ಮಂಗಳವಾರ, ಮಾರ್ಚ್ 2, 2021
26 °C

20 ಅಡಿ ಎತ್ತರದಿಂದ ಉರುಳಿಬಿದ್ದ ಬೈಕ್ ಸವಾರ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

20 ಅಡಿ ಎತ್ತರದಿಂದ ಉರುಳಿಬಿದ್ದ ಬೈಕ್ ಸವಾರ

ಕೊಪ್ಪಳ: ಸೇತುವೆಯಿಂದ ಸುಮಾರು 20 ಅಡಿ ಕೆಳಗೆ ಬಿದ್ದ ಬೈಕ್‌ ಸವಾರ ಗಂಭೀರವಾಗಿ ಗಾಯಗೊಂಡು ಆಸ್ಪತ್ರೆಗೆ ದಾಖಲಾಗಿದ್ದಾರೆ. ಮಂಗಳವಾರ ಜಬ್ಬಲಗುಡ್ಡ- ಇಂದರಗಿ ಮಧ್ಯದ ರೈಲ್ವೆ ಮೇಲು ಸೇತುವೆಯಲ್ಲಿ ಈ  ಅಪಘಾತ ಸಂಭವಿಸಿದೆ.ತಾಲ್ಲೂಕಿನ ಇಂದರಗಿ ಗ್ರಾಮದ ಮಲ್ಲಪ್ಪ ಶಿವಪ್ಪ ಗುರಿಕಾರ ಗಾಯಾಳು. ಯುವಕ ಗುರಿಕಾರ ಇಂದರಗಿಯಿಂದ ಗಂಗಾವತಿಯತ್ತ ಬೈಕ್‌ನಲ್ಲಿ ಬರುತ್ತಿದ್ದಾಗ ಅಪಘಾತ ಸಂಭವಿಸಿದೆ. ರೈಲು ಮಾರ್ಗದ ಮೇಲು ಸೇತುವೆಯ ಮೇಲೆ ಹೋಗುತ್ತಿದ್ದಾಗ ನಿಯಂತ್ರಣ ತಪ್ಪಿದ ಬೈಕ್‌ ತಡೆಗೋಡೆಗೆ ಅಪ್ಪಳಿಸಿದೆ. ಸವಾರ ಸೇತುವೆಯಿಂದ ಕೆಳಕ್ಕುರುಳಿದ್ದಾರೆ. ಅವರ ಒಂದು ಕಾಲು ತುಂಡಾಗಿ ಸೇತುವೆಯಲ್ಲೆ ಸಿಲುಕಿತ್ತು.ತೀವ್ರ ರಕ್ತಸ್ರಾವದಿಂದ ಒದ್ದಾಡುತ್ತಿದ್ದ ಅವರನನ್ನು ಗಂಗಾವತಿ ನಗರದ ಶಿವಕುಮಾರ ಮಾರೆಣ್ಣ ವಡ್ಡರಹಟ್ಟಿ ಹಾಗೂ ಲಿಂಗರಾಜ ಎಂಬ ಇಬ್ಬರು ಯುವಕರು ರಕ್ಷಿಸಿದ್ದಾರೆ.ತಕ್ಷಣ ಅಂಬುಲೆನ್ಸ್‌ ಕರೆಸಿದ್ದಾರೆ. ತುಂಡಾದ ಕಾಲಿನ ಭಾಗವನ್ನು ಕವರ್‌ನಲ್ಲಿಟ್ಟು  ಗಾಯಾಳುವನ್ನು ಆಸ್ಪತ್ರೆಗೆ ಕಳುಹಿಸಿದರು. ಮುನಿರಾಬಾದ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ಕೇಂದ್ರ ಬಜೆಟ್ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.