ಮಂಗಳವಾರ, ಏಪ್ರಿಲ್ 13, 2021
23 °C

2 ಶತಮಾನದ ಮಂದಿರ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ದೇವಸ್ಥಾನಗಳ ಸಮಿತಿಗಳೆಂದರೆ ದೇವರ ಪೂಜೆ, ಧಾರ್ಮಿಕ ಆಚರಣೆಗಳಿಗೆ ಸೀಮಿತವಾಗಿರುತ್ತವೆ. ಆದರೆ ಇಲ್ಲೊಂದು ಟ್ರಸ್ಟ್ 204 ವರ್ಷಗಳಿಂದ ಧಾರ್ಮಿಕ ಕಾರ್ಯಕ್ರಮಗಳ ಜೊತೆಯಲ್ಲಿ ಸಮಾಜ ಸೇವೆಯಲ್ಲೂ ತೊಡಗಿಸಿಕೊಂಡು ಇತರೆ ಸಂಘಗಳಿಗೆ ಮಾದರಿಯಾಗಿದೆ.ದೊಡ್ಡಮಾವಳ್ಳಿಯ ಶ್ರೀರಾಮ ಭಜನೆ ಮಂದಿರ ಸೇವಾ ಟ್ರಸ್ಟ್ ಇಂಥದೊಂದ್ದು ಜನಪರ ಕಾರ್ಯಕ್ರಮಗಳನ್ನು ನಡೆಸಿಕೊಂಡು ಬರುತ್ತಿರುವ ಟ್ರಸ್ಟ್. 1806ರಲ್ಲಿ ರಾಮಯ್ಯ ಎಂಬುವವರ ಕಾಲದಲ್ಲಿ ಶ್ರೀರಾಮ ಭಜನಾ ಮಂದಿರ ಸ್ಥಾಪಿತವಾಯಿತು. ಅಂದಿನಿಂದ ಇಂದಿನವರೆಗೂ ದೇವಾಲಯದಲ್ಲಿ ಶ್ರೀರಾಮನ ಪೂಜೆ ನಡೆಯುತ್ತಲೇ ಬರುತ್ತಿದೆ. ಜೊತೆಗೆ ಹಬ್ಬಹರಿದಿನಗಳಲ್ಲಿ ಭಜನೆ, ಮನರಂಜನಾ ಕಾರ್ಯಕ್ರಮಗಳು ಸೇರಿದಂತೆ ಆರೋಗ್ಯ ಶಿಬಿರಗಳನ್ನು ಹಮ್ಮಿಕೊಳ್ಳುತ್ತಿದ್ದೇವೆ. ಧಾರ್ಮಿಕ ಕಾರ್ಯದ ಜತೆಗೆ ಸಾಮಾಜಿಕ ಸೇವೆಯನ್ನೂ ನಡೆಸುತ್ತಿದ್ದೇವೆ. ಆರೋಗ್ಯ ಶಿಬಿರಗಳಿಗೆ ಆಗುವ ವೆಚ್ಚವನ್ನು ಟ್ರಸ್ಟ್‌ನ ಸದಸ್ಯರು ಮತ್ತು ಸಾರ್ವಜನಿಕರಿಂದ ಸಂಗ್ರಹಿಸಲಾಗುತ್ತದೆ ಎನ್ನುತ್ತಾರೆ ಟ್ರಸ್ಟ್‌ನ ಸಂಚಾಲಕ ಹೇಮಂತ್ ಕುಮಾರ್.ಶ್ರೀ ರಾಮ ಭಜನೆ ಮಂದಿರದ 205ನೇ ವರ್ಷದ ಮಹೋತ್ಸವ ಹಾಗೂ ರಾಮನವಮಿ ಅಂಗವಾಗಿ ಈ ಬಾರಿಯೂ ಆರೋಗ್ಯ ಶಿಬಿರ ಆಯೋಜಿಸಿದೆ.ಇಂದಿನಿಂದ ಗುರುವಾರದ (ಏ.12- 14) ವರೆಗೆ ನಿತ್ಯ ಬೆಳಿಗ್ಗೆ 10 ರಿಂದ ಹೃದಯ, ಮೂಳೆ ಮತ್ತು ಕೀಲು, ಮಧುಮೇಹ, ಆಸ್ತಮಾ ಮತ್ತಿತರ ಕಾಯಿಲೆಗಳಿಗೆ ತಪಾಸಣೆ ಮಾಡಲಾಗುತ್ತದೆ.ಮಂಗಳವಾರ ಸಂಜೆ 7ಕ್ಕೆ ಸುಮಿತ್ರಾನಂದ ಅವರಿಂದ ಹರಿಕಥೆ. ಬುಧವಾರ ಮಧ್ಯಾಹ್ನ 2ಕ್ಕೆ ಅಮ್ಮಾಯಿ ತಂಡದಿಂದ ದೇವರನಾಮ. ಸಂಜೆ 7ಕ್ಕೆ ಮೆಲೋಡಿಯನ್ ಮ್ಯೂಸಿಕ್ ವಾದ್ಯಗೋಷ್ಠಿ.ಸ್ಥಳ: ನಂ 10, ಶ್ರೀರಾಮ ಭಜನಾ ಮಂದಿರ ರಸ್ತೆ, ದೊಡ್ಡಮಾವಳ್ಳಿ. ಮಾಹಿತಿಗೆ: 99801 68513

ಕೇಂದ್ರ ಬಜೆಟ್ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.