ಶುಕ್ರವಾರ, 29 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

17 ಸಾವಿರಕ್ಕಿಂತ ಕೆಳಕ್ಕಿಳಿದ ಸೂಚ್ಯಂಕ

Last Updated 23 ಜುಲೈ 2012, 19:30 IST
ಅಕ್ಷರ ಗಾತ್ರ

ಮುಂಬೈ(ಪಿಟಿಐ): ಸ್ಪೇನ್ ಸಾಲದ ಬಿಕ್ಕಟ್ಟಿನ ಕಿಡಿ ವಿಶ್ವದ ವಿವಿಧೆಡೆಯ ಷೇರು ಮಾರುಕಟ್ಟೆಗಳಿಗೂ ತಟ್ಟಿದೆ. ಇದೇ ಪರಿಣಾಮವಾಗಿ ಮುಂಬೈ ಷೇರುಪೇಟೆ ಸಂವೇದಿ ಸೂಚ್ಯಂಕ ಸೋಮವಾರದ ವಹಿವಾಟಿನಲ್ಲಿ 281 ಅಂಶಗಳಷ್ಟು ಹಾನಿ ಅನುಭವಿಸಿದೆ.

ದಿನದ ವಹಿವಾಟಿನ ಆರಂಭದಲ್ಲಿಯೇ ಕುಸಿತದ ಹಾದಿಯಲ್ಲಿದ್ದ ಸೂಚ್ಯಂಕ ದಿನದ ಅಂತ್ಯಕ್ಕೆ 17 ಸಾವಿರ ಅಂಶಗಳ ಗಡಿಯಿಂದ ಕೆಳಕ್ಕಿಳಿಯಿತು. ಕಳೆದ ಒಂದು ತಿಂಗಳ ಹಿಂದಿನ ಮಟ್ಟವಾದ 16877 ಅಂಶಗಳಲ್ಲಿ ಕೊನೆಗೊಂಡಿತು.

ಸೋಮವಾರ ಜಾಗತಿಕ ಷೇರುಪೇಟೆಯಲ್ಲಿ 1,800 ಸೂಚ್ಯಂಕಗಳು ಕುಸಿತ ಕಂಡಿವೆ. 990 ಸೂಚ್ಯಂಕಗಳು ಮಾತ್ರ ಏರಿಕೆ ಪಡೆದಿವೆ.  ಮುಂಬೈ ಷೇರುಪೇಟೆಯಲ್ಲಿ ಮಾರುತಿ ಸುಜುಕಿ ಮತ್ತು ಸ್ಟರ್ ಲೈಟ್ ಮೌಲ್ಯ ಶೇ 5ರಷ್ಟು ಇಳಿದಿವೆ.

ಸಮಾಜವಾದಿ ಪಕ್ಷದ ಅಧ್ಯಕ್ಷ ಮುಲಾಯಂ ಸಿಂಗ್ ಯಾದವ್ ಮತ್ತಿತರರು ಬಹು ಬ್ರಾಂಡ್ ಚಿಲ್ಲರೆ ವಹಿವಾಟು ಕ್ಷೇತ್ರದಲ್ಲಿ `ಎಫ್‌ಡಿಐ~ ಹೂಡಿಕೆಗೆ ವಿರೋಧ ವ್ಯಕ್ತಪಡಿಸಿದ ಹಿನ್ನೆಲೆಯಲ್ಲಿ ಐಸಿಐಸಿಐ, ಎಚ್‌ಡಿಎಫ್‌ಸಿ ಬ್ಯಾಂಕ್, ಟಾಟಾ ಮೋಟಾರ್ಸ್, ಆರ್‌ಐಎಲ್, ಇನ್ಫೋಸಿಸ್, ಐಟಿಸಿ ಷೇರು ದರಗಳು ಶೇ 2ರಿಂದ 8ರಷ್ಟು ಕುಸಿತ ಕಂಡವು.

ರಾಷ್ಟ್ರೀಯ ಷೇರು ಸೂಚ್ಯಂಕ `ನಿಫ್ಟಿ~ 87 ಅಂಶಗಳಷ್ಟು ಕುಸಿತ ಕಂಡು 5,117 ಅಂಶಗಳಿಗೆ ವಹಿವಾಟು ಕೊನೆಗೊಳಿಸಿತು.

ಸ್ಪೇನ್‌ನ ಆರ್ಥಿಕಸ್ಥಿತಿ ತೀವ್ರವಾಗಿ ಕುಸಿದಿದ್ದು, ಮೂರ್ಸಿಯಾ, ವೆಲ್ನೇಸಿಯಾ ಸೇರಿದಂತೆ ಹಲವು ಪ್ರಾಂತ್ಯಗಳು ಸರ್ಕಾರದ ತುರ್ತು ನೆರವಿಗೆ ಮನವಿ ಮಾಡಿವೆ. ಈ ಸಂಗತಿ ಜಾಗತಿಕ ಷೇರು ಪೇಟೆಗಳ ಮೇಲೆ ತೀವ್ರ ಪರಿಣಾಮ ಬೀರಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT