ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

19ರಿಂದ ಟೂಲ್‌ಟೆಕ್ ಸಮಾವೇಶ

Last Updated 7 ಜನವರಿ 2012, 19:30 IST
ಅಕ್ಷರ ಗಾತ್ರ

ಬೆಂಗಳೂರು: ವೈವಿಧ್ಯಮಯ ಲೋಹಗಳನ್ನು ವಿವಿಧ ಆಕಾರಗಳಲ್ಲಿ  ರೂಪಿಸುವ  ಉದ್ದಿಮೆ ಮತ್ತು ತಂತ್ರಜ್ಞಾನಕ್ಕೆ ಸಂಬಂಧಿಸಿದ ಇಂಟೆಕ್ಸ್ ಫಾರ್ಮಿಂಗ್ ಮತ್ತು ಟೂಲ್‌ಟೆಕ್ ಸಮಾವೇಶವು ಈ ತಿಂಗಳ 19ರಿಂದ 24ರವರೆಗೆ ನಗರದ ಹೊರ ವಲಯದ `ಬೆಂಗಳೂರು ಅಂತರರಾಷ್ಟ್ರೀಯ ಸಮಾವೇಶ ಕೇಂದ್ರ~ದಲ್ಲಿ ನಡೆಯಲಿದೆ.

ಉದ್ಯಮಿಗಳು ಮತ್ತು ಉದ್ಯಮಿಗಳ ನಡುವೆ (ಬಿಟುಬಿ) ವಹಿವಾಟು ನಡೆಯಲು ನೆರವಾಗುವ ಉದ್ದೇಶದ ಈ ಅಂತರರಾಷ್ಟ್ರೀಯ ಪ್ರದರ್ಶನವು ದಕ್ಷಿಣ ಏಷ್ಯಾದಲ್ಲಿಯೇ ದೊಡ್ಡ ಸಮಾವೇಶವಾಗಿದೆ. ಕೇಂದ್ರದ ಭಾರಿ ಕೈಗಾರಿಕಾ ಸಚಿವ ಪ್ರಫುಲ್ ಪಟೇಲ್ ಅವರು ಸಮ್ಮೇಳನ ಉದ್ಘಾಟಿಸಲಿದ್ದಾರೆ ಎಂದು ಭಾರತೀಯ ಯಂತ್ರೋಪಕರಣ ತಯಾರಿಕಾ ಸಂಘದ (ಐಎಂಟಿಎಂಎ) ಮಾಧ್ಯಮ ಅಧ್ಯಕ್ಷ ಶೈಲೇಶ್ ಸೇಠ್ ಇಲ್ಲಿ ತಿಳಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT