18ಕ್ಕೆ ಪರಿಶಿಷ್ಟ ಮೋರ್ಚಾ ಸಮಾವೇಶ

7

18ಕ್ಕೆ ಪರಿಶಿಷ್ಟ ಮೋರ್ಚಾ ಸಮಾವೇಶ

Published:
Updated:

ಬೆಂಗಳೂರು: ಬಿಜೆಪಿ ರಾಜ್ಯ ಘಟಕದ ಪರಿಶಿಷ್ಟ ಜಾತಿಗಳ ಮೋರ್ಚಾ ವತಿಯಿಂದ ಇದೇ 18ರಂದು ಮೈಸೂರಿನಲ್ಲಿ ಕಾರ್ಯಕರ್ತರ ಸಮಾವೇಶ ಆಯೋಜಿಸಲಾಗಿದೆ.   ರಾಜ್ಯದ ಪ್ರತಿ ಬೂತ್ ಮಟ್ಟದಿಂದ ಒಟ್ಟು 50 ಸಾವಿರ ಕಾರ್ಯಕರ್ತರು ಸಮಾವೇಶದಲ್ಲಿ ಪಾಲ್ಗೊಳ್ಳಲಿದ್ದಾರೆ ಎಂದು ಮೋರ್ಚಾದ ರಾಜ್ಯ ಘಟಕದ ಪ್ರಧಾನ ಕಾರ್ಯದರ್ಶಿ ವೆಂಕಟೇಶ್ ಮೌರ್ಯ ಮಂಗಳವಾರ ಇಲ್ಲಿ ಪತ್ರಿಕಾಗೋಷ್ಠಿಯಲ್ಲಿ ತಿಳಿಸಿದರು.ವಿಜಾಪುರ,  ಬೀದರ್  ಹಾಗೂ ಬೆಂಗಳೂರಿನಿಂದ ಇದೇ 11ರಂದು ರಥಯಾತ್ರೆ ಆರಂಭವಾಗಲಿದೆ. ಎಲ್ಲ ರಥಗಳು ಎಂಟರಿಂದ ಹತ್ತು ಜಿಲ್ಲೆಗಳಲ್ಲಿ ಸಂಚರಿಸಿ 17ರಂದು ಮೈಸೂರು ತಲುಪಲಿವೆ ಎಂದರು. ಮೋರ್ಚಾದ ರಾಜ್ಯ ಘಟಕದ ಉಪಾಧ್ಯಕ್ಷ ಚಿ.ನಾ. ರಾಮು ಮಾತನಾಡಿದರು.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry