ಶುಕ್ರವಾರ, 29 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

2 ವಾರಗಳ ನಂತರ ದರ್ಶನ್ ಜಾಮೀನು ಅರ್ಜಿ ವಿಚಾರಣೆ

Last Updated 22 ಸೆಪ್ಟೆಂಬರ್ 2011, 8:35 IST
ಅಕ್ಷರ ಗಾತ್ರ

ಬೆಂಗಳೂರು, (ಪಿಟಿಐ): ಪತ್ನಿಯ ಮೇಲೆ ಹಲ್ಲೆ ಮಾಡಿ ಕೊಲೆ ಮಾಡಲು ಯತ್ನಿಸಿದ ಆರೋಪ ಹೊತ್ತಿರುವ ನಟ ದರ್ಶನ್ ಅವರ ಜಾಮೀನು ಅರ್ಜಿ ವಿಚಾರಣೆಯನ್ನು ಹೈಕೋರ್ಟು ಎರಡು ವಾರಗಳ ಕಾಲ ಮುಂದೂಡಿದೆ.

ನಟ ದರ್ಶನ್ ಅವರ ಜಾಮೀನು ಅರ್ಜಿಗೆ ತಮ್ಮ ಆಕ್ಷೇಪಣೆ ಸಲ್ಲಿಸಲು ತಮಗೆ ಎರಡು ವಾರ ಕಾಲಾವಕಾಶ ಬೇಕು ಎಂದು ಸರ್ಕಾರಿ ವಕೀಲ ಚಂದ್ರಮೌಳಿ ಅವರು ಕಾಲಾವಕಾಶ ಕೇಳಿದಾಗ ಕೋರ್ಟು ಗುರುವಾರ ಅದಕ್ಕೆ ತನ್ನ ಸಮ್ಮತಿ ಸೂಚಿಸಿತು.

ತಮ್ಮ ಮೇಲೆ ಹಲ್ಲೆ ಮಾಡಿ ಕೊಲೆಗೆ ಯತ್ನಿಸಿದ ಪತಿ ದರ್ಶನ್ ವಿರುದ್ಧ ದರ್ಶನ್ ಪತ್ನಿ  ವಿಜಯಲಕ್ಷ್ಮಿ ಸೆ 9ರಂದು ಪೊಲೀಸರಿಗೆ ಐದು ಪುಟಗಳ ದೂರು ಸಲ್ಲಿಸಿದಾಗ ಅವರನ್ನು ಬಂಧಿಸಲಾಗಿತ್ತು. ತನ್ನನ್ನು ಮತ್ತು ತಮ್ಮ ಮಗುವನ್ನು ಸಾಯಿಸಲು ದರ್ಶನ್ ಮುಂದಾಗಿದ್ದರು ಎಂದು ದೂರಿನಲ್ಲಿ ಆರೋಪಿಸಲಾಗಿತ್ತು. ಗಂಟೆಗಳ ನಂತರ , ~ತಾವು ಬಚ್ಚಲಲ್ಲಿ ಬಿದ್ದಾಗ ತಮಗೆ ಗಾಯಗಳಾಗಿವೆ, ಪತಿ ದರ್ಶನ್ ತಮ್ಮ ಮೇಲೆ ಹಲ್ಲೆ ಮಾಡಿಲ್ಲ~ ಎಂದು ಬದಲಿ ಹೇಳಿಕೆ ನೀಡಿದಾಗ ಪೊಲಿಸರು ಅದನ್ನು ದಾಖಲಿಸಿಕೊಳ್ಲಲಿಲ್ಲ.

ನಟ ದರ್ಶನ್ ಅವರ ಜಾಮೀನು ಅರ್ಜಿ ವಿಚಾರಣೆಯನ್ನು ಹೈ ಕೋರ್ಟ್ ಎರಡು ವಾರ ಕಾಲ ಮುಂದೂಡಿದ್ದರಿಂದ ಸೆ 29 ರಂದು ಬಿಡುಗಡೆಯಾಗಲಿರುವ ಅವರು ನಟಿಸಿದ ~ಸಾರಥಿ~ ಚಿತ್ರ ಪ್ರದರ್ಶನದ ಸಂದರ್ಭದಲ್ಲಿ ಅಭಿಮಾನಿಗಳ  ಸಂಭ್ರಮಕ್ಕೆ ಸಂಚಕಾರ ಉಂಟಾಗಲಿದೆ.

ಉಬ್ಬಸ ರೋಗಕ್ಕೆ ಆಸ್ಪತ್ರೆಯಲ್ಲಿ ದಾಖಲಾಗಿ ಚಿಕಿತ್ಸೆ ಪಡೆಯುತ್ತಿದ್ದ ನಟ ದರ್ಶನ್ ಬುಧವಾರ ಆಸ್ಪತ್ರೆಯಿಂದ ಬಿಡುಗಡೆಯಾದ ನಂತರ ಪರಪ್ಪನ ಅಗ್ರಹಾರ ಸೇರಿದ್ದರು. ಮಂಗಳವಾರ ಸೆಷ್ಟನ್ಸ್ ನ್ಯಾಯಾಲಯ ಅವರ ಜಾಮೀನು ಅರ್ಜಿ ಪುರಸ್ಕರಿಸದ ಕಾರಣ ಅವರನ್ನು ಮತ್ತೆ ಜೈಲಿಗೆ ಕಳುಹಿಸಲಾಗಿತ್ತು.

ದರ್ಶನ್ ಪತ್ನಿ ವಿಯಲಕ್ಷ್ಮಿ ಅವರ ಎರಡನೇ ಪರಿಷ್ಕೃತ ಹೇಳಿಕೆಯನ್ನು ಪರಿಗಣನೆಗೆ ತೆಗೆದುಕೊಳ್ಳಲು ಮತ್ತು ದರ್ಶನ್ ಅವರಿಗೆ ಜಾಮೀನು ನೀಡಲು ಈ ಮೊದಲೇ ಎರಡು ಕೆಳ ನ್ಯಾಯಾಲಯಗಳು ನಿರಾಕರಿಸಿವೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT