18 ರಿಂದ ಇಂಗ್ಲೆಂಡ್‌ನಲ್ಲಿ ಟೂರ್ನಿವಿಶ್ವ ಬಿಲಿಯರ್ಡ್ಸ್‌ಗೆ ಪಂಕಜ್

7

18 ರಿಂದ ಇಂಗ್ಲೆಂಡ್‌ನಲ್ಲಿ ಟೂರ್ನಿವಿಶ್ವ ಬಿಲಿಯರ್ಡ್ಸ್‌ಗೆ ಪಂಕಜ್

Published:
Updated:
18 ರಿಂದ ಇಂಗ್ಲೆಂಡ್‌ನಲ್ಲಿ ಟೂರ್ನಿವಿಶ್ವ ಬಿಲಿಯರ್ಡ್ಸ್‌ಗೆ ಪಂಕಜ್

ಬೆಂಗಳೂರು (ಪಿಟಿಐ): ಪಂಕಜ್ ಅಡ್ವಾಣಿ ಅವರು ಅಂತರರಾಷ್ಟ್ರೀಯ ಸ್ನೂಕರ್ ಚಾಂಪಿಯನ್‌ಷಿಪ್‌ನ ಬದಲು ವಿಶ್ವ ಬಿಲಿಯರ್ಡ್ಸ್ ಚಾಂಪಿಯನ್‌ಷಿಪ್‌ನಲ್ಲಿ ಪಾಲ್ಗೊಳ್ಳಲು ನಿರ್ಧರಿಸಿದ್ದಾರೆ.ಇವೆರಡು ಟೂರ್ನಿಗಳು ಒಂದೇ ಅವಧಿಯಲ್ಲಿ ನಡೆಯಲಿರುವ ಕಾರಣ ಪಂಕಜ್ ಇಕ್ಕಟ್ಟಿಗೆ ಸಿಲುಕಿದ್ದರು. ಕೊನೆಗೆ ಸ್ನೂಕರ್ ಬದಲು    ಬಿಲಿಯರ್ಡ್ಸ್ ಚಾಂಪಿಯನ್‌ಷಿಪ್‌ನಲ್ಲಿ ಆಡುವ ತೀರ್ಮಾನ ಕೈಗೊಂಡರು. ಇತ್ತೀಚೆಗಷ್ಟೇ ವೃತ್ತಿಪರ ಸ್ನೂಕರ್ ಆಟಗಾರರಾಗಿ ಬದಲಾಗಿದ್ದ ಪಂಕಜ್ ಅಕ್ಟೋಬರ್ 28ರಿಂದ ನವೆಂಬರ್ 4ರ ವರೆಗೆ ಚೀನಾದ ಚೆಂಗ್ಡುವಿನಲ್ಲಿ ನಡೆಯುವ ಅಂತರರಾಷ್ಟ್ರೀಯ ಸ್ನೂಕರ್ ಚಾಂಪಿಯನ್‌ಷಿಪ್‌ನಲ್ಲಿ ಪಾಲ್ಗೊಳ್ಳಲು ನಿರ್ಧರಿಸಿದ್ದರು.ಅಂದಾಜು ಐದು ಕೋಟಿ ರೂ. ಬಹುಮಾನ ಮೊತ್ತದ ಈ ಟೂರ್ನಿ ವಿಶ್ವದ `ಅತ್ಯಂತ ಶ್ರೀಮಂತ ಸ್ನೂಕರ್ ಟೂರ್ನಿ~ ಎನಿಸಿದೆ. ಆದರೆ ವಿಶ್ವ ಬಿಲಿಯರ್ಡ್ಸ್ ಚಾಂಪಿಯನ್‌ಷಿಪ್ ಅಕ್ಟೋಬರ್ 18 ರಿಂದ 28ರ ವರೆಗೆ ಇಂಗ್ಲೆಂಡ್‌ನ ಲೀಡ್ಸ್‌ನಲ್ಲಿ ನಡೆಯಲಿದೆ. ಈ ಕಾರಣ ಅವರು ಸ್ನೂಕರ್ ಬದಲು,   ಬಿಲಿಯರ್ಡ್ಸ್ ಚಾಂಪಿಯನ್‌ಷಿಪ್‌ನಲ್ಲಿ ಆಡಲು ನಿರ್ಧರಿಸಿದ್ದಾರೆ.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry