2 ಜಿ ಹಗರಣದ ಜೆಪಿಸಿ ತನಿಖೆ: ಸುಳಿವು ನೀಡಿದ ಸಚಿವ ಬನ್ಸಾಲ್

7

2 ಜಿ ಹಗರಣದ ಜೆಪಿಸಿ ತನಿಖೆ: ಸುಳಿವು ನೀಡಿದ ಸಚಿವ ಬನ್ಸಾಲ್

Published:
Updated:

ಲಖನೌ (ಪಿಟಿಐ): 2 ಜಿ ತರಂಗಾಂತರ ಹಗರಣದ ಜೆಪಿಸಿ ತನಿಖೆಗೆ ಸರ್ಕಾರ ಒಪ್ಪಿಕೊಳ್ಳುವ ಸಾಧ್ಯತೆ ಇದೆ ಎಂದು ಸಂಸದೀಯ ವ್ಯವಹಾರಗಳ ಸಚಿವ ಪವನ್ ಕುಮಾರ್ ಬನ್ಸಲ್ ಗುರುವಾರ ಸುಳಿವು ನೀಡಿದ್ದಾರೆ.

‘ಹಗರಣದ ಜೆಪಿಸಿ ತನಿಖೆಗೆ ಒಪ್ಪಿಗೆ ನೀಡುವ ಬಗ್ಗೆ ಸರ್ಕಾರ ಒಂದಡಿ ಮುಂದೆ ಇಟ್ಟಿದೆ. ಆದರೆ ಈಗಲೇ ಏನನ್ನೂ ದೃಢವಾಗಿ ಹೇಳಲು ಸಾಧ್ಯವಿಲ್ಲ. ಸರ್ಕಾರ ಒಪ್ಪಿಗೆ ನೀಡುವ ಮುನ್ನ ಫೆ.21ರಂದು ಆರಂಭವಾಗಲಿರುವ ಸಂಸತ್ತಿನ ಬಜೆಟ್ ಅಧಿವೇಶನದ ಕಲಾಪದಲ್ಲಿ ಸಕ್ರಿಯವಾಗಿ ಭಾಗವಹಿಸುವ ಬಗ್ಗೆ ವಿರೋಧ ಪಕ್ಷಗಳು ಸರ್ಕಾರಕ್ಕೆ ಖಾತ್ರಿ ನೀಡಬೇಕು’ ಎಂದು ಅವರು ಹೇಳಿದ್ದಾರೆ.

2 ಜಿ ಹಗರಣದ ಜೆಪಿಸಿ ತನಿಖೆಗೆ ಸರ್ಕಾರ ಸಿದ್ಧ ಎಂದು ಪ್ರಧಾನಿ ಮನಮೋಹನ್ ಸಿಂಗ್ ಬುಧವಾರ ಸ್ಪಷ್ಟಪಡಿಸಿದ್ದರು.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry