ಶುಕ್ರವಾರ, ಅಕ್ಟೋಬರ್ 18, 2019
28 °C

19ರಿಂದ ಟೂಲ್‌ಟೆಕ್ ಸಮಾವೇಶ

Published:
Updated:

ಬೆಂಗಳೂರು: ವೈವಿಧ್ಯಮಯ ಲೋಹಗಳನ್ನು ವಿವಿಧ ಆಕಾರಗಳಲ್ಲಿ  ರೂಪಿಸುವ  ಉದ್ದಿಮೆ ಮತ್ತು ತಂತ್ರಜ್ಞಾನಕ್ಕೆ ಸಂಬಂಧಿಸಿದ ಇಂಟೆಕ್ಸ್ ಫಾರ್ಮಿಂಗ್ ಮತ್ತು ಟೂಲ್‌ಟೆಕ್ ಸಮಾವೇಶವು ಈ ತಿಂಗಳ 19ರಿಂದ 24ರವರೆಗೆ ನಗರದ ಹೊರ ವಲಯದ `ಬೆಂಗಳೂರು ಅಂತರರಾಷ್ಟ್ರೀಯ ಸಮಾವೇಶ ಕೇಂದ್ರ~ದಲ್ಲಿ ನಡೆಯಲಿದೆ.ಉದ್ಯಮಿಗಳು ಮತ್ತು ಉದ್ಯಮಿಗಳ ನಡುವೆ (ಬಿಟುಬಿ) ವಹಿವಾಟು ನಡೆಯಲು ನೆರವಾಗುವ ಉದ್ದೇಶದ ಈ ಅಂತರರಾಷ್ಟ್ರೀಯ ಪ್ರದರ್ಶನವು ದಕ್ಷಿಣ ಏಷ್ಯಾದಲ್ಲಿಯೇ ದೊಡ್ಡ ಸಮಾವೇಶವಾಗಿದೆ. ಕೇಂದ್ರದ ಭಾರಿ ಕೈಗಾರಿಕಾ ಸಚಿವ ಪ್ರಫುಲ್ ಪಟೇಲ್ ಅವರು ಸಮ್ಮೇಳನ ಉದ್ಘಾಟಿಸಲಿದ್ದಾರೆ ಎಂದು ಭಾರತೀಯ ಯಂತ್ರೋಪಕರಣ ತಯಾರಿಕಾ ಸಂಘದ (ಐಎಂಟಿಎಂಎ) ಮಾಧ್ಯಮ ಅಧ್ಯಕ್ಷ ಶೈಲೇಶ್ ಸೇಠ್ ಇಲ್ಲಿ ತಿಳಿಸಿದರು.

Post Comments (+)