ಶನಿವಾರ, 20 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

17 ಸಾವಿರ ಗಡಿ ಇಳಿದ ಸೂಚ್ಯಂಕ

Last Updated 18 ಅಕ್ಟೋಬರ್ 2011, 19:30 IST
ಅಕ್ಷರ ಗಾತ್ರ

ಮುಂಬೈ (ಪಿಟಿಐ): ಮಂಗಳವಾರದ ವಹಿವಾಟಿನಲ್ಲಿ ಮುಂಬೈ ಷೇರುಪೇಟೆ ಸಂವೇದಿ ಸೂಚ್ಯಂಕ 277 ಅಂಶಗಳಷ್ಟು ಇಳಿಕೆ ಕಂಡು 17 ಸಾವಿರದ ಗಡಿ ಇಳಿದಿದೆ.

ದೇಶದ ಅತಿ ದೊಡ್ಡ ಮಾಹಿತಿ ತಂತ್ರಜ್ಞಾನ ಕಂಪೆನಿ ಟಾಟಾ ಕನ್ಸಲ್ಟನ್ಸಿಯ (ಟಿಸಿಎಸ್) ಎರಡನೆಯ ತ್ರೈಮಾಸಿಕ ಅವಧಿಯ ಹಣಕಾಸು ಸಾಧನೆ ಮಾರುಕಟ್ಟೆಯ ನಿರೀಕ್ಷೆ ಮಟ್ಟಕ್ಕೆ ಇಲ್ಲದಿರುವುದು ಮತ್ತು ಇತರ ಜಾಗತಿಕ ಸಂಗತಿಗಳು ವಹಿವಾಟಿನ ಮೇಲೆ ಪ್ರತಿಕೂಲ ಪರಿಣಾಮ ಬೀರಿದವು. ಈ ಹಿನ್ನೆಲೆಯಲ್ಲಿ ದಿನದಂತ್ಯದಲ್ಲಿ ಸೂಚ್ಯಂಕ 16,748 ಅಂಶಗಳಿಗೆ ವಹಿವಾಟು ಕೊನೆಗೊಳಿಸಿತು.

ಕಳೆದ ತ್ರೈಮಾಸಿಕ ಅವಧಿಗೆ ಹೋಲಿಸಿದರೆ `ಟಿಸಿಎಸ್~ನ ನಿವ್ವಳ ಲಾಭ ಶೇ 6ರಷ್ಟು ಮಾತ್ರ ಚೇತರಿಸಿಕೊಂಡಿದೆ. ದಿನದ ವಹಿವಾಟಿನಲ್ಲಿ `ಟಿಸಿಎಸ್~ ಷೇರು ದರಗಳು ಶೇ 7.71ರಷ್ಟು ಇಳಿಕೆ ಕಂಡವು.

ದೇಶದ ಶೇ 85ರಷ್ಟು ಐ.ಟಿ ವರಮಾನ ಅಮೆರಿಕ ಮತ್ತು ಯೂರೋಪ್ ಮಾರುಕಟ್ಟೆಗಳಿಂದ ಬರುತ್ತವೆ. ಜಾಗತಿಕ ಆರ್ಥಿಕ ಬಿಕ್ಕಟ್ಟಿನ ಹಿನ್ನೆಲೆಯಲ್ಲಿ `ಐಟಿ~ ಕಂಪೆನಿಗಳ ವರಮಾನ ಕುಸಿಯುವ  ಭೀತಿ ಮೂಡಿದ್ದು, ಮುಂಬೈಷೇರುಪೇಟೆಯ ಮೇಲೂ ಇದು  ಪರಿಣಾಮ ಬೀರುವ ಸಾಧ್ಯತೆ ಇದೆ ಎಂದು ತಜ್ಞರು ಹೇಳಿದ್ದಾರೆ.

ರಾಷ್ಟ್ರೀಯ ಷೇರು ಸೂಚ್ಯಂಕ `ನಿಫ್ಟಿ~ ಕೂಡ ದಿನದ ವಹಿವಾಟಿನಲ್ಲಿ 80 ಅಂಶಗಳಷ್ಟು ಕುಸಿತ ಕಂಡು, 5,037 ಅಂಶಗಳಿಗೆ ವಹಿವಾಟು ಕೊನೆಗೊಳಿಸಿತು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT