2 ಜಿ ತೀರ್ಪಿನದ್ದು ದೂರಗಾಮಿ ಪರಿಣಾಮ: ಸಿಬಲ್ ಕಳವಳ

7

2 ಜಿ ತೀರ್ಪಿನದ್ದು ದೂರಗಾಮಿ ಪರಿಣಾಮ: ಸಿಬಲ್ ಕಳವಳ

Published:
Updated:

ನವದೆಹಲಿ, (ಪಿಟಿಐ): ~ಮೊದಲು ಬಂದವರಿಗೆ ಮೊದಲ ಆದ್ಯತೆ~ ನಿಯಮದ ಆಧಾರದ ಮೇಲೆ ನೀಡಿದ 2ಜಿ ತರಂಗಾಂತರ ಹಂಚಿಕೆಗಳನ್ನು ಸುಪ್ರೀಂ ಕೋರ್ಟ್ ರದ್ದುಪಡಿಸಿದ ಕ್ರಮ, ಗಣಿಗಾರಿಕೆ ಸೇರಿದಂತೆ ಇತರೆ ಕ್ಷೇತ್ರಗಳ ಮೇಲೂ ಸಂಕೀರ್ಣವಾದ ಪರಿಣಾಮ ಬೀರಬಹುದು ಎಂದು ಟೆಲಿಕಾಂ ಸಚಿವ ಕಪಿಲ್ ಸಿಬಲ್ ಅವರು ತಮ್ಮ ಕಳವಳವನ್ನು ವ್ಯಕ್ತಪಡಿಸಿದ್ದಾರೆ.ಸರ್ಕಾರ ನೀಡಿದ್ದ 2 ಜಿ~ ತರಂಗಾಂತರ ಹಂಚಿಕೆಯ ಹಗರಣದ ವಿಚಾರಣೆ ನಡೆಸಿದ್ದ ಸುಪ್ರೀಂ ಕೋರ್ಟ್ ಇತ್ತೀಚೆಗೆ 122 ಪರವಾನಗಿಗಳನ್ನು ರದ್ದುಪಡಿಸಿ ತೀರ್ಪು ನೀಡಿತ್ತು. 

~ ಸುಪ್ರೀಂ ಕೋರ್ಟಿನ ತೀರ್ಪು ದೂರಗಾಮಿ ಪರಿಣಾಮ ಬೀರುತ್ತದೆ ಎಂದುನಾನು ಪುನಃ ಪುನಃ ಹೇಳುತ್ತಲೇ ಬಂದಿದ್ದೇನೆ. ಟೆಲಿಕಾಂ ಕ್ಷೇತ್ರ ಮಾತ್ರವಲ್ಲ, ಎಲ್ಲಾ ಕ್ಷೇತ್ರಗಳ ಮೇಲೂ ಅದು ದೂರಗಾಮಿ ಪರಿಣಾಮ ಬೀರುತ್ತದೆ~ ಎಂದು ಅವರು ಎಂದಿದ್ದಾರೆ.    ಸೋಮವಾರ ಸುದ್ದಿ ಸಂಸ್ಥೆಯೊಂದರ ಪ್ರತಿನಿಧಿಯೊಂದಿಗೆ ಮಾತನಾಡುತ್ತಿದ್ದ ಅವರು, ಸರ್ಕಾರ ತೀರ್ಪಿನ ಅಧ್ಯಯನ ನಡೆಸುತ್ತಿದೆ ಜೊತೆಗೆ ಮುಂದೆ ಯಾವ ಬಗೆಯಲ್ಲಿ  ಹೆಜ್ಜೆಯಿಡಬೇಕೆಂದು ಚಿಂತನೆ ನಡೆಸುತ್ತಿದೆ ಎಂದೂ ತಿಳಿಸಿದ್ದಾರೆ.

 

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry