2-0 ಗೆಲುವು ನಮ್ಮ ಗುರಿ: ಹಸ್ಸಿ

7

2-0 ಗೆಲುವು ನಮ್ಮ ಗುರಿ: ಹಸ್ಸಿ

Published:
Updated:

ಮೆಲ್ಬರ್ನ್: ಭಾರತ ವಿರುದ್ಧದ ಟ್ವೆಂಟಿ-20 ಕ್ರಿಕೆಟ್ ಸರಣಿಯಲ್ಲೂ 2-0 ಗೆಲುವು ಸಾಧಿಸುವುದು ನಮ್ಮ ಗುರಿ ಎಂದು ಆಸ್ಟ್ರೇಲಿಯಾ ತಂಡದ ಮಧ್ಯಮ ಕ್ರಮಾಂಕದ ಬ್ಯಾಟ್ಸ್‌ಮನ್ ಡೇವಿಡ್ ಹಸ್ಸಿ ನುಡಿದಿದ್ದಾರೆ.ಎರಡು ಪಂದ್ಯಗಳ ಸರಣಿಯಲ್ಲಿ ಕಾಂಗರೂ ಪಡೆ ಈಗಾಗಲೇ 1-0 ಮುನ್ನಡೆ ಹೊಂದಿದೆ. ಸಿಡ್ನಿಯಲ್ಲಿ ನಡೆದ ಮೊದಲ ಪಂದ್ಯದಲ್ಲಿ  31 ರನ್‌ಗಳ ಗೆಲುವು ಸಾಧಿಸಿದ್ದರು. `ಗೆಲುವಿನ ಓಟವನ್ನು ಮುಂದುವರಿಸಬೇಕು. ಉತ್ತಮ ಪ್ರದರ್ಶನವನ್ನು ಕಾಯ್ದುಕೊಂಡು ಹೋಗಬೇಕು. ಈ ಕ್ರೀಡಾಂಗಣದಲ್ಲಿ 90 ಸಾವಿರಕ್ಕೂ ಅಧಿಕ ಮಂದಿ ಪ್ರೇಕ್ಷಕರು ಆಗಮಿಸುವ ನಿರೀಕ್ಷೆ ಇದೆ. ಅವರ ಮುಂದೆ ಆಡುವುದೇ ದೊಡ್ಡ ಅನುಭವ~ ಎಂದು ಅವರು ತಿಳಿಸಿದರು.ಬುಧವಾರ ನಡೆದ ಪಂದ್ಯದಲ್ಲಿ ಹಸ್ಸಿ ಬ್ಯಾಟಿಂಗ್‌ನಲ್ಲಿ 42 ರನ್ ಹಾಗೂ ಬೌಲಿಂಗ್‌ನಲ್ಲಿ ಎರಡು ವಿಕೆಟ್ ಪಡೆದಿದ್ದರು. `ಆದರೆ ಮುಂದಿನ ಪಂದ್ಯದಲ್ಲಿ ಭಾರತ ತಂಡದವರು ತಿರುಗೇಟು ನೀಡಬಹುದು. ಹಾಗಾಗಿ ಸುಧಾರಿತ ಪ್ರದರ್ಶನ ಮೂಡಿಬರಬೇಕು~ ಎಂದು ಅವರ ಸಹ ಆಟಗಾರರಿಗೆ ಕಿವಿಮಾತು ಹೇಳಿದರು.`ಭಾರತ ಪ್ರತಿಭಾವಂತ ಬ್ಯಾಟ್ಸ್ ಮನ್‌ಗಳಿಂದ ಕೂಡಿದ ತಂಡ. ಸುರೇಶ್ ರೈನಾ, ಕೊಹ್ಲಿ, ರೋಹಿತ್ ಐಪಿಎಲ್‌ನಲ್ಲಿ ಅತ್ಯುತ್ತಮ ಪ್ರದರ್ಶನ ತೋರಿದವರು. ಹಾಗಾಗಿ ಅವರು ಯಾವುದೇ ಸಂದರ್ಭದಲ್ಲಿ ಪುಟಿದೇಳಬಹುದು. ಅವರ ಬಗ್ಗೆ ನಾವು ಸದಾ ಎಚ್ಚರದಿಂದಿರಬೇಕು. ಏಕೆಂದರೆ ಅವರಿಗೆ ಪಂದ್ಯ ಗೆದ್ದುಕೊಡುವ ಸಾಮರ್ಥ್ಯವಿದೆ~ ಎಂದು ಹಸ್ಸಿ ವಿವರಿಸಿದರು. ಡೇವಿಡ್ ವಾರ್ನರ್ ಅವರ `ಸ್ವಿಚ್ ಹಿಟ್ ಆಫ್~ ಹೊಡೆತದ ಬಗ್ಗೆ ಪ್ರತಿಕ್ರಿಯಿಸಿದ ಹಸ್ಸಿ, `ಅದೊಂದು ಅತ್ಯುತ್ತಮ ಹಾಗೂ ವಿಶೇಷ ಹೊಡೆತ. ಅವರು ನೆಟ್ಸ್‌ನಲ್ಲಿ ಅಭ್ಯಾಸ ಮಾಡುವಾಗ ಇಂತಹ ಹೊಡೆತಕ್ಕೆ ಯತ್ನಿಸುತ್ತಿರುತ್ತಾರೆ~ ಎಂದರು.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry