ಮಂಗಳವಾರ, ಮೇ 11, 2021
19 °C

2ಜಿ: ಜಸ್ವಂತ್ ಹೇಳಿಕೆ ದಾಖಲು

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ನವದೆಹಲಿ,(ಪಿಟಿಐ): 2ಜಿ ತರಂಗಾಂತರ ಹಂಚಿಕೆಗೆ ಸಂಬಂಧಿಸಿದ ಮಾಹಿತಿ ಕಲೆ ಹಾಕುತ್ತಿರುವ ಸಿಬಿಐ, ಶನಿವಾರ ಬಿಜೆಪಿಯ ಹಿರಿಯ ಮುಖಂಡ ಮತ್ತು ಮಾಜಿ ಸಚಿವ ಜಸ್ವಂತ್ ಸಿಂಗ್ ಅವರ ಹೇಳಿಕೆಯನ್ನು ದಾಖಲಿಸಿಕೊಂಡಿದೆ. ಸಿಂಗ್ ಅವರ ಹೇಳಿಕೆ ದಾಖಲಿಸಿಕೊಳ್ಳುವ ಕಾರ್ಯ ಈಗ ಮುಕ್ತಾಯವಾಗಿದೆ ಎಂದು ಸಿಬಿಐ ಮೂಲಗಳು ತಿಳಿಸಿವೆ.ಜಸ್ವಂತ್ ಸಿಂಗ್ ಅವರು ಎನ್‌ಡಿಎ ಆಡಳಿತದ ಕಾಲದಲ್ಲಿ ಹಣಕಾಸು ಸಚಿವರಾಗಿದ್ದರು ಹಾಗೂ ತರಂಗಾಂತರ ಹಂಚಿಕೆಯ ನಿರ್ಧಾರದ ಸಚಿವರ ತಂಡದ ಮುಖ್ಯಸ್ಥರಾಗಿ ಕಾರ್ಯ ನಿರ್ವಹಿಸಿದ್ದರು.2001ರಿಂದ 2007ರ ಅವಧಿಯಲ್ಲಿ ದೂರಸಂಪರ್ಕ ಖಾತೆಯ ಸಚಿವರಾಗಿದ್ದವರ ಪಾತ್ರದ ಬಗ್ಗೆ ಸಿಬಿಐ ಪ್ರಾಥಮಿಕ ತನಿಖೆ ನಡೆಸಿದೆ. ಎನ್‌ಡಿಎ ಆಡಳಿತದಲ್ಲಿ ಅರುಣ್ ಶೌರಿ ಮತ್ತು ಪ್ರಮೋದ್ ಮಹಾಜನ್ ಅವರು ದೂರಸಂಪರ್ಕ ಖಾತೆಯ ಸಚಿವರಾಗಿದ್ದರು.

 

ನಂತರ ಯುಪಿಎ ಆಡಳಿತದಲ್ಲಿ ದಯಾನಿಧಿ ಮಾರನ್ ಅವರು ಈ ಖಾತೆಯ ಸಚಿವರಾಗಿದ್ದರು. ಸಿಬಿಐ ಈಗಾಗಲೇ ಶೌರಿ ಅವರ ಹೇಳಿಕೆಗಳನ್ನು ದಾಖಲಿಸಿಕೊಂಡಿದೆ.

ಫಲಿತಾಂಶ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.