ಸೋಮವಾರ, ಡಿಸೆಂಬರ್ 9, 2019
21 °C

2ನೇ ಹಸಿರು ಕ್ರಾಂತಿಗೆ ರಾಷ್ಟ್ರಪತಿ ಕರೆ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

2ನೇ ಹಸಿರು ಕ್ರಾಂತಿಗೆ  ರಾಷ್ಟ್ರಪತಿ ಕರೆ

ನವದೆಹಲಿ (ಐಎಎನ್‌ಎಸ್): ರಾಷ್ಟ್ರಪತಿ ಪ್ರತಿಭಾ ಪಾಟೀಲ್ ಮಂಗಳವಾರ ಇಲ್ಲಿ ‘ಬೆಲೆ ಏರಿಕೆಯನ್ನು ಗಂಭೀರ ವಿಷಯ’ವೆಂದು ಬಣ್ಣಿಸಿದ್ದು, ಆಹಾರ ಭದ್ರತೆ ಸಾಧಿಸಲು ‘ದ್ವಿತೀಯ ಹಸಿರು ಕ್ರಾಂತಿ’ಗೆ ಕರೆ ನೀಡಿದರು.‘ಹೆಚ್ಚುತ್ತಿರುವ ಹಣದುಬ್ಬರ, ಅದರಲ್ಲೂ ವಿಶೇಷವಾಗಿ ಆಹಾರ ಸಾಮಗ್ರಿಗಳಲ್ಲಿನ ಬೆಲೆ ಏರಿಕೆ ಗಂಭೀರವಾದುದು’ ಎಂದು ಅವರು ಗಣರಾಜ್ಯೋತ್ಸವದ ಮುನ್ನಾದಿನ ರಾಷ್ಟ್ರವನ್ನುದ್ದೇಶಿಸಿ ಮಾತನಾಡುತ್ತಾ ಕಳವಳ ವ್ಯಕ್ತಪಡಿಸಿದರು.‘ಆಹಾರ ಭದ್ರತೆಗಾಗಿ ಎರಡನೇ ಹಸಿರು ಕ್ರಾಂತಿಯ ಅಗತ್ಯವಿದ್ದು ಇದು ಮಳೆಯಾಧರಿತ ಕೃಷಿ ಪ್ರದೇಶಗಳನ್ನು ಕೇಂದ್ರೀಕರಿಸಿ ನಡೆಯಬೇಕು ಮತ್ತು ಯಾಂತ್ರೀಕೃತ ಕೃಷಿಗೆ ಒತ್ತು ನೀಡಬೇಕು’ ಎಂದರು.

ಪ್ರತಿಕ್ರಿಯಿಸಿ (+)