18 ಸಾವಿರ ಗಡಿ ಇಳಿದ ಸೂಚ್ಯಂಕ

7

18 ಸಾವಿರ ಗಡಿ ಇಳಿದ ಸೂಚ್ಯಂಕ

Published:
Updated:
18 ಸಾವಿರ ಗಡಿ ಇಳಿದ ಸೂಚ್ಯಂಕ

ಮುಂಬೈ (ಪಿಟಿಐ): ಮುಂಬೈ ಷೇರುಪೇಟೆ ಸಂವೇದಿ ಸೂಚ್ಯಂಕವು ಶುಕ್ರವಾರದ ವಹಿವಾಟಿನಲ್ಲಿ 155 ಅಂಶಗಳಷ್ಟು ಕುಸಿತ ಕಂಡಿದ್ದು, 18 ಸಾವಿರದ ಗಡಿಗಿಂತ ಕೆಳಗೆ ಇಳಿದಿದೆ.ಅಂತರರಾಷ್ಟ್ರೀಯ ಮಾರುಕಟ್ಟೆಯಲ್ಲಿ ಕಚ್ಚಾತೈಲದ ಬೆಲೆ ಏರುತ್ತಿರುವುದು  ಪೇಟೆಯಲ್ಲಿ ಸಂಚಲನ ಮೂಡಿಸಿದೆ. ಇದರಿಂದ ಖರೀದಿ ಮತ್ತು ಮಾರಾಟದ ಒತ್ತಡ ಹೆಚ್ಚಿದ್ದು, ಸೂಚ್ಯಂಕ   17,923 ಅಂಶಗಳಿಗೆ ಕುಸಿದಿದೆ.ದಿನದ ವಹಿವಾಟಿನಲ್ಲಿ ಬ್ಯಾಂಕಿಂಗ್, ರಿಯಲ್ ಎಸ್ಟೇಟ್, ತೈಲ ಶುದ್ಧೀಕರಣ ಕಂಪೆನಿಗಳ ಷೇರುಗಳ ಮಾರಾಟ ಒತ್ತಡ ಕಂಡುಬಂತು. ಎಚ್‌ಡಿಎಫ್‌ಸಿ, ಆರ್‌ಐಎಲ್, ಎಲ್‌ಅಂಡ್‌ಟಿ, ಎಸ್‌ಬಿಐ, ಐಸಿಐಸಿಐ ಬ್ಯಾಂಕುಗಳ ಷೇರುಗಳು ನಷ್ಟಕ್ಕೊಳಗಾದವು.ರಾಷ್ಟ್ರೀಯ ಷೇರು ಸೂಚ್ಯಂಕ `ನಿಫ್ಟಿ~ ಕೂಡ 54 ಅಂಶಗಳನ್ನು ಕಳೆದು ಕೊಂಡು 5,429 ಅಂಶಗಳಿಗೆ ವಹಿವಾಟು ಕೊನೆಗೊಳಿಸಿತು.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry