2ಜಿ ಲೈಸೆನ್ಸ್ ರದ್ದು: ಹಾನಿಯ ಅಂದಾಜು 82.7 ಕೋಟಿ ಡಾಲರ್ ನಷ್ಟ

7

2ಜಿ ಲೈಸೆನ್ಸ್ ರದ್ದು: ಹಾನಿಯ ಅಂದಾಜು 82.7 ಕೋಟಿ ಡಾಲರ್ ನಷ್ಟ

Published:
Updated:

 ನವದೆಹಲಿ (ಪಿಟಿಐ): ಸುಪ್ರೀಂಕೋರ್ಟ್ 122 ಸ್ಪೆಕ್ಟ್ರಂ ಪರವಾನಗಿಗಳನ್ನು ರದ್ದುಗೊಳಿಸಿರುವ ಹಿನ್ನೆಲೆಯಲ್ಲಿ ತನ್ನ ಭಾರತೀಯ ಕಾರ್ಯಚಟುವಟಿಕೆಯ 82.7 ಕೋಟಿ ಡಾಲರ್ ಮೌಲ್ಯದ ಆದಾಯವನ್ನು ಹಾನಿಯ ದರವಾಗಿ (ನಷ್ಟದ ಬಾಬ್ತು) ಪರಿಗಣಿಸಿರುವುದಾಗಿ ಹೊಸ ಟೆಲಿಕಾಂ ನಿರ್ವಾಹಕ ಎಟಿಸಲಾಟ್ ಡಿಬಿಯಲ್ಲಿ ಷೇರುದಾರನಾಗಿರುವ ದುಬೈ ಮೂಲದ ಎಟಿಸಲಾಟ್ ಗುರುವಾರ ಪ್ರಕಟಪಡಿಸಿದೆ.ಯುಎಇನ ಎಟಿಸಲಾಟ್ ಮತ್ತು ಭಾರತೀಯ ನಿರ್ವಾಹಕ ಡಿಬಿ ರಿಯಾಲ್ಟಿ ಜಂಟಿಯಾಗಿ ಎಟಿಸಲಾಟ್ ಡಿಬಿ ಸಂಸ್ಥೆಯನ್ನು ನಡೆಸುತ್ತಿದ್ದು, ಇದರಲ್ಲಿ ಎಟಿಸಲಾಟ್ ಶೇ 45ರಷ್ಟು ಷೇರು ಹೊಂದಿದೆ. ಎಟಿಸಲಾಟ್‌ನ 2011ರ ಒಟ್ಟಾರೆ ಹಣಕಾಸು ಹೇಳಿಕೆಯಲ್ಲಿ 4,135ಕೋಟಿ ರೂಪಾಯಿ (82.7ಕೋಟಿ ಡಾಲರ್) ಮೊತ್ತವನ್ನು ನಷ್ಟದ ಶುಲ್ಕವಾಗಿ ಪರಿಗಣಿಸಲು ಆಡಳಿತ ಮಂಡಳಿ ನಿರ್ಧರಿಸಿರುವುದಾಗಿ ಕಂಪೆನಿಯ ಪ್ರಕಟಣೆ ತಿಳಿಸಿದೆ.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry