ಗುರುವಾರ , ಆಗಸ್ಟ್ 22, 2019
22 °C

`2ದಿನದಲ್ಲಿ ಪ್ರಕಟಿಸದಿದ್ದರೆ ಪಿಐಎಲ್'

Published:
Updated:

ಚಿಕ್ಕಮಗಳೂರು: ಎರಡು ದಿನ ದೊಳಗೆ ನಗರ ಸ್ಥಳೀಯ ಸಂಸ್ಥೆಗಳ ಅಧ್ಯಕ್ಷ, ಉಪಾಧ್ಯಕ್ಷರ ಮೀಸಲಾತಿ ಪಟ್ಟಿಯನ್ನು ಸರ್ಕಾರ ಪ್ರಕಟಿಸದಿದ್ದರೆ ನ್ಯಾಯಾಲ ಯದಲ್ಲಿ ಸಾರ್ವಜನಿಕ ಹಿತಾಸಕ್ತಿ ಅರ್ಜಿಯನ್ನು ದಾಖಲಿಸುವುದ ರೊಂದಿಗೆ ಹೋರಾಟ ನಡೆಸುವುದು ಅನಿವಾರ್ಯ ಎಂದು ಶಾಸಕ ಬಿಜೆಪಿ ರಾಜ್ಯ ಪ್ರಧಾನ ಕಾರ್ಯದರ್ಶಿ ಸಿ.ಟಿ.ರವಿ ತಿಳಿಸಿದರು.ಬಿಜೆಪಿ ಜಿಲ್ಲಾ ಕಚೇರಿಯಲ್ಲಿ ಸೋಮವಾರ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, ನಗರ ಸ್ಥಳೀಯ ಸಂಸ್ಥೆಗಳಿಗೆ ಚುನಾವಣೆ ನಡೆದು 150 ದಿನಗಳಾದರೂ ಮೀಸಲಾತಿ ಪಟ್ಟಿ ಪ್ರಕಟಿಸುವ ನಿರ್ಧಾರ ಕೈಗೊಳ್ಳದೆ ವಿಕೇಂದ್ರೀಕರಣ ವ್ಯವಸ್ಥೆಗೆ ಕೊಡಲಿಪೆಟ್ಟು ನೀಡಲು ಸರ್ಕಾರ ಆಲೋಚಿಸುತ್ತಿದೆ ಎಂದು ದೂರಿದರು.ಮೀಸಲಾತಿ ಪಟ್ಟಿ ಪ್ರಕಟಿಸುವ ರಾಜಕೀಯ ಗೊಂದಲಕ್ಕೆ ಸರ್ಕಾರ ಒಳಗಾದಂತೆ ಕಂಡು ಬರುತ್ತಿದೆ. 2001ರ ಅಥವಾ 2011ರ ಜನಗಣತಿ ಪ್ರಕಾರ ಮೀಸಲಾತಿ ಪಟ್ಟಿ ಪ್ರಕಟಿಸುವ ನಿರ್ಧಾರ ಕೈಗೊಳ್ಳ ಲಾಗದ ಅಸಮ ರ್ಥತೆ, ಹಿರಿಯ ಮಂತ್ರಿಗಳಲ್ಲಿರುವ ಭಿನ್ನಾಭಿ ಪ್ರಾಯದಿಂದ ಸರ್ಕಾರವನ್ನು ಅಸಹಾ ಯಕವನ್ನಾಗಿಸಿದೆ ಎಂದು  ಟೀಕಿಸಿದರು.ಪೌರಾಡಳಿತ ಸಚಿವರು  ವಾರ ದೊಳಗೆ ಮೀಸಲಾತಿ ಪಟ್ಟಿ ಪ್ರಕಟಿಸುವು ದಾಗಿ ಸದನ ದಲ್ಲಿ ಭರವಸೆ ನೀಡಿದ್ದರು. ವಾರ ಕಳೆದರೂ ಪಟ್ಟಿ ಮಾತ್ರ ಪ್ರಕಟಗೊಂಡಿಲ್ಲ. ತಕ್ಷಣ ಮೀಸ ಲಾತಿ ಪಟ್ಟಿ  ಬಿಡುಗಡೆ ಮಾಡಿಬೇಕು. 2001 ಜನಗಣತಿ ಪ್ರಕಾರ ಚುನಾವಣೆ ನಡೆದಿರುವುದರಿಂದ ಗೊಂದಲಕ್ಕೆ ಅವಕಾಶ ಮಾಡಿಕೊಡದಂತೆ ರೋಸ್ಟರ್‌ನಿಯಮ ಪಾಲಿಸಿ 2001ರ ಪ್ರಕಾರ ಮೀಸಲಾತಿ ನಿಗದಿಪಡಿಸಬೇಕು ಎಂದು ಒತ್ತಾಯಿಸಿದರು.ಜಿಲ್ಲಾಡಳಿತದಲ್ಲಿ ಅರಾಜಕತೆ ಇದೆ. ಸಾರ್ವಜನಿಕ  ಕೆಲಸಕ್ಕೆ ಸ್ಪಂದನೆ ಸಿಗುತ್ತಿಲ್ಲ. ಕಸ ವಿಲೇವಾರಿ ಗೊಂದಲು 15 ದಿನದಿಂದ ಮುಂದುವರಿದಿದೆ. ಯಾವುದೇ ನಿರ್ಧಾರ ಕೈಗೊಳ್ಳದ ಅಸಮರ್ಥತೆ ಜಿಲ್ಲಾಡಳಿತದಿಂದ ವ್ಯಕ್ತವಾಗುತ್ತಿದೆ. ಆಡಳಿತ ಪಕ್ಷ ವರ್ಗಾ ವಣೆ ದಂಧೆಯಲ್ಲಿ ತೋರಿಸಿದ ಆಸಕ್ತಿ ಯನ್ನು ಶೇ. 1ರಷ್ಟು ಕಸ ವಿಲೇವಾ ರಿಯಲ್ಲಿ ತೋರುತ್ತಿಲ್ಲ ಎಂದು ಆರೋಪಿಸಿದರು.ಇಡೀ ನಗರವೇ ಕೆಸರು ಮಯವಾಗಿದೆ. ರಸ್ತೆ ಅಭಿವೃದ್ಧಿಗೆ ಬಿಜೆಪಿ ಸರ್ಕಾರದಲ್ಲಿ ಹಣ ಬಿಡುಗ ಡೆಗೊಂಡು, ಟೆಂಡರ್ ಕರೆದು ಏಜೆನ್ಸಿ ನಿಗದಿಯಾಗಿದ್ದರೂ ಕಾರ್ಯಾ ದೇಶ  ನೀಡದಿರುವುದರಿಂದ ಕೆಲಸ ಮಾಡಿಸಲು ಸಾಧ್ಯವಾಗುತ್ತಿಲ್ಲ. ಈ ಹೊಣೆಯನ್ನು  ಜಿಲ್ಲಾಧಿಕಾರಿ ಮತ್ತು ಆಡಳಿತ ಪಕ್ಷ ಹೊರ ಬೇಕಾಗುತ್ತದೆ ಎಂದರು.ಶಾಸಕ ಡಿ.ಎನ್.ಜೀವರಾಜ್, ಮಾಜಿ ಶಾಸಕ ಎಂ.ಪಿ. ಕುಮಾರಸ್ವಾಮಿ, ಜಿಲ್ಲಾ ಕಾರ್ಯ ದರ್ಶಿ ಟಿ.ರಾಜಶೇಖರ್, ನಗರ ಅಧ್ಯಕ್ಷ ವರಸಿದ್ದಿ ವೇಣು ಗೋಪಾಲ್, ಗ್ರಾಮಾಂತರ ಅಧ್ಯಕ್ಷ ಚಿಕ್ಕದೇವನೂರು ರವಿ, ನಗರಸಭಾ ಸದಸ್ಯ ಸುಧೀರ್ ಇದ್ದರು.

Post Comments (+)