17 ಡೆಂಗೆ ಪ್ರಕರಣ: ಎಚ್ಚೆತ್ತುಕೊಂಡ ಪಾಲಿಕೆ

ಸೋಮವಾರ, ಜೂಲೈ 22, 2019
23 °C

17 ಡೆಂಗೆ ಪ್ರಕರಣ: ಎಚ್ಚೆತ್ತುಕೊಂಡ ಪಾಲಿಕೆ

Published:
Updated:

ಹುಬ್ಬಳ್ಳಿ: ಅವಳಿನಗರದಲ್ಲಿ 17 ಡೆಂಗೆ ಪ್ರಕರಣಗಳು ಖಚಿತಪಟ್ಟಿದ್ದು, ಸಾರ್ವಜನಿಕರಲ್ಲಿ ಆತಂಕ ಹೆಚ್ಚಿದೆ. ಈ ಹಿನ್ನೆಲೆಯಲ್ಲಿ ಎಚ್ಚೆತ್ತುಕೊಂಡಿರುವ ಪಾಲಿಕೆ, ತಕ್ಷಣ ವಿವಿಧ ಕ್ರಮಗಳನ್ನು ಕೈಗೊಳ್ಳಲು ಮುಂದಾಗಿದೆ.

`ಡೆಂಗೆ ರೋಗದ ತುರ್ತು ನಿಯಂತ್ರಣ ಉದ್ದೇಶದಿಂದ ಲಾರ್ವಾ ಸಮೀಕ್ಷೆ, ಟೆಮೊಫಾಸ್ ಔಷಧಿಯಿಂದ ಲಾರ್ವಾ ನಾಶ ಕಾರ್ಯ ಆರಂಭಿಸಲಾಗಿದೆ. ಆರೋಗ್ಯ ಇಲಾಖೆ ಸಿಬ್ಬಂದಿ ಪರಿಶೀಲನೆ ಕಾರ್ಯದಲ್ಲಿ ತೊಡಗಿದ್ದು ಈ ಸಂದರ್ಭ ದಲ್ಲಿ ಸಾರ್ವಜನಿಕರು ಸಹಕಾರ ನೀಡಬೇಕು. ಈಗಾಗಲೇ ಡೆಂಗೆ ಪ್ರಕರಣ ಗಳು ಖಚಿತಪಟ್ಟ ಮನೆ ಹಾಗೂ ಆ ಮನೆಯ ಸುತ್ತಮುತ್ತ ಫಾಗಿಂಗ್ ಮಾಡಲು ಸ್ಥಳೀಯರು ಅವಕಾಶ ನೀಡಬೇಕು~ ಎಂದು ಪಾಲಿಕೆ ಆಯುಕ್ತ ವೈ.ಎಸ್.ಪಾಟೀಲ ತಿಳಿಸಿದ್ದಾರೆ.

`ಡೆಂಗೆ ಜ್ವರಕ್ಕೆ ಕಾರಣವಾಗುವ ಈಡೀಸ್ ಇಜಿಪ್ಟಿಯಾ ಎಂಬ ಸೊಳ್ಳೆಗಳು ಸ್ವಚ್ಛವಾದ ನೀರಿನಲ್ಲಿ ಉತ್ಪತ್ತಿಯಾಗಿ ಹಗಲು ವೇಳೆಯಲ್ಲಿ ಕಚ್ಚುತ್ತವೆ.

ಸೊಳ್ಳೆಗಳ ಉತ್ಪತ್ತಿ ನಿಯಂತ್ರಿಸಲು ನೀರಿನ ತೊಟ್ಟಿ, ಡ್ರಮ್, ಸಿಮೆಂಟ್ ಟ್ಯಾಂಕ್, ಹೂದಾನಿ, ವಾಟರ್ ಫಿಲ್ಟರ್, ಏರ್‌ಕಂಡೀಷನರ್, ತೆಂಗಿನಚಿಪ್ಪುಗಳು, ನಿರುಪಯುಕ್ತ ಟೈರುಗಳು, ಪ್ಲಾಸ್ಟಿಕ್ ತುಕಡಿ ಹಾಗೂ ಬಾಟಲಿಗಳಲ್ಲಿ ಸೊಳ್ಳೆ ಮರಿಗಳು ಉತ್ಪತ್ತಿಯಾಗುತ್ತವೆ. ಇಂಥ ವುಗಳಲ್ಲಿ ನೀರು ನಿಲ್ಲದಂತೆ ಸ್ವಚ್ಛ ಗೊಳಿಸಬೇಕು. ಮನೆಯೊಳಗೆ ಶೇಖರಣೆ ಮಾಡಿದ ನೀರಿನ ಪಾತ್ರೆಗಳ ಮೇಲೆ ಮುಚ್ಚಳ ಹಾಕಬೇಕು.

ನೀರು ಸಂಗ್ರಹಿಸು ವಂಥವುಗಳನ್ನು ಕನಿಷ್ಠ ಐದು ದಿನಕ್ಕೊಮ್ಮೆ ತೊಳೆದು, ಒಣಗಿಸಿ ನೀರು ಶೇಖರಿಸಬೇಕು. ಸೊಳ್ಳೆಗಳು ಕಚ್ಚು ವುದನ್ನು ತಡೆಗಟ್ಟಲು ಸೊಳ್ಳೆಪರದೆ ಉಪಯೋಗಿ ಸಬೇಕು. ಸಂಜೆ ಕಿಟಕಿ ಹಾಗೂ ಬಾಗಿಲುಗಳನ್ನು ಮುಚ್ಚಬೇಕು~ ಎಂದು ಅವರು ತಿಳಿಸಿದ್ದಾರೆ.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry