17ರ ಬಾಲಕಿ ಮೇಲೆ ಸತತ 6 ದಿನ ಸಾಮೂಹಿಕ ಅತ್ಯಾಚಾರ

7

17ರ ಬಾಲಕಿ ಮೇಲೆ ಸತತ 6 ದಿನ ಸಾಮೂಹಿಕ ಅತ್ಯಾಚಾರ

Published:
Updated:

ವಾರಾಣಸಿ /ಚಂದೌಲಿ (ಪಿಟಿಐ): ಆರು ಮಂದಿ ದುಷ್ಕರ್ಮಿ­ಗಳು 17 ವರ್ಷದ ಬಾಲಕಿಯನ್ನು  ಅಪಹರಿಸಿ ಸಾಮೂ­ಹಿಕ ಅತ್ಯಾಚಾರ ಎಸಗಿದ ಘಟನೆ ಚಂದೌಲಿ ಜಿಲ್ಲೆಯ ಇಲಿಯ ಪೊಲೀಸ್‌ ಠಾಣೆ ವ್ಯಾಪ್ತಿಯಲ್ಲಿ ನಡೆದಿದೆ.ಪಿಯುಸಿ ಓದು­ತ್ತಿರುವ ಬಾಲಕಿ ಸೆ. 9 ರಂದು ಮನೆಗೆ ಹೋಗು­ತ್ತಿ­ದಾಗ ದುಷ್ಕರ್ಮಿ­ಗಳು ಆಕೆ­ಯನ್ನು ಕಾರಿನಲ್ಲಿ ಅಹಮದಾಬಾದ್‌ಗೆ ಕರೆದೊಯ್ದು ಬಂಧಿಸಿಟ್ಟಿದ್ದರು.   ಸತತ 6 ದಿನಗಳ ಕಾಲ ಆಕೆ ಮೇಲೆ ಅತ್ಯಾಚಾರ ನಡೆಸಿದ್ದಾರೆ ಎಂದು ಪೊಲೀಸರು ತಿಳಿಸಿದ್ದಾರೆ.ಬಳಿಕ ವಾರಾಣಸಿಗೆ ಬಂದ ದುಷ್ಕರ್ಮಿ­ಗಳು ಆಕೆಯನ್ನು ಇಲ್ಲಿನ ದಂಡು ರೈಲ್ವೆ ನಿಲ್ದಾಣ ಸಮೀಪ ಬಿಟ್ಟು ಹೋಗಿದ್ದರು. ಆರೋಪಿ­ಗಳಲ್ಲಿ ಒಬ್ಬ, ಬಾಲಕಿ ಪೋಷಕ­ರಿಗೆ ಕರೆ ಮಾಡಿ ಬಾಲಕಿ ಬಗ್ಗೆ ಮಾಹಿತಿ  ನೀಡಿದ್ದ. ಹೆತ್ತ­ವರು ಬಾಲಕಿಯನ್ನು ರೈಲ್ವೆ ನಿಲ್ದಾಣ ಸಮೀಪ ಪತ್ತೆಹಚ್ಚಿದರು.ಬಾಲಕಿಯ ತಂದೆ ನೀಡಿದ ದೂರಿ­ನಂತೆ 6 ಜನರ ವಿರುದ್ಧ ದೂರು ದಾಖ­ಲಾಗಿದೆ. ಬಾಲಕಿ ವೈದ್ಯಕೀಯ ಪರೀಕ್ಷೆ ಒಳಗಾಗಲು ನಿರಾಕರಿಸಿದ್ದಾಳೆ. ಆರೋಪಿಗಳು ತಪ್ಪಿಸಿ­ಕೊಂಡಿದ್ದು, ಪ್ರಕರಣದ ತನಿಖೆ ನಡೆಯು­ತ್ತಿದೆ ಅವರು ತಿಳಿಸಿದ್ದಾರೆ.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry