2ಜಿ:ಸೋನಿಯಾ ಹೊಣೆ; ರಾಜಾ ಬಲಿ

7

2ಜಿ:ಸೋನಿಯಾ ಹೊಣೆ; ರಾಜಾ ಬಲಿ

Published:
Updated:

ನವದೆಹಲಿ (ಪಿಟಿಐ): 2ಜಿ ಹಗರಣದಲ್ಲಿ ಸುಪ್ರೀಂಕೋರ್ಟ್ ತೀರ್ಪನ್ನು ಸ್ವಾಗತಿಸಿರುವ ಬಿಜೆಪಿ ಹಿರಿಯ ನಾಯಕ ಎಲ್.ಕೆ. ಅಡ್ವಾಣಿ, ಆದರೆ ಇದರಲ್ಲಿ ಮಾಜಿ ಟೆಲಿಕಾಂ ಸಚಿವ ಎ. ರಾಜಾ ಅವರನ್ನು ಮಾತ್ರ ಏಕೈಕ ಅಪರಾಧಿಯಾಗಿ ಪರಿಗಣಿಸಿರುವ ಬಗ್ಗೆ ಅಚ್ಚರಿ ವ್ಯಕ್ತಪಡಿಸಿದ್ದಾರೆ.`ಹಗರಣಗಳ ದಾಖಲೆಯಲ್ಲಿ ನಿಜವಾಗಿಯೂ ಕಾಂಗ್ರೆಸ್ ಅಧ್ಯಕ್ಷೆ ಸೋನಿಯಾ ಗಾಂಧಿ ಅವರನ್ನು ಯಾರೊಬ್ಬರೂ ಸೋಲಿಸಲಾರರು~ ಎಂದು ಅಡ್ವಾಣಿ ಬುಧವಾರ ತಮ್ಮ ಬ್ಲಾಗ್‌ನಲ್ಲಿ ವ್ಯಂಗ್ಯವಾಗಿ ಬರೆದುಕೊಂಡಿದ್ದಾರೆ.

`ಈ ವಂಚನೆಯ ಹಣಕಾಸು ವಹಿವಾಟಿಗೆ ರಾಜಾ ಒಬ್ಬರೇ ಹೊಣೆಗಾರರೇ ಮತ್ತು ಅವರೊಬ್ಬರೇ ಅಪರಾಧಿಯೇ~ ಎಂಬ ಮುಖ್ಯ ಪ್ರಶ್ನೆಗೆ ನ್ಯಾಯಾಂಗವೇ ಈಗ ಉತ್ತರವನ್ನು ನಿರ್ಧರಿಸಬೇಕಿದೆ ಎಂದಿದ್ದಾರೆ. `ಯುಪಿಎ ಸರ್ಕಾರ ಮಾಡಿರುವಷ್ಟು ಸಂಖ್ಯೆಯ ಮತ್ತು ಪ್ರಮಾಣದ ಭ್ರಷ್ಟಾಚಾರವನ್ನು ಸ್ವಾತಂತ್ರ್ಯಾ ನಂತರದ ಯಾವ ಸರ್ಕಾರವೂ ಮಾಡಿಲ್ಲ~ ಎಂದು ಟೀಕಿಸಿದ್ದಾರೆ.`ಇದಕ್ಕೆಲ್ಲ ಆಡಳಿತದ ನಿಯಂತ್ರಣ ಹೊಂದಿರುವ ಸೋನಿಯಾ ಅವರೇ ಹೊಣೆಗಾರರು~ ಎಂದು ಅವರು ದೂಷಿಸಿದ್ದಾರೆ.  `ಕ್ರಿಕೆಟ್ ಪಂದ್ಯಾವಳಿ ಮಾದರಿಯ ಸ್ಪೆಕ್ಟ್ರಂ ಹಗರಣವನ್ನು ಬಯಲಿಗೆಳೆದ ಜನತಾಪಕ್ಷದ ನಾಯಕ ಸುಬ್ರಮಣಿಯಂ ಸ್ವಾಮಿ ಅವರನ್ನು ಪಂದ್ಯ ಪುರುಷೋತ್ತಮ~ ಎಂದೂ ಅಡ್ವಾಣಿ ಅವರು ಬಣ್ಣಿಸಿದ್ದಾರೆ.

 

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry