ಗುರುವಾರ , ಫೆಬ್ರವರಿ 25, 2021
17 °C
ಕೊಹ್ಲಿ ಅಬ್ಬರ; ಆಸ್ಟ್ರೇಲಿಯಾ ದಿಟ್ಟ ಉತ್ತರ

189 ರನ್‌ಗಳ ಗೆಲುವಿನ ಗುರಿ ನೀಡಿದ ಭಾರತ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

189 ರನ್‌ಗಳ ಗೆಲುವಿನ ಗುರಿ ನೀಡಿದ ಭಾರತ

ಅಡಿಲೇಡ್‌ (ಪಿಟಿಐ): ವಿರಾಟ್ ಕೊಹ್ಲಿ ಅವರ (90 ರನ್‌, 55ಎ, 9ಬೌ, 2ಸಿ) ಅಬ್ಬರದ ಬ್ಯಾಟಿಂಗ್‌ ನೆರವಿನಿಂದ ಭಾರತವು ಟ್ವೆಂಟಿ–20 ಕ್ರಿಕೆಟ್‌ ಸರಣಿಯ ಮೊದಲ ಪಂದ್ಯದಲ್ಲಿ ಎದುರಾಳಿ ಆಸ್ಟ್ರೇಲಿಯಾಕ್ಕೆ 189 ರನ್‌ಗಳ ಗೆಲುವಿನ ಗುರಿ ನೀಡಿದೆ.

ಗೆಲುವಿನ ಗುರಿ ಬೆನ್ನಟ್ಟಿರುವ ಆತಿಥೇಯ ತಂಡ, 7 ನೇ ಓವರ್ ಅಂತ್ಯಕ್ಕೆ 1 ವಿಕೆಟ್‌ ನಷ್ಟವಿಲ್ಲದೇ 65 ರನ್‌ ಗಳಿಸಿ ಆಡುತ್ತಿದೆ. ಆ್ಯರನ್‌ ಫಿಂಚ್ (31) ಹಾಗು ಸ್ಟೀವನ್ ಸ್ಮಿತ್ (13)  ಕ್ರೀಸ್‌ನಲ್ಲಿದ್ದಾರೆ. ಡೆವಿಡ್‌ ವಾರ್ನರ್‌ (17) ಜಸ್ಪ್ರೀತ್ ಬೂಮ್ರಾ ಎಸೆತದಲ್ಲಿ ಕೊಯ್ಲಿಗೆ ಕ್ಯಾಚ್ ನೀಡಿದರು.

ಓವಲ್ ಕ್ರೀಡಾಂಗಣದಲ್ಲಿ ಮಂಗಳವಾರ ನಡೆದ ಪಂದ್ಯದಲ್ಲಿ ಮಹೇಂದ್ರ ಸಿಂಗ್ ದೋನಿ ನೇತೃತ್ವದ ಬಳಗವು ನಿಗದಿತ ಓವರ್‌ಗಳಲ್ಲಿ ಮೂರು ವಿಕೆಟ್ ಕಳೆದುಕೊಂಡು 188 ರನ್‌ಗಳಿಸಿತು.

ಟಾಸ್‌ ಸೋತು ಬ್ಯಾಟಿಂಗ್ ಅವಕಾಶ ಪಡೆದ ಭಾರತಕ್ಕೆ ಉತ್ತಮ ಆರಂಭ ಲಭಿಸಿತು. ಬೌಂಡರಿಗೆ ಬಾರಿಸುವ ಮೂಲಕ ಖಾತೆ ತೆರೆದ ಆರಂಭಿಕ ಆಟಗಾರ ರೋಹಿತ್ ಶರ್ಮಾ ಅಬ್ಬರಿಸುವ ಸೂಚನೆ ನೀಡಿದರು. 20 ಎಸೆತಗಳಲ್ಲಿ 4 ಬೌಂಡರಿ, 1 ಸಿಕ್ಸರ್ ಸೇರಿದಂತೆ 31ರನ್‌ ಬಾರಿಸಿದರು.

ಆದರೆ, ಐದನೇ ಓವರ್‌ ಬೌಲಿಂಗ್‌ ಮಾಡಿದ ಶೇನ್ ವಾಟ್ಸನ್‌ ಮೊನಚಿನ ದಾಳಿ ಮೂಲಕ ಮೊದಲ ಎಸೆತದಲ್ಲಿ ರೋಹಿತ್‌ ಹಾಗೂ ಐದನೇ ಎಸೆತದಲ್ಲಿ ಶಿಖರ್ ಧವನ್‌ (5) ಅವರ ವಿಕೆಟ್ ಪಡೆದರು.

ಬಳಿಕ ಜತೆಗೂಡಿದ ಕೊಹ್ಲಿ ಹಾಗೂ ಸುರೇಶ್ ರೈನಾ (41ರನ್‌, 34ಎ, 3ಬೌ, 1ಸಿ) ಅಬ್ಬರಿಸಿದರು. ಮೂರನೇ ವಿಕೆಟ್‌ಗೆ ಈ ಜೋಡಿ 134 ರನ್‌ ಸೇರಿಸುವ ಮೂಲಕ ತಂಡವನ್ನು ಅಲ್ಪಮೊತ್ತಕ್ಕೆ ಕುಸಿಯುವ ಭೀತಿಯಿಂದ ಪಾರು ಮಾಡಿತು.

ಆದರೆ, ಕೊನೆಯ ಓವರ್‌ ಬೌಲ್‌ ಮಾಡಿದ ಫಾಕ್ನರ್‌, ರೈನಾ ಅವರ ವಿಕೆಟ್‌ ಪಡೆದರು. ಬಳಿಕ ಬಂದ ದೋನಿ 3 ಎಸೆತಗಳನ್ನು ಎದುರಿಸಿ 11 ರನ್‌ ಬಾರಿಸಿದರು.

ಕೇಂದ್ರ ಬಜೆಟ್ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.