ಶುಕ್ರವಾರ, 29 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

2 ಜಿ ಆಸೆ ಕೈಬಿಟ್ಟ ಏರ್‌ಸೆಲ್, ರಿಲಯನ್ಸ್

Last Updated 19 ಅಕ್ಟೋಬರ್ 2012, 19:30 IST
ಅಕ್ಷರ ಗಾತ್ರ

ನವದೆಹಲಿ: ಸುಪ್ರೀಂ ಕೋರ್ಟ್ ಆದೇಶದ ಪ್ರಕಾರ ಮರು ಹಂಚಿಕೆ ಆಗಲಿರುವ 2 ಜಿ ತರಂಗಾಂತರ ಹರಾಜು ಪ್ರಕ್ರಿಯೆಯಲ್ಲಿ  ಪಾಲ್ಗೊಳ್ಳುವುದರಿಂದ ಏರ್‌ಸೆಲ್, ಸಿಸ್ಟೆಮಾ, ಆರ್‌ಕಾಮ್ ಮತ್ತು ರಿಲಯನ್ಸ್ ಇಂಡಸ್ಟ್ರೀಸ್‌ಗಳು ಹಿಂದೆ ಸರಿದಿವೆ.

ಹರಾಜು ಪ್ರಕ್ರಿಯೆಯಲ್ಲಿ ಭಾಗವಹಿಸಲು ಅರ್ಜಿ ಹಾಕುವುದಕ್ಕೆ ಶುಕ್ರವಾರ ಕಡೆಯ ದಿನವಾಗಿತ್ತು. ಆದರೆ ಈ ಕಂಪೆನಿಗಳು ಅರ್ಜಿ ಹಾಕಲಿಲ್ಲ. ತರಂಗಾಂತರಕ್ಕೆ ಹೆಚ್ಚಿನ ದರ ನಿಗದಿ ಮಾಡಿರುವುದೇ ಇದಕ್ಕೆ ಕಾರಣ ಎಂದು ಉದ್ದಿಮೆ ಮೂಲಗಳು ತಿಳಿಸಿವೆ.

ಐಡಿಯಾ ಸೆಲ್ಯುಲಾರ್, ಟಾಟಾ ಟೆಲಿಸರ್ವೀಸಸ್, ವಿಡಿಯೊಕಾನ್ ಇಂಡಸ್ಟ್ರೀಸ್‌ಗಳು ಹರಾಜಿನಲ್ಲಿ ಪಾಲ್ಗೊಳ್ಳುವ ಆಸಕ್ತಿ ತೋರಿ ಅರ್ಜಿ ಹಾಕಿವೆ. ನಾರ್ವೆಯ ಟೆಲಿನಾರ್ ಕಂಪೆನಿ ಹೊಸ ಸ್ವತಂತ್ರ ಸಂಸ್ಥೆಯಾದ ಟೆಲಿವಿಂಗ್ಸ್ ಕಮ್ಯುನಿಕೇಷನ್ಸ್ ಹೆಸರಿನಲ್ಲಿ ಅರ್ಜಿ ಹಾಕಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT