19 ಜನ ದುರ್ಮರಣ

7

19 ಜನ ದುರ್ಮರಣ

Published:
Updated:

ಬೆಂಗಳೂರು: ರಾಜ್ಯದ ವಿವಿಧೆಡೆ ಶನಿ­ವಾರ ನಡೆದ ಪ್ರತ್ಯೇಕ ಘಟನೆಗಳಲ್ಲಿ 19 ಮಂದಿ ದುರ್ಮರಣಕ್ಕೆ ಈಡಾಗಿದ್ದಾರೆ.

ಹುಮನಾಬಾದ್‌ನ ಬುಗ್ಗಿ ಬಸವಣ್ಣ ಕೆರೆಯಲ್ಲಿ ಮೂವರು ಬಾಲಕಿಯರು ಮತ್ತು ಒಬ್ಬ ಬಾಲಕ ಜಲಸಮಾಧಿ­ಯಾ­ಗಿದ್ದಾರೆ. ಧಾರ­ವಾಡದ ಗಾಂಧಿನಗರ­ದಲ್ಲಿ ಗಣೇಶ ವಿಸ­ರ್ಜನೆಗೆ ನಿರ್ಮಿಸಿದ್ದ  ಹೊಂಡಕ್ಕೆ ಬಿದ್ದು 2 ಮಕ್ಕಳು ಸತ್ತಿದ್ದಾರೆ.ಕನಕಪುರ ರಸ್ತೆ ಸೋಮನಹಳ್ಳಿ ಬಳಿ ಬಸ್‌–ಕಾರು ಡಿಕ್ಕಿಯಲ್ಲಿ ಐವರು, ಬೆಂಗ­ಳೂ­ರಿನಲ್ಲಿ ನಡೆದ ಪ್ರತ್ಯೇಕ ರಸ್ತೆ ಅಪಘಾತಗಳಲ್ಲಿ ಇಬ್ಬರು, ವರ್ತೂರು ಕೆರೆಯಲ್ಲಿ ಮುಳುಗಿ ಇಬ್ಬರು, ಮಳೆ­ಯಿಂದ ಮನೆ ಗೋಡೆ ಕುಸಿದು ದೊಮ್ಮ­ಲೂರಿನಲ್ಲಿ ಇಬ್ಬರು ಮತ್ತು ತುಮಕೂರು ಜಿಲ್ಲೆ ಚಿ ನಾ ಹಳ್ಳಿ ತಾಲ್ಲೂಕು ಕಾತ್ರಿಕೆ­ಹಾಳದಲ್ಲಿ ಒಬ್ಬರು, ಸಿಡಿಲು ಬಡಿದು ಹುಬ್ಬಳ್ಳಿ ಬಳಿ ಕುಸುಗಲ್‌ನಲ್ಲಿ ಒಬ್ಬ ಬಾಲಕ ಸಾವನ್ನಪ್ಪಿದ್ದಾರೆ.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry