ಬುಧವಾರ, ಜೂನ್ 16, 2021
28 °C

18ರಂದು ಕುಡು ವಕ್ಕಲಿಗರ ಸಮಾವೇಶ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಗುಲ್ಬರ್ಗ: ತ್ಯಾಗವೀರ ಸಿರಸಂಗಿ ಲಿಂಗರಾಜ ಸ್ಮಾರಕ ಭವನ ಉದ್ಘಾಟನೆ ಹಾಗೂ ಕುಡು ವಕ್ಕಲಿಗರ ಸಮಾವೇಶ ಧಾರವಾಡದ ಲಿಂಗರಾಜ ವಿದ್ಯಾರ್ಥಿ ನಿಲಯದ ಆವರಣದಲ್ಲಿ ಇದೇ 18ರಂದು ಬೆಳಿಗ್ಗೆ 9 ಗಂಟೆಗೆ ಹಮ್ಮಿಕೊಳ್ಳಲಾಗಿದೆ ಎಂದು ಕುಡು ವಕ್ಕಲಿಗ ಸಮಾಜದ ಜಿಲ್ಲಾ ಘಟಕದ ಅಧ್ಯಕ್ಷ ಸಿ.ಪಿ. ಅಂಕಲಗಿ ತಿಳಿಸಿದರು.ಬುಧವಾರ ಇಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿ, ಸುತ್ತೂರಿನ ಶಿವರಾತ್ರಿ ದೇಶಿಕೇಂದ್ರ ಸ್ವಾಮೀಜಿ, ಧಾರವಾಡದ ಮಲ್ಲಿಕಾರ್ಜುನ ಸ್ವಾಮೀಜಿ ಹಾಗೂ ಇಂಡಿಯ ಸ್ವರೂಪಾನಂದ ಸ್ವಾಮೀಜಿ ಸಾನ್ನಿಧ್ಯದಲ್ಲಿ ಜರುಗಲಿರುವ ಈ ಸಮಾವೇಶವನ್ನು ಸಚಿವ ಜಗದೀಶ ಶೆಟ್ಟರ್ ಉದ್ಘಾಟಿಸಲಿದ್ದು, ಮಾಜಿ ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪ ಲಿಂಗರಾಜ ಸ್ಮಾರಕ ಭವನವನ್ನು ಉದ್ಘಾಟಿಸಲಿದ್ದಾರೆ ಎಂದು ಹೇಳಿದರು.

ಗುಲ್ಬರ್ಗ ಜಿಲ್ಲೆಯಿಂದ ಸಮಾಜದ ಸುಮಾರು 10 ಸಾವಿರ ಜನರು ಈ ಸಮಾವೇಶದಲ್ಲಿ ಪಾಲ್ಗೊಳ್ಳಲಿದ್ದಾರೆ ಎಂದು ವಿವರಿಸಿದರು.ಕೃಷಿಯನ್ನೇ ನಂಬಿ ಬದುಕುತ್ತಿರುವ ಈ ಸಮಾಜಕ್ಕೆ ರಾಜಕೀಯ, ಆರ್ಥಿಕ ಮತ್ತು ಶೈಕ್ಷಣಿಕವಾಗಿ ಕಡೆಗಣಿಸಲಾಗಿದ್ದು, ಕುಡು ವಕ್ಕಲಿಗ ಸಮಾಜವನ್ನು 2(ಎ)ಗೆ ಸೇರ್ಪಡೆ ಮಾಡಬೇಕು ಎಂದು ಸರ್ಕಾರವನ್ನು ಆಗ್ರಹಿಸಿದರು.ವಿಜಾಪುರ, ಗುಲ್ಬರ್ಗ, ಗದಗ, ಬೀದರ್ ಜಿಲ್ಲೆಗಳು ಸೇರಿ ರಾಜ್ಯದಲ್ಲಿ ಕುಡು ವಕ್ಕಲಿಗ ಸಮಾಜದ ಸುಮಾರು 22 ಲಕ್ಷ ಜನರಿದ್ದರೂ ಸಮಾಜ ತೀರಾ ಹಿಂದುಳಿದಿದೆ. ಸಮಾಜದಲ್ಲಿರುವವರು ತೀರಾ ಮುಗ್ಧರಾಗಿದ್ದು, ಸರ್ಕಾರ ಕೂಡಲೇ ಇವರಿಗೆ ಸೂಕ್ತ ವ್ಯವಸ್ಥೆ ಕಲಿಸಬೇಕು ಎಂದು ಮನವಿ ಮಾಡಿದರು.ಸಂಗಣ್ಣಗೌಡ ಪಾಟೀಲ, ಗುರುಲಿಂಗಪ್ಪಗೌಡ ಪಾಟೀಲ ಆಂದೋಲಾ, ದೇವೇಗೌಡ ತೆಲ್ಲೂರ, ಶಂಕರಗೌಡ ಪಾಟೀಲ, ಕರಬಸಪ್ಪ ಮಸರಗೊಂಡ, ಬಾಬುರಾವ ಬಿರಾದಾರ, ಹರೀಶ ಪಾಟೀಲ, ರಾಜಶೇಖರ ಹೊಸಮನಿ, ಗುರುರಾಜ ಪಾಟೀಲ ಮತ್ತಿತರರು ಸುದ್ದಿಗೊಷ್ಠಿಯಲ್ಲಿ ಉಪಸ್ಥಿತರಿದ್ದರು.

ಫಲಿತಾಂಶ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.