್ಶ ಹೇಳಿದರು.ಪ್ರತಿ ವರ್ಷಕ್ಕಿಂತ ಈ ಬಾರಿ ಜಾತ್ರೆಯ ವಸ್ತು ಪ್ರದರ್ಶನವನ್ನು ಅದ್ಧೂರಿ ಹಾಗೂ ಅರ್ಥಪೂರ್ಣವಾಗಿ ಮಾಡುವ ಸಲುವಾಗಿ  ಅಂತ ರಾಷ್ಟ್ರೀಯ ಖ್ಯಾತಿಯ ಕಲಾವಿದರಿಂದ ಕಾರ್ಯಕ್ರಮ ನಡೆಸಲಾಗುವುದು. ಕುದ್ರುವಳ್ಳಿ ಗಣೇಶ್ ಅವರ ಜಾದೂ, ಕಣ್ಣಿಗೆ ಬಟ್ಟೆ ಕಟ್ಟಿಕೊಂಡು ಬೆಂಗಳೂರು- ಮಂಗ ಳೂರು ರಾಷ್ಟ್ರೀಯ ಹೆದ್ದಾರಿಯಲ್ಲಿ ಬೈಕ್ ಚಾಲನೆ.

 

ಜಾದೂ ವಿಸ್ಮಯ, ಅಂತರಾಷ್ಟ್ರೀಯ ಕಲಾವಿದರಾದ ಸತೀಶ್‌ಪೈ ಅವರ ರೂಪಕಲಾ ಮೂವರು ಕುಳ್ಳರ ತಂಡದಿಂದ ಮೂರು ಮುತ್ತುಗಳು ಹಾಸ್ಯ ನಾಟಕ, ಮಂಗಳೂರಿನಿಂದ ಯಕ್ಷಮಿತ್ರ ತಂಡದಿಂದ ದೇವಿ ಮಾಹತ್ಮಾತೆ ಯಕ್ಷಗಾನ, ಕಿರುತೆರೆಯ ಜೂನಿಯರ್ ಕಲಾವಿದರು ಹಾಗೂ  ನಾಗರಾಜ್ ಕೋಟೆ ಅವರಿಂದ ಹಾಸ್ಯ ಕಾರ್ಯ ಕ್ರಮ. ಸ್ಟಾರ್ ಮೆಲೋಡಿಯಸ್ ಆರ್ಕೆಸ್ಟ್ರಾ, ಪೌರಾಣಿಕರಿಂದ ಹರಿಕತೆ ಏರ್ಪಡಿಸಲಾಗಿದೆ ಎಂದರು.ರಾಜ್ಯ ಮಟ್ಟದ ಕ್ರಿಕೆಟ್ ಪಂದ್ಯಾವಳಿ, ಹೊನಲು ಬೆಳಕಿನ ಕಬಡ್ಡಿ ಹಾಗೂ  ಶೆಟಲ್‌ಕಾಕ್, ಮಹಿಳೆಯರಿಗೆ ರಂಗೋಲಿ ಹಾಗೂ ಥ್ರೋಬಾಲ್ ಕ್ರೀಡೆಗಳನ್ನು ಏರ್ಪಡಿಸಲಾಗಿದೆ ಎಂದರು.

10ರಂದು ಮೀನು ಮಾರುಕಟ್ಟೆ ಹಾಗೂ ಸಂತೆ ಸುಂಕ ವಸೂಲಿ ಹಾರಾಜು ನಡೆಯಲಿದೆ ಎಂದು ಎಸ್.ಡಿ.ಆದರ್ಶ ಹೇಳಿದರು.

ಕೇಂದ್ರ ಬಜೆಟ್ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.