20ರಂದು ಶಿಕ್ಷಕರ ಸದನದಲ್ಲಿ ಕಾರ್ಯಾಗಾರ

7

20ರಂದು ಶಿಕ್ಷಕರ ಸದನದಲ್ಲಿ ಕಾರ್ಯಾಗಾರ

Published:
Updated:

ಬೆಂಗಳೂರು: ಕರ್ನಾಟಕ ರಾಜ್ಯ ಸರ್ಕಾರಿ ಹಿರಿಯ ಹಾಗೂ ಪದವೀಧರೇತರ ಪ್ರಾಥಮಿಕ ಶಾಲಾ ಮುಖ್ಯ ಶಿಕ್ಷಕರ ಸಂಘವು (ಡಿ.20) ಗುರುವಾರದಂದು ಬೆಳಿಗ್ಗೆ 10 ಗಂಟೆಗೆ ನಗರದ ಶಿಕ್ಷಕರ ಸದನದಲ್ಲಿ ಮುಖ್ಯ ಶಿಕ್ಷಕರ ಶೈಕ್ಷಣಿಕ ಮತ್ತು ಆಡಳಿತಾತ್ಮಕ ಕಾರ್ಯಗಾರವನ್ನು ಹಮ್ಮಿಕೊಂಡಿದೆ.ಕಾರ್ಯಾಗಾರವನ್ನು ಉಪಮುಖ್ಯಮಂತ್ರಿ ಕೆ.ಎಸ್.ಈಶ್ವರಪ್ಪ ಉದ್ಘಾಟಿಸಲಿದ್ದು, ಪ್ರಾಥಮಿಕ ಮತ್ತು ಪ್ರೌಢಶಿಕ್ಷಣ ಸಚಿವ ವಿಶ್ವೇಶ್ವರ ಹೆಗಡೆ ಕಾಗೇರಿ, ಮೇಯರ್ ವೆಂಕಟೇಶಮೂರ್ತಿ, ಪ್ರಾಥಮಿಕ ಹಾಗೂ ಪ್ರೌಢಶಿಕ್ಷಣ ಇಲಾಖೆ ಕಾರ್ಯದರ್ಶಿ ಜಿ.ಕುಮಾರನಾಯಕ್ ಸೇರಿದಂತೆ ಮತ್ತಿತರರು ಆಗಮಿಸುವರು.

ಕಾರ್ಯಾಗಾರದಲ್ಲಿ ಪ್ರಾಥಮಿಕ ಮುಖ್ಯ ಶಿಕ್ಷಕರಿಗೆ ಪ್ರತೇಕವಾದ ವೇತನ ಶ್ರೇಣಿ, ಮುಖ್ಯ ಶಿಕ್ಷಕರಿಗೆ 300 ರೂಪಾಯಿ ವಿಶೇಷ ಭತ್ಯೆಯನ್ನು 400 ರೂಪಾಯಿಗೆ ಹೆಚ್ಚಿಸಬೇಕು, ಪ್ರಾಥಮಿಕ ಶಾಲೆಗಳಲ್ಲಿ `ಡಿ' ದರ್ಜೆ ನೌಕರರ ನೇಮಕ ಸೇರಿದಂತೆ ಮತ್ತಿತರ ವಿವಿಧ ಬೇಡಿಕೆಗಳನ್ನು ಈಡೇರಿಸಲು ಸರ್ಕಾರಕ್ಕೆ ಸಚಿವರ ಮೂಲಕ ಮನವಿ ಮಾಡಲಾಗುವುದು ಎಂದು ಕರ್ನಾಟಕ ರಾಜ್ಯ ಸರ್ಕಾರಿ ಹಿರಿಯ ಹಾಗೂ ಪದವೀಧರೇತರ ಪ್ರಾಥಮಿಕ ಶಾಲಾ ಮುಖ್ಯ ಶಿಕ್ಷಕರ ಸಂಘ ಪ್ರಕಟಣೆಯಲ್ಲಿ ತಿಳಿಸಿದೆ.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry