18ಕ್ಕೆ ಕೊಡಗು ವ್ಯಾಪಾರ ಅಭಿವೃದ್ಧಿ ಶೃಂಗಸಭೆ

7

18ಕ್ಕೆ ಕೊಡಗು ವ್ಯಾಪಾರ ಅಭಿವೃದ್ಧಿ ಶೃಂಗಸಭೆ

Published:
Updated:

ಮೈಸೂರು: ಕರ್ನಾಟಕ ವಾಣಿಜ್ಯ ಮತ್ತು ಕೈಗಾರಿಕಾ ಮಹಾಸಂಸ್ಥೆಯು ಡಿ.18 ರಂದು `ಕೊಡಗು ವ್ಯಾಪಾರ ಅಭಿವೃದ್ಧಿ ಶೃಂಗಸಭೆ'ಯನ್ನು ಆಯೋಜಿಸಿದೆ.ಕೊಡಗು ಜಿಲ್ಲೆಯಲ್ಲಿ ಅಪಾರ ಅವಕಾಶಗಳ ಲಭ್ಯತೆ ಮನಗಂಡು ಈ ಶೃಂಗಸಭೆಯನ್ನು ಆಯೋಜಿಸ ಲಾಗಿದೆ ಎಂದು ಕರ್ನಾಟಕ ವಾಣಿಜ್ಯ ಮತ್ತು ಕೈಗಾರಿಕಾ ಮಹಾಸಂಸ್ಥೆ ಅಧ್ಯಕ್ಷ ಕೆ.ಶಿವಷಣ್ಮುಗಂ ಮಂಗಳವಾರ ಪತ್ರಿಕಾಗೋಷ್ಠಿಯಲ್ಲಿ ತಿಳಿಸಿದರು.ಅಂದು ಬೆಳಿಗ್ಗೆ 11 ಗಂಟೆಗೆ ಮಡಿಕೇರಿಯ ರೇಸ್‌ಕೋರ್ಸ್ ರಸ್ತೆಯಲ್ಲಿರುವ ಕಾವೇರಿ ಸಭಾಂಗಣದಲ್ಲಿ ಶೃಂಗಸಭೆಯನ್ನು ಮುಖ್ಯಮಂತ್ರಿ ಜಗದೀಶ ಶೆಟ್ಟರ್ ಉದ್ಘಾಟಿಸಲಿದ್ದು, ಸ್ಪೀಕರ್ ಕೆ.ಜಿ.ಬೋಪಯ್ಯ ಅಧ್ಯಕ್ಷತೆ ವಹಿಸುವರು. ಕೈಗಾರಿಕಾ ಸಚಿವ ಮುರುಗೇಶ ನಿರಾಣಿ, ಜಿಲ್ಲಾ ಉಸ್ತುವಾರಿ ಸಚಿವ ಅಪ್ಪಚ್ಚು ರಂಜನ್, ಪ್ರವಾಸೋದ್ಯಮ ಸಚಿವ ಆನಂದ್‌ಸಿಂಗ್ ಸೇರಿದಂತೆ ಹಲವು ಜನಪ್ರತಿನಿಧಿಗಳು ಹಾಜರಿರುತ್ತಾರೆ ಎಂದು ಹೇಳಿದರು.10 ಸಾವಿರ ಉದ್ಯೋಗ: ರಾಜ್ಯ ಸರ್ಕಾರ ಮತ್ತು ಖಾಸಗಿ ಕ್ಷೇತ್ರದ ಪ್ರತಿನಿಧಿಗಳಿಗೆ ಕೈಗಾರಿಕೆ, ಮೂಲ ಸೌಕರ್ಯ, ಪ್ರವಾಸೋದ್ಯಮ, ಶಿಕ್ಷಣ, ತೋಟಗಾ ರಿಕೆ, ಆಹಾರ ಸಂಸ್ಕರಣೆ ಕ್ಷೇತ್ರಗಳು ಕುರಿತಂತೆ ವಿಚಾರ ವಿನಿಮಯಕ್ಕಾಗಿ ವೇದಿಕೆಯನ್ನು ಕಲ್ಪಿಸಲಾಗುತ್ತಿದೆ.ಇದರಲ್ಲಿ 50 ರಿಂದ 60 ಮಂದಿ ಉದ್ಯಮಿಗಳು ಭಾಗ ವಹಿಸಲಿದ್ದು, ಅಂದಾಜು 500 ರಿಂದ 750 ಕೋಟಿ ರೂಪಾಯಿಗಳಷ್ಟು ಬಂಡವಾಳ ಹೂಡಿಕೆಯಾ ಗುವ ನಿರೀಕ್ಷೆ ಇದ್ದು, 10 ಸಾವಿರ ಉದ್ಯೋಗ ಸೃಷ್ಟಿ ಯಾಗಲಿದೆ ತಿಳಿಸಿದರು.ಮೂಲ ಸೌಕರ್ಯಕ್ಕೆ ಆದ್ಯತೆ: ಕೇರಳಕ್ಕೆ ರಸ್ತೆ ಸಂಪರ್ಕ ಕಲ್ಪಿಸಲು ವಿಶೇಷ ಒತ್ತು ನೀಡುವುದು, ಪ್ರಮುಖ ಹೆದ್ದಾರಿಗಳು ಮತ್ತು ನವ ಮಂಗಳೂರು ಬಂದರಿಗೆ ಸಂಪರ್ಕಕ್ಕೆ ವ್ಯವಸ್ಥೆ ಮಾಡುವುದು ಎಂದ ಅವರು, ಮೈಸೂರು- ಕುಶಾಲನಗರ ರೈಲ್ವೆ ಸಂಪರ್ಕ ಯೋಜನೆ ಸರ್ವೆ ಕಾರ್ಯ ಮುಗಿದಿದ್ದು, ರೂ. 667 ಕೋಟಿ ಅಂದಾಜನ್ನು ರೈಲ್ವೆ ಮಂಡಳಿಗೆ ಅ.12 ರಂದು ಸಲ್ಲಿಸಲಾಗಿದೆ. ರೈಲ್ವೆ ಸಂಪರ್ಕದಿಂದ ಪ್ರವಾಸೋದ್ಯ ಮಕ್ಕೆ ಇಂಬು ಕೊಟ್ಟಂತೆ ಆಗುತ್ತದೆ.ಸೋಮವಾರ ಪೇಟೆಯಲ್ಲಿ ಸಣ್ಣ ಪ್ರಮಾಣದ ವಿಮಾನ ನಿಲ್ದಾಣಕ್ಕೆ ಜಮೀನನ್ನು ಗುರುತಿಸಲಾಗಿದ್ದು, ಈ ಯೋಜನೆಯು ಪೂರ್ಣಗೊಂಡಲ್ಲಿ ಕೊಡಗು ಜಿಲ್ಲೆಯು ವಾಯು ಯಾನದಲ್ಲಿ ಸ್ಥಾನ ಪಡೆದುಕೊಳ್ಳಲಿದೆ ಎಂದರು.ಶೃಂಗಸಭೆಯಲ್ಲಿ ಕೊಡಗು ವಾಣಿಜ್ಯೋದ್ಯಮಕ್ಕೆ ಲಭ್ಯವಿರುವ ಅವಕಾಶಗಳು ಕುರಿತು ಚರ್ಚಿಸಲಾಗು  ವುದು. ನವ ಮಂಗಳೂರು ಬಂದರು ಟ್ರಸ್ಟ್ ರಫ್ತು ಕುರಿತಂತೆ ಪ್ರಾತ್ಯಕ್ಷಿಕೆ ಇರುತ್ತದೆ. ಕೊಡಗು ಜಿಲ್ಲೆಯ ಕೈಗಾರಿಕೆ ಅಭಿವೃದ್ಧಿ ಕುರಿತಂತೆ ಪರಿಣಿತರು  ವಿಷಯ ಮಂಡಿಸುವರು ಎಂದು ವಿವರ ನೀಡಿದರು.ಕಾರ್ಪೋರೇಷನ್ ಬ್ಯಾಂಕ್, ನಬಾರ್ಡ್ ಮುಂತಾದ ಹಣಕಾಸು ಸಂಸ್ಥೆಗಳನ್ನು ಸಹ ಆಹ್ವಾನಿಸ ಲಾಗಿದೆ. ಜಿಲ್ಲೆಯ ಸರ್ವತೋಮುಖ, ಸಮತೋಲನ ಹಾಗೂ ಸುಸ್ಥಿರ ಅಭಿವೃದ್ಧಿಗಾಗಿ ಕೊಡಗು ಜಿಲ್ಲಾ ವಾಣಿಜ್ಯೋದ್ಯಮ ಸಂಸ್ಥೆಯ ಸಹಯೋಗ ದೊಂದಿಗೆ ಹಾಗೂ ಕೈಗಾರಿಕಾ ಮತ್ತು ಕರ್ನಾಟಕ ಸರ್ಕಾರದ ವಾಣಿಜ್ಯ ಇಲಾಖೆ, ಪ್ರವಾಸೋದ್ಯಮ ಇಲಾಖೆ, ರಾಜ್ಯ ಪರಿಸರ ಮಾಲಿನ್ಯ ಮಂಡಳಿ, ಕೆಎಸ್‌ಎಸ್‌ಐಡಿಸಿ, ಮೂಲ ಸೌಕರ್ಯ ಅಭಿವೃದ್ಧಿ ಇಲಾಖೆ ಸಹಕಾರದೊಂದಿಗೆ ಈ ಶೃಂಗಸಭೆಯನ್ನು ಆಯೋಜಿಸ ಲಾಗಿದೆ ಎಂದು ಹೇಳಿದರು.ಕೊಡಗು ಜಿಲ್ಲೆ ಪ್ರಾಕೃತಿಕ ಸೌಂದರ್ಯಕ್ಕೆ ಪ್ರಸಿದ್ಧಿ. ಆದ್ದರಿಂದ ಅಲ್ಲಿನ ಪರಿಸರಕ್ಕೆ ಯಾವುದೇ ರೀತಿಯ ತೊಂದರೆ ಆಗದಂತೆ ಯೋಜನೆ ರೂಪಿಸಲಾಗುತ್ತದೆ. ಈ ಸಂಬಂಧ ಜಿಲ್ಲೆಯ ಜನಪ್ರತಿನಿಧಿಗಳು, ಸಂಘ ಸಂಸ್ಥೆ ಗಳನ್ನು ವಿಶ್ವಾಸಕ್ಕೆ ತೆಗೆದುಕೊಳ್ಳಲಾಗುತ್ತದೆ ಎಂದರು.ಕರ್ನಾಟಕ ವಾಣಿಜ್ಯ ಮತ್ತು ಕೈಗಾರಿಕಾ ಮಹಾಸಂಸ್ಥೆ ಹಿರಿಯ ಉಪಾಧ್ಯಕ್ಷ ಆರ್. ಶಿವಕುಮಾರ್, ಮೈಸೂರು ವಾಣಿಜ್ಯ ಮತ್ತು ಕೈಗಾರಿಕೆ ಸಂಸ್ಥೆ ಅಧ್ಯಕ್ಷ ಸುಧಾಕರ ಎಸ್.ಶೆಟ್ಟಿ, ಕಾರ್ಯದರ್ಶಿ ಆರ್.ಎಂ.ಸತೀಶ್ ಇದ್ದರು.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry