2ಜಿ ತೀರ್ಪು: ಸಾಧಕ-ಬಾಧಕ ಅಧ್ಯಯನ

7

2ಜಿ ತೀರ್ಪು: ಸಾಧಕ-ಬಾಧಕ ಅಧ್ಯಯನ

Published:
Updated:

ದುಬೈ (ಪಿಟಿಐ): 2ಜಿ ಹಗರಣಕ್ಕೆ ಸಂಬಂಧಿಸಿ ಭಾರತದ ಸುಪ್ರೀಂ   ಕೋರ್ಟ್ ನೀಡಿರುವ ತೀರ್ಪಿನ ಸಾಧಕ-ಬಾಧಕಗಳ ಬಗ್ಗೆ ಕೂಲಂಕಷವಾಗಿ ಅಧ್ಯಯನ ನಡೆಸುತ್ತಿರುವುದಾಗಿ ಬಹರೇನ್ ಮೂಲದ ಬಾಟೆಲ್ಕೊ ಟೆಲಿಕಾಂ ಕಂಪೆನಿ ತಿಳಿಸಿದೆ. ಎಸ್-ಟೆಲ್‌ನಲ್ಲಿರುವ ಶೇ43ರಷ್ಟು ಷೇರನ್ನು 175 ದಶಲಕ್ಷ ಡಾಲರ್‌ಗೆ ಮಾರಾಟ ಮಾಡುವುದಾಗಿಯೂ ಪ್ರಕಟಿಸಿದೆ.122 ತರಂಗಾಂತರ ಪರವಾನಗಿಗಳನ್ನು ಸುಪ್ರೀಂಕೋರ್ಟ್ ಫೆಬ್ರುವರಿ 3ರಂದು ರದ್ದುಪಡಿಸಿ ಆದೇಶ ಹೊರಡಿಸಿದೆ. ಆ ಪೈಕಿ ಬಾಟೆಲ್ಕೊ ಬಂಡವಾಳ ಹೂಡಿರುವ ಎಸ್-ಟೆಲ್ ಕಂಪೆನಿ ಕೂಡಾ ಸೇರಿದೆ. ಎಸ್-ಟೆಲ್ ಕಂಪೆನಿಯ 2ಜಿ ತರಂಗಾಂತರ ಪರವಾನಗಿ ಪಡೆಯುವಲ್ಲಿ ತನ್ನ ಪಾತ್ರವಿಲ್ಲ ಎಂದು ಬಾಟೆಲ್ಕೊ ಸ್ಪಷ್ಟಪಡಿಸಿದೆ.ಸುಪ್ರೀಂಕೋರ್ಟ್ ಆದೇಶದ ನಂತರ ಬದಲಾದ ಸ್ಥಿತಿಯಲ್ಲಿ ಅದರ ಪರಿಣಾಮ ಮತ್ತು ಎಸ್-ಟೆಲ್ ವಹಿವಾಟಿನ ಕಾನೂನು ಅವಕಾಶಗಳ ಬಗ್ಗೆ ಸಹ ಪರಿಶೀಲನೆ ನಡೆಸುತ್ತಿರುವುದಾಗಿ ಅದು ಹೇಳಿದೆ.  ಭಾರತದ ಟೆಲಿಕಾಂ ಕ್ಷೇತ್ರದಲ್ಲಿರುವ ಅವಕಾಶಗಳನ್ನು ಬಳಸಿಕೊಂಡು ಮುಂದುವರಿಯುವುದಾಗಿ ಬಾಟೆಲ್ಕೊ ಹೇಳಿದೆ.    

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry