ಶನಿವಾರ, ಜೂನ್ 12, 2021
24 °C

2ಜಿ ಹಗರಣ: ನಾಲ್ವರು ಕಾರ್ಪೋರೇಟ್ ಪ್ರವರ್ತಕರಿಗೆ ಕೋರ್ಟ್‌ ಎಚ್ಚರಿಕೆ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ನವದೆಹಲಿ (ಐಎಎನ್‌ಎಸ್): 2ಜಿ ತರಂಗಾಂತರ ಹಂಚಿಕೆ ಹಗರಣ ಕುರಿತು ವಿಚಾರಣೆ ನಡೆಸುತ್ತಿರುವ ವಿಶೇಷ ಸಿಬಿಐ ನ್ಯಾಯಾಲಯವು ಶನಿವಾರ ಹಗರಣದ ಆರೋಪಪಟ್ಟಿಯಲ್ಲಿರುವ ಎಸ್ಸಾರ್ ಸಮೂಹದ ಪ್ರವರ್ತಕರಾದ ರವಿ ರೂಯಿಯ ಸೇರಿದಂತೆ ನಾಲ್ವರು ಕಾರ್ಪೋರೆಟ್ ಪ್ರವರ್ತಕರಿಗೆ ಮುಂದಿನ ವಿಚಾರಣೆಗೆ ಖುದ್ದು ಹಾಜರಾಗುವಂತೆ ಎಚ್ಚರಿಕೆ ನೀಡಿದೆ.ಹಗರಣದ ವಿಚಾರಣೆಗೆ ಸಂಬಂಧಿಸಿದಂತೆ ಪದೇ ಪದೇ ನ್ಯಾಯಾಲಯಕ್ಕೆ ಗೈರು ಹಾಜರಾಗುತ್ತಿರುವ ಆರೋಪಿಗಳಾದ ಎಸ್ಸಾರ್ ಸಮೂಹದ ಪ್ರವರ್ತಕರಾದ ರವಿ ರೂಯಿಯ, ಅನ್ಸುಮನ್ ರೂಯಿಯ ಹಾಗೂ ಲೂಪ್ ಟೆಲಿಕಾಂ ಪ್ರವರ್ತಕರಾದ ಕಿರಣ್ ಖೈತಾನ್ ಅವರ ಪತಿ ಐ.ವಿ ಖೈತಾನ್ ಅವರ ವಿಚಾರಣೆಯನ್ನು ನ್ಯಾಯಾಲಯವು ಶನಿವಾರ ನಿಗದಿಪಡಿಸಿತ್ತು.ಆದರೆ ನಾಲ್ವರು ಆರೋಪಿಗಳು ವಿಚಾರಣೆಗೆ ಹಾಜರಾಗಲಿಲ್ಲ ಬದಲು ಅವರ ಪರ ವಕೀಲರು ಹಾಜರಾಗಿ ಹಗರಣದ ವಿಚಾರಣೆಯು ಸುಪ್ರೀಂಕೋರ್ಟ್ ನಲ್ಲಿ ನಡೆಯುತ್ತಿರುವುದರಿಂದ ತಮ್ಮ ಕಕ್ಷಿದಾರರಿಗೆ ಖುದ್ದು ಹಾಜರಿಯಿಂದ ವಿನಾಯಿತಿ ನೀಡುವಂತೆ ಮನವಿ ಮಾಡಿದರು.

ವಕೀಲರ ಮನವಿಯನ್ನು ಮಾನ್ಯ ಮಾಡದ ನ್ಯಾಯಮೂರ್ತಿ ಓ.ಪಿ.ಸೈನಿ ಅವರು ನಾಲ್ವರು ಆರೋಪಿಗಳಿಗೆ ಮುಂದಿನ ವಿಚಾರಣೆ ವೇಳೆ ಹಾಜರಾಗುವಂತೆ ನಿರ್ದೇಶಿಸಿ ವಿಚಾರಣೆಯನ್ನು ಮಾರ್ಚ್ 31ಕ್ಕೆ ಮುಂದೂಡಿದರು.ಇದೇ ವೇಳೆ ಅವರು `ಜನರು ತಮ್ಮ ಸಲಹೆಯನ್ನು ಪಾಲಿಸುವುದಿಲ್ಲ, ಕೊನೆಗೆ ಪರಿತಪಿಸುತ್ತಾರೆ~ ಎಂದು ಹೇಳಿದರು. 

ಫಲಿತಾಂಶ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.