ಶನಿವಾರ, ಜೂನ್ 19, 2021
26 °C

2, 3ನೆ ಹಂತದ ಚುನಾವಣೆಗೆ ಅಧಿಸೂಚನೆ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ನವದೆಹಲಿ (ಪಿಟಿಐ): ಏ. 9 ಮತ್ತು 10ರಂದು ನಡೆಯಲಿರುವ ಲೋಕ­ಸಭೆಯ ಎರಡು ಮತ್ತು ಮೂರನೇ ಹಂತದ ಮತದಾನಕ್ಕೆ ಶನಿವಾರ ಅಧಿಸೂಚನೆ ಹೊರಡಿಸ­ಲಾಯಿತು.ದೆಹಲಿ ಸೇರಿದಂತೆ 18 ರಾಜ್ಯಗಳ 93 ಲೋಕಸಭೆ ಕ್ಷೇತ್ರಗಳಲ್ಲಿ ಚುನಾ­ವಣೆ ನಡೆಯಬೇಕಿದೆ.ಏಪ್ರಿಲ್‌ 9ರಂದು ಐದು ರಾಜ್ಯಗಳ ಏಳು ಮತ್ತು ಏಪ್ರಿಲ್‌ 10ರಂದು ದೆಹಲಿ ಸೇರಿ 13 ರಾಜ್ಯಗಳ 86 ಲೋಕಸಭಾ ಕ್ಷೇತ್ರಗಳಿಗೆ ಮತದಾನ  ನಡೆಯಲಿದೆ.ಬಿಹಾರದ ಆರು ಕ್ಷೇತ್ರಗಳಿಗೂ ಏ. 10ರಂದು ಮತದಾನ ನಡೆಯಲಿದೆ. ಕೆಲ ಆಡಳಿತಾತ್ಮಕ ಕಾರಣಗಳಿಂದ ಮಾರ್ಚ್‌ 13ರಂದೇ ಅಧಿಸೂಚನೆ ಹೊರಡಿಸಲಾಗಿತ್ತು. ನಕ್ಸಲ್‌ ಪೀಡಿತ ಛತ್ತೀಸಗಡದ ಬಸ್ತರ್‌ನಲ್ಲಿಯೂ ಏ. 10ರಂದು ಮತದಾನ ಜರುಗಲಿದೆ.

 

ಹರಿ­ಯಾಣದ 10, ಕೇರಳದ 20 ಮತ್ತು ಚಂಡೀಗಡದ ಒಬ್ಬ ಪ್ರತಿನಿಧಿಯ ಆಯ್ಕೆ ಕೂಡ ಏ. 10ರಂದೇ ನಡೆಯಲಿದೆ.ಜಮ್ಮು ಮತ್ತು ಕಾಶ್ಮೀರದ ಆರು ಲೋಕಸಭೆ ಕ್ಷೇತ್ರಗಳಲ್ಲಿ ಕ್ರಮವಾಗಿ ಏ. 10, 17, 24, 30 ಮತ್ತು ಮೇ 7ರಂದು ಐದು ಹಂತಗಳಲ್ಲಿ ಚುನಾವಣೆ ನಡೆಯಲಿದೆ. ಜಮ್ಮುವಿನಲ್ಲಿ ಮಾತ್ರ ಏ. 10ರಂದು ಚುನಾವಣೆ ನಡೆಯಲಿದೆ.ಜಾರ್ಖಂಡ್‌ನ 14 ಸ್ಥಾನಗಳ ಪೈಕಿ ಐದರಲ್ಲಿ ಏ. 10ರಂದು ಮತ್ತು ಉತ್ತರ ಪ್ರದೇಶದ 80 ಸಂಸದರ ಆಯ್ಕೆಗೆ ಏ. 10, 17, 24, 30, ಮೇ 7 ಮತ್ತು 12ರಂದು ಆರು ಹಂತದಲ್ಲಿ ಮತದಾನ ಜರುಗಲಿದೆ.

ಫಲಿತಾಂಶ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.