ಶುಕ್ರವಾರ, 29 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

19ರಂದು ಮಧುಮಂಥನ ಕಾರ್ಯಕ್ರಮ

Last Updated 16 ಫೆಬ್ರುವರಿ 2012, 7:45 IST
ಅಕ್ಷರ ಗಾತ್ರ

ಶಿವಮೊಗ್ಗ: ಪ್ರಸ್ತುತ ಪ್ರತಿಷ್ಠಾನ, ಲಲಿತಾ ಮಹಿಳಾ ಒಕ್ಕೂಟ ಸಂಯುಕ್ತ ಆಶ್ರಯದಲ್ಲಿ ಫೆ.19ರಂದು ಸಂಜೆ 5ಕ್ಕೆ ನಗರದ ಅಶ್ವತ್ಥನಗರದ ಮುಚ್ಚಿಗರ ಸಮುದಾಯ ಭವನದಲ್ಲಿ `ಮಧುಮಂಥನ~ (ಮಧುಮೇಹ ತಡೆಗೆ ಆಯುರ್ವೇದ ಸಲಹೆ), ಮಾಹಿತಿ ಶಿಬಿರ ಹಾಗೂ ಚಿತ್ರ ಮಾಹಿತಿ ಸಂಕಲನ ಬಿಡುಗಡೆ ಕಾರ್ಯಕ್ರಮ ಹಮ್ಮಿಕೊಂಡಿದೆ.

ಜಿಲ್ಲಾ ಆಯುಷ್ ಅಧಿಕಾರಿ ಎಚ್. ಮಹಮದ್ ಹುಸೇನ್ ಅವರು `ಮಧುಮೇಹ, ಮಧುಮೇಹ ಗೊಂದಲಗಳು ಮತ್ತು ಪಥ್ಯಾಹಾರಗಳ~ ಕುರಿತು ಚಿತ್ರ-ಮಾಹಿತಿ ಸಂಕಲನದ ಮೂರು ಪುಸ್ತಕಗಳನ್ನು ಬಿಡುಗಡೆಗೊಳಿಸುವರು ಎಂದು ಆಯುರ್ ಲೈಫ್‌ನ ಆಯುರ್ವೇದ ತಜ್ಞ ಡಾ.ಕೆ.ವಿ. ವೆಂಕಟಕೃಷ್ಣ ಬುಧವಾರ ಸುದ್ದಿಗೋಷ್ಠಿಯಲ್ಲಿ ತಿಳಿಸಿದರು.

ಎಲ್‌ಬಿಎಸ್ ನಗರ ವಾರ್ಡ್‌ನ ಸದಸ್ಯ ವಿಶ್ವನಾಥ್ ಅಧ್ಯಕ್ಷತೆ ವಹಿಸಲಿದ್ದು,  ಆಯುರ್ವೇದ ತಜ್ಞ ಡಾ.ಕೆ.ವಿ. ವೆಂಕಟಕೃಷ್ಣ ಉಪಸ್ಥಿತರಿರುವರು ಎಂದರು.

ಮಧುಮೇಹಿಗಳಿಗೆ ಶಿಬಿರದಲ್ಲಿ ನಿಯಮಿತ ಆಹಾರ ಪಥ್ಯ ಪಾಲಿಸುವುದರಿಂದ ಹೇಗೆ? ಮಧುಮೇಹ ನಿಯಂತ್ರಿಸುವ ಅಥವಾ ಕಾಯಿಲೆ ಬಾರದಂತೆ ತಡೆಯುವ ಕುರಿತು ಮಾಹಿತಿ ನೀಡಲಾಗುವುದು ಎಂದರು.
ಆಸ್ಪತ್ರೆ ವತಿಯಿಂದ ಡಯಾಬಿಟಿಕ್ ಕಾರ್ಡ್ ಸಹ ಪರಿಚಯಿಸಲಾಗುತ್ತಿದ್ದು,  ಅದರ ಮೌಲ್ಯ ್ಙ 500 ಆಗಿದೆ. ಇದರಿಂದ ಒಂದು ವರ್ಷದವರೆಗೆ ಉಚಿತ ಸಲಹೆ ಹಾಗೂ ಮಧುಮೇಹದ ಔಷಧಿಗಳ ಮೇಲೆ ಶೇ. 10ರಷ್ಟು ರಿಯಾಯ್ತಿ ನೀಡಲಾಗುವುದು ಎಂದರು.

ಪ್ರಸ್ತುತ ಪ್ರತಿಷ್ಠಾನ ಸ್ಥಾನೀಯ ನಿರ್ದೇಶಕರಾದ ಡಾ.ಚಿತ್ರಲೇಖಾ ವಿ. ಕೃಷ್ಣ, ಡಾ.ರಂಜನಿ ಬಿದರಳ್ಳಿ, ಪುಷ್ಪಾಶೆಟ್ಟಿ , ಹೇಮಾ ಅಪ್ಪಾಜಿ, ಲಲಿತಾ ಡೊಂಗ್ರೆ  ಪತ್ರಿಕಾಗೋಷ್ಠಿಯಲ್ಲಿ ಉಪಸ್ಥಿತರಿದ್ದರು.
 

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT