ಭಾನುವಾರ, ಜೂನ್ 13, 2021
21 °C

17 ರಿಂದ ರಾಯಲ್ ಕ್ರಿಕೆಟ್ ಟೂರ್ನಿ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಬೀದರ್: ಕರ್ನಾಟಕ ರಾಜ್ಯ ಕ್ರಿಕೆಟ್ ಸಂಸ್ಥೆಯ ಸಹಯೋಗದಲ್ಲಿ ನಗರದ ರಾಯಲ್ ಕ್ರಿಕೆಟ್ ಕ್ಲಬ್ ಅಖಿಲ ಭಾರತ ಮಟ್ಟದ “ರಾಯಲ್ ಕ್ರಿಕೆಟ್ ಟ್ರೋಫಿ~ಯನ್ನು ಮಾರ್ಚ್17 ರಿಂದ ನಗರದ ನೆಹರು ಕ್ರೀಡಾಂಗಣದಲ್ಲಿ ಆಯೋಜಿಸಿದೆ ಎಂದು ಕ್ಲಬ್ ಕಾರ್ಯದರ್ಶಿ ಡಾ. ರಾಜಕುಮಾರ ಕರ್ವೆ ತಿಳಿಸಿದ್ದಾರೆ.ಬಹು ವರ್ಷಗಳ ನಂತರ ಜಿಲ್ಲೆಯಲ್ಲಿ ಇದೇ ಮೊದಲ ಬಾರಿಗೆ ಬೃಹತ್ ಪ್ರಮಾಣದ ಕ್ರಿಕೆರ್ಟ್ ಟೂರ್ನಿ ನಡೆಯಲಿದ್ದು, ಇದಕ್ಕೆ ಕೆಎಸ್‌ಸಿಎ ಸಹಯೋಗ ನೀಡಿ ಟೂರ್ನಿಗೆ ಮಾನ್ಯತೆ ನೀಡಿದೆ ಎಂದು ಹೇಳಿದ್ದಾರೆ.

 ಟೂರ್ನಿಯಲ್ಲಿ ಮಹಾರಾಷ್ಟ್ರ, ಆಂಧ್ರಪ್ರದೇಶ, ಗೋವಾ ಹಾಗೂ ತಮಿಳುನಾಡು ಸೇರಿದಂತೆ ರಾಜ್ಯದ ಬೆಂಗಳೂರು, ಮೈಸೂರು, ಹುಬ್ಬಳ್ಳಿ, ವಿಜಾಪುರ, ರಾಯಚೂರು, ಗುಲ್ಬರ್ಗ ಮತ್ತು ಬೀದರ್ ಜಿಲ್ಲೆ ಒಟ್ಟು 17 ತಂಡಗಳು ಭಾಗವಹಿಸಲಿವೆ ಎಂದು ತಿಳಿಸಿದ್ದಾರೆ. ಬೀದರ್‌ನ ರಾಯಲ್ ಕ್ರಿಕೆಟ್ ಕ್ಲಬ್ ಆಯೋಜಿಸಿರುವ ಈ ಟೂರ್ನಿಗೆ ಇಲ್ಲಿನ ಬಿಡಿಸಿಡಿಎ ಮತ್ತು ಬಿಸಿಸಿಎ ಕ್ರಿಕೆಟ್ ಸಂಘಟನೆಗಳು ಸಹಕಾರ ನೀಡಿದ್ದು, ಟೂರ್ನಿಯ ಯಶಸ್ಸಿಗೆ ಜಿಲ್ಲೆಯ ಬಹುತೇಕ ಸಂಘಟನೆಗಳು ಹೆಗಲು ನೀಡಲು ಮುಂದೆ ಬಂದಿವೆ ಎಂದು ಹೇಳಿದ್ದಾರೆ.ಮಾ. 17 ರಂದು ರಾಯಲ್‌ಸ್ಟಾರ್ ಖ್ಯಾತಿಯ ಚಿತ್ರನಟ ಅಜಯರಾವ್ ಟೂರ್ನಿ ಉದ್ಘಾಟಿಸಲಿದ್ದಾರೆ. ಶಾಸಕರು, ಚುನಾಯಿತ ಪ್ರತಿನಿಧಿಗಳು, ಅಧಿಕಾರಿಗಳು ಹಾಗೂ ಗಣ್ಯರು ಪಾಲ್ಗೊಳ್ಳಲಿದ್ದಾರೆ.ಜಾವಗಲ್ ಶ್ರೀನಾಥ ಭೇಟಿ: ಬೀದರ್‌ನಲ್ಲಿ ಆಯೋಜಿಸಲಾಗಿರುವ “ರಾಯಲ್ ಟ್ರೋಫಿ2012~ ಟೂರ್ನಿಗೆ ಮಾನ್ಯತೆ ನೀಡುವುದು ಸೇರಿದಂತೆ ಟೂರ್ನಿಯ ಫೈನಲ್ ದಿನದಂದು ಜಿಲ್ಲೆಗೆ ಭೇಟಿ ನೀಡುವಂತೆ ಜಿಲ್ಲಾ ಉಸ್ತುವಾರಿ ಸಚಿವ ರೇವು ನಾಯಕ ಬೆಳಮಗಿ ಹಾಗೂ ಶಾಸಕ ರಹೀಮ್ ಖಾನ್ ನೇತೃತ್ವದಲ್ಲಿ ಈಚೆಗೆ ನಿಯೋಗವೊಂದು ತೆರಳಿ ಕೆಎಸ್‌ಸಿಎ ಅಧ್ಯಕ್ಷ ಅನೀಲ ಕುಂಬ್ಳೆ ಮತ್ತು ಕಾರ್ಯದರ್ಶಿ ಜಾವಗಲ್ ಶ್ರೀನಾಥ್ ಅವರಿಗೆ ಮನವಿ ಸಲ್ಲಿಸಿತು.ಬೀದರ್ ಜಿಲ್ಲೆಗೆ ಕೆಎಸ್‌ಸಿಎ ಪ್ರಮುಖರು ಭೇಟಿ ನೀಡುವ ಕುರಿತು ಒಂದೆರಡು ದಿನಗಳಲ್ಲಿ ತಿಳಿಸುವದಾಗಿ ಶ್ರೀನಾಥ್ ಹೇಳಿದರು. ರಾಹುಲ್ ದ್ರಾವಿಡ್ ಹಾಗೂ ವಿಜಯ ಭಾರದ್ವಾಜ್ ಇದ್ದರು.ನಿಯೋಗದಲ್ಲಿ ಕ್ಲಬ್‌ನ ಅಧ್ಯಕ್ಷ ಪವನ್, ಕಾರ್ಯದರ್ಶಿ ಡಾ. ರಾಜಕುಮಾರ್ ಕರ್ವೆ, ಕೃಷ್ಣ ಕುಲಕರ್ಣಿ, ಅಪ್ಪಾರಾವ್ ಸೌದಿ ಮತ್ತಿತರರು ಇದ್ದರು.

 

ಫಲಿತಾಂಶ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.