ಭಾನುವಾರ, ಆಗಸ್ಟ್ 18, 2019
24 °C

2 ವಾರದಲ್ಲಿ ದಂಡ ಪಾವತಿಸಲು ಹೈಕೋರ್ಟ್ ತಾಕೀತು

Published:
Updated:

ಬೆಂಗಳೂರು: ನ್ಯಾಯಾಲಯದ ಸಮಯವನ್ನು ವ್ಯರ್ಥ ಮಾಡಿರುವುದಕ್ಕಾಗಿ ಜೂನ್ ತಿಂಗಳಲ್ಲಿ ವಿಧಿಸಿದ್ದ 10 ಸಾವಿರ ರೂಪಾಯಿ ದಂಡವನ್ನು ಎರಡು ವಾರದೊಳಗೆ ಪಾವತಿಸುವಂತೆ ವಕೀಲ ರೊಡ್ಡವೀರಶೆಟ್ಟಿ ಅವರಿಗೆ ಹೈಕೋರ್ಟ್ ಸೋಮವಾರ ಆದೇಶಿಸಿದೆ.ಕರ್ನಾಟಕದಲ್ಲಿ ಸುಪ್ರೀಂಕೋರ್ಟ್ ಪೀಠ ಸ್ಥಾಪಿಸಲು ನಿರ್ದೇಶನ ನೀಡುವಂತೆ ಕೋರಿ ರೊಡ್ಡವೀರಶೆಟ್ಟಿ ಅರ್ಜಿ ಹಿಂದೆ ಸಲ್ಲಿಸಿದ್ದರು. ಅರ್ಜಿಯನ್ನು ವಜಾಗೊಳಿಸಿದ್ದ ನ್ಯಾಯಾಲಯ, 10 ಸಾವಿರ ರೂಪಾಯಿ ದಂಡ ವಿಧಿಸಿತ್ತು.ಮತ್ತೆ ಹೈಕೋರ್ಟ್‌ಗೆ ಅರ್ಜಿ ಸಲ್ಲಿಸಿದ್ದ ರೊಡ್ಡವೀರಶೆಟ್ಟ, ಅದೇ ರೀತಿ ಕೋರಿಕೆ ಮುಂದಿಟ್ಟಿದ್ದರು. ಸೋಮವಾರ ಅರ್ಜಿ ವಿಚಾರಣೆ ಕೈಗೆತ್ತಿಕೊಂಡ ನ್ಯಾಯಾಲಯ, ಹಿಂದಿನ ಬಾರಿ ವಿಧಿಸಿದ್ದ ದಂಡವನ್ನು ಪಾವತಿಸಲಾಗಿದೆಯೇ ಎಂದು ಅರ್ಜಿದಾರರನ್ನು ಪ್ರಶ್ನಿಸಿತು.ದಂಡ ಪಾವತಿಗೆ ಹೆಚ್ಚಿನ ಕಾಲಾವಕಾಶ ನೀಡುವಂತೆ ಅರ್ಜಿದಾರರು ಮನವಿ ಮಾಡಿದರು. ಆಗ, ಎರಡು ವಾರದೊಳಗೆ ದಂಡದ ಪಾವತಿಸಿ, ನ್ಯಾಯಾಲಯಕ್ಕೆ ಮಾಹಿತಿ ನೀಡುವಂತೆ ನ್ಯಾಯಪೀಠ ಆದೇಶಿಸಿತು. ಸುಪ್ರೀಂಕೋರ್ಟ್ ಪೀಠ ಸ್ಥಾಪನೆ ಕುರಿತಂತೆ ಸುಪ್ರೀಂಕೋರ್ಟ್‌ನಲ್ಲಿಯೇ ಅರ್ಜಿ ಸಲ್ಲಿಸುವಂತೆಯೂ ಆದೇಶಿಸಿತು.

Post Comments (+)