19 ದಿನವೂ ಮುಂದುವರಿದ ಉಪವಾಸ ಸತ್ಯಾಗ್ರಹ

7

19 ದಿನವೂ ಮುಂದುವರಿದ ಉಪವಾಸ ಸತ್ಯಾಗ್ರಹ

Published:
Updated:

ಮುದ್ದೇಬಿಹಾಳ: ತಾಲ್ಲೂಕಿನ ಪ್ರಮುಖ ರಸ್ತೆಗಳ ಸಂಪೂರ್ಣ ಸುಧಾರಣೆಗಾಗಿ ಜಯ ಕರ್ನಾಟಕ ಸಂಘಟನೆ ನಡೆಸುತ್ತಿರುವ ಸತ್ಯಾಗ್ರಹಕ್ಕೆ ಸಾರ್ವಜನಿಕರಿಂದ ವ್ಯಾಪಕ ಬೆಂಬಲ ವ್ಯಕ್ತವಾಗುತ್ತಿದೆ.ಯಾವುದೇ ಸಂಘಟನೆಯವರು ಬೆಂಬಲಿಸಿ ಸತ್ಯಾಗ್ರಹದಲ್ಲಿ ಪಾಲ್ಗೊಳ್ಳಲು ಬಯಸಿದರೆ ಅದಕ್ಕೂ ಸರದಿಗೆ ಕಾಯಬೇಕಾಗಿದೆ. ಏಕೆಂದರೆ ಹಲವಾರು ಸಂಘಟನೆಗಳು ಈಗಾಗಲೇ ಇಂಥಿಂಥ ದಿನ ನಾವು ಪ್ರತಿಭಟನೆ ನಡೆಸಲು ಸಿದ್ಧರಿದ್ದೇವೆ ಎಂದು ಈಗಾಗಲೇ ಸಂಘಟಕರಿಗೆ ತಿಳಿಸಿದ್ದಾರೆ. ಹೀಗಾಗಿ ಹೊಸದಾಗಿ ಬೆಂಬಲ ವ್ಯಕ್ತಪಡಿಸುವ ಸಂಘಟನೆಗಳು ತಮ್ಮ ಸರದಿಗೆ ಕಾಯಬೇಕಾಗಿದೆ.ಭಾನುವಾರಕ್ಕೆ ಉಪವಾಸ ಸತ್ಯಾಗ್ರಹ 19ದಿನಕ್ಕೆ ಕಾಲಿರಿಸಿದ್ದು, ಬಂಗಾರ (ಸರಾಫ್) ವ್ಯಾಪಾರಸ್ಥರು ತಮ್ಮ ಎಂದಿನ ವ್ಯಾಪಾರ ವಹಿವಾಟು ಬಂದ್ ಮಾಡಿ ಪ್ರತಿಭಟನೆ ನಡೆಸಿ ಸತ್ಯಾಗ್ರಹದಲ್ಲಿ ಪಾಲ್ಗೊಂಡರು.ಬೋರಮಲ್ಲ ಓಸ್ವಾಲ್, ಸುನಿಲ ಇಲ್ಲೂರ, ಸಂಜೀವ ಓಸ್ವಾಲ್, ಈರಣ್ಣ ಪತ್ತಾರ, ಮುನ್ನಾ ಓಸ್ವಾಲ್, ನೀಲೇಶ ಓಸ್ವಾಲ್, ವಿಜಯ ಬಡಿಗೇರ, ನಾರಾಯಣ ಬಳಬಟ್ಟಿ, ಶಿವಾನಂದ ನಂದರಗಿ, ರವಿ ಗೂಳಿ, ಮೌನೇಶ ಪತ್ತಾರ, ನಾರಾಯಣ ದೋಟಿಹಾಳ, ಸುಭಾಸ ಹಡಲಗೇರಿ, ಗುರುರಾಜ ಪತ್ತಾರ, ಪ್ರಕಾಶ ಪತ್ತಾರ, ಮೌನೇಶ ಹಂದ್ರಾಳ, ಶಂಕ್ರಪ್ಪ ಪತ್ತಾರ, ಮಳಿಯಪ್ಪ ಪತ್ತಾರ, ಕೇಶವ ಪತ್ತಾರ, ಗಂಗಾಧರ ಪತ್ತಾರ, ಕಾಳಪ್ಪ ಪತ್ತಾರ, ರಾಮಚಂದ್ರ ಪತ್ತಾರ, ಸದಾಶಿವ ಬಡಿಗೇರ, ಗುಂಡಪ್ಪ ಪತ್ತಾರ. ಮೌನೇಶ ಪತ್ತಾರ ಇವರೊಂದಿಗೆ ಜಯ ಜರ್ನಾಟಕ ಸಂಘಟನೆಯ ಅಧ್ಯಕ್ಷ  ಮಾರುತಿ ಹಿಪ್ಪರಗಿ, ಪ್ರಕಾಶ ಸಂಗಮ, ಸಿದ್ದರಾಜ ಹೊಳಿ, ಪವನ ಬಳ್ಳೊಳ್ಳಿ, ರಾಜು ತುಂಬಗಿ ಮೊದಲಾದವರು ಪಾಲ್ಗೊಂಡಿದ್ದರು.ಶನಿವಾರ ನಡೆದ ಉಪವಾಸ ಸತ್ಯಾಗ್ರಹದಲ್ಲಿ ಪಟ್ಟಣದ ಬಟ್ಟೆ ವ್ಯಾಪಾರಸ್ಥರಾದ ಶ್ರೀಪಾಲ ಪೋರ‌್ವಾಲ್, ಪವನ ಓಸ್ವಾಲ್, ಜೀತೇಂದ್ರ ಓಸ್ವಾಲ್, ಮಹೇಂದ್ರ ಓಸ್ವಾಲ್, ಉಮೇಶ ಲೋಕರೆ, ಶ್ರೇಣಿಕ ಪೋರ‌್ವಾಲ್, ಎಸ್.ಪಿ.ಶಹಾ, ವಾಸುದೇವ ಶಾಸ್ತ್ರಿ, ಅಶೋಕ ರೇವಡಿ, ಮೋಹನ ಹಂಚಾಟೆ, ಪವನಪುತ್ರ ಓಸ್ವಾಲ, ಹೀರಾಚಂದ ಓಸ್ವಾಲ್ ಮೊದಲಾದವರು ಪಾಲ್ಗೊಂಡಿದ್ದರು.ಇವರೊಂದಿಗೆ ಪಟ್ಟಣದ  ವೈದ್ಯರು ಸಹ ತಮ್ಮ ವೃತ್ತಿಗೆ ಬಿಡುವು ನೀಡಿ ಕೆಲ ಹೊತ್ತು ಸತ್ಯಾಗ್ರಹದಲ್ಲಿ ಪಾಲ್ಗೊಂಡು  ಬೆಂಬಲ ವ್ಯಕ್ತಪಡಿಸಿದರು.ಆರ್.ಆರ್.ಪದಕಿ, ಡಿ.ಬಿ.ಓಸ್ವಾಲ, ಎಸ್.ಎ. ಭೋಸಲೆ, ಜಿ.ಕೆ.ಹೊಕ್ರಾಣಿ, ಎ.ಎಂ. ಮುಲ್ಲಾ, ಎಸ್.ಬಿ.ವಡವಡಗಿ, ವೀರೇಶ ಪಾಟೀಲ, ವೀರೇಶ ಇಟಗಿ, ಎಸ್.ಎ. ತೊಂಡಿಹಾಳ, ಸಿ.ಕೆ. ಶಿವಯೋಗಿಮಠ, ಎಂ.ಜಿ.ಅಂಗಡಿ, ವಿ.ಸಿ. ಗೂಳಿ, ಆನಂದ ಚೌಧರಿ, ಬೀಳಗಿ ಉಪಸ್ಥಿತರಿದ್ದರು.ತನಿಖೆಗೆ ಆಗ್ರಹ: ಈಗ ಕೆ.ಬಿ.ಜೆ.ಎನ್.ಎಲ್. ಅಧಿಕಾರಿಗಳು ಮುದ್ದೇಬಿಹಾಳ ತಾಲ್ಲೂಕಿನ ರಸ್ತೆಗಳಿಗೆ ಇಂತಿಷ್ಟು ಲಕ್ಷ ಹಣ ಖರ್ಚು ಮಾಡಿರುವುದಾಗಿ ಲೆಕ್ಕ ಹೇಳುತ್ತಿದ್ದು, ಅದು ತನಿಖೆಯಾಗ ಬೇಕು. ಕೆಲಸ ನಡೆದದ್ದು ಎಲ್ಲಿ, ಎಷ್ಟು ಎಂಬುದು ಜನತೆಗೆ ತಿಳಿಯಬೇಕು,  ಗುತ್ತಿಗೆದಾರರಾಗಲಿ, ಅಥವಾ ಅಧಿ ಕಾರಿಗಳಾಗಲಿ ಇದರಲ್ಲಿ ಶ್ಯಾಮೀಲಾ ಗಿದ್ದರೆ ಅವರ ವಿರುದ್ಧ ಕ್ರಮ ಜರುಗಿಸ ಬೇಕೆಂದು ಎ.ಪಿ.ಎಂ.ಸಿ. ಉಪಾಧ್ಯಕ್ಷ ವೈ.ಎಚ್.ವಿಜಯಕರ ಆಗ್ರಹಿಸಿದ್ದಾರೆ.

 

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry