2ಜಿ ತರಂಗಾಂತರ ಹಗರಣ: ಎಬಿವಿಪಿ ಪ್ರತಿಭಟನೆ

7

2ಜಿ ತರಂಗಾಂತರ ಹಗರಣ: ಎಬಿವಿಪಿ ಪ್ರತಿಭಟನೆ

Published:
Updated:

ರಾಮನಗರ:  ಕಾಮನ್‌ವೆಲ್ತ್ ಕ್ರೀಡಾಕೂಟ ಹಾಗೂ 2-ಜಿ ಸ್ಪೆಕ್ಟ್ರಂ ಹಗರಣಗಳಲ್ಲಿ ನಡೆದಿರುವ ಭ್ರಷ್ಟಾಚಾರ ವಿರೋಧಿಸಿ ಜಿಲ್ಲಾ ಎಬಿವಿಪಿ ಘಟಕ ಬುಧವಾರ ಮಿನಿ ವಿಧಾನಸೌಧದ ಮುಂದೆ ಪ್ರತಿಭಟನೆ ನಡೆಸಿತು.ಕೇಂದ್ರದ ಮಾಜಿ ಸಚಿವ ರಾಜಾ ಅವರ ಬಂಧನದಿಂದ 2-ಜಿ ಸ್ಪೆಕ್ಟ್ರಂ ಹಗರಣದಲ್ಲಿ ಕೇಂದ್ರ ಸರ್ಕಾರದ ಕೈವಾಡ ಇರುವುದು ಸಾಬೀತಾಗಿದೆ ಎಂದು ಘಟಕದ ಸಂಚಾಲಕ ಸುನಿಲ್ ಕುಮಾರ್  ಆರೋಪಿಸಿದರು.ಕೇವಲ ರಾಜಾ ಅವರ ಬಂಧನದಿಂದ 2-ಜಿ ಸ್ಪೆಕ್ಟ್ರಂ ಹಗರಣ ಮುಚ್ಚಿ ಹೋಗಬಾರದು. ಈ ಹಗರಣದ ಪ್ರಮುಖ ಸೂತ್ರದಾರರು ಇದಕ್ಕೆ ಉತ್ತರ ನೀಡಬೇಕು ಎಂದು ಅವರು ಆಗ್ರಹಿಸಿದರು.

ದೆಹಲಿಯಲ್ಲಿ ಕಾಮನ್‌ವೆಲ್ತ್ ಕ್ರೀಡಾಕೂಟವನ್ನು 1,899 ಸಾವಿರ ಕೋಟಿ ರೂಪಾಯಿಯಲ್ಲಿ ನಡೆಸಲು ಕೇಂದ್ರ ಸರ್ಕಾರ ತೀರ್ಮಾನಿಸಿತ್ತು. ಆದರೆ ಈ ಕ್ರೀಡಾಕೂಟದ ಸಂಪೂರ್ಣ ಖರ್ಚು 87 ಸಾವಿರ ಕೋಟಿ ಆಗಿದೆ. ಇದು 2012ರಲ್ಲಿ ಲಂಡನ್‌ನಲ್ಲಿ ನಡೆಯುವ ಒಲಂಪಿಕ್ ಕ್ರೀಡಾಕೂಟದ ಬಜೆಟ್ (ರೂ50 ಸಾವಿರ ಕೋಟಿ)ಗಿಂತ ಹೆಚ್ಚಾಗಿದೆ ಎಂದು ಅವರು ಆಕ್ರೋಶ ವ್ಯಕ್ತಪಡಿಸಿದರು.

ಸರ್ಕಾರಿ ಪಾಲಿಟೆಕ್ನಿಕ್ ಕಾಲೇಜಿನ ನೂರಾರು ವಿದ್ಯಾರ್ಥಿನಿಯರು ಪ್ರತಿಭಟನೆಯಲ್ಲಿ ಪಾಲ್ಗೊಂಡು ಕೇಂದ್ರ ಸರ್ಕಾರದ ವಿರುದ್ಧ ಘೋಷಣೆಗಳನ್ನು ಕೂಗಿ, ಆಕ್ರೋಶ ವ್ಯಕ್ತಪಡಿಸಿದರು.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry