2ನೇ ದಿನಕ್ಕೆ ಅಣ್ಣಾ ಮೌನ ವ್ರತ: ಕೈ ಬರಹದ ಮೂಲಕ ಸಂವಹನ

7

2ನೇ ದಿನಕ್ಕೆ ಅಣ್ಣಾ ಮೌನ ವ್ರತ: ಕೈ ಬರಹದ ಮೂಲಕ ಸಂವಹನ

Published:
Updated:

ರಾಳೇಗಣ ಸಿದ್ಧಿ, (ಪಿಟಿಐ): ಸಾಮಾಜಿಕ ಕಾರ್ಯಕರ್ತ ಅಣ್ಣಾ ಹಜಾರೆ ಅವರು ಆತ್ಮಶಾಂತಿಗಾಗಿ ಕೈಗೊಂಡಿರುವ ಮೌನವ್ರತ ಸೋಮಾರ ಎರಡನೇ ದಿನಕ್ಕೆ ಕಾಲಿರಿಸಿದೆ. ಚೀಟಿಯಲ್ಲಿ ಬರೆದು ಕೊಡುವ ಮೂಲಕ ಸ್ಥಳಕ್ಕೆ ಭೇಟಿ ನೀಡಿದವರ ಜತೆ ಅಭಿಪ್ರಾಯ ಹಂಚಿಕೊಳ್ಳುತ್ತಿದ್ದಾರೆ.`ಅಣ್ಣಾ ಅವರು ಕಾಗದದ ಮೇಲೆ ಕೆಲವು ಪದಗಳನ್ನು ಇಲ್ಲವೆ ವಾಕ್ಯಗಳನ್ನು ಬರೆಯುವ ಮೂಲಕ ತಮ್ಮ ಅಭಿಪ್ರಾಯ ತಿಳಿಸುತ್ತಿದ್ದಾರೆ~ ಎಂದು ಅವರ ಆಪ್ತ ದತ್ತಾ ಆವಾರಿ ಸುದ್ದಿಸಂಸ್ಥೆಗೆ ತಿಳಿಸಿದರು. ಂದಿನ ಕಾರ್ಯದ ಬಗ್ಗೆ ವಿಚಾರಿಸಿದಾಗ, `ಹೋರಾಟ ಮುಂದುವರಿಸುವುದು~ ಎಂದು ಅಣ್ಣಾ ಬರೆದಿದ್ದಾರೆ.ಇಲ್ಲಿನ ಪದ್ಮಾವತಿ ದೇವಸ್ಥಾನದ ಎದುರಿನ ಆಲದ ಮರದ ಕೆಳಗೆ ಮೌನವ್ರತ ಆರಂಭಿಸಿರುವ ಅಣ್ಣಾ, ಆಯಾಸ ಎನಿಸಿದಾಗ ಹಾಗೆಯೇ ಕೈಗಳನ್ನು ಜೋಡಿಸುತ್ತಾರೆ ಎಂದು ದತ್ತಾ ಹೇಳಿದರು. `ಆತ್ಮ ಶಾಂತಿಗಾಗಿ ಅವರು ಮೌನವ್ರತ ಆರಂಭಿಸಿದ್ದಾರೆ~ ಎಂದು ಅವರು ತಿಳಿಸಿದರು.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry