20 ಭಾರತೀಯ ಮೀನುಗಾರರ ಬಂಧನ

ಶನಿವಾರ, ಮೇ 25, 2019
28 °C

20 ಭಾರತೀಯ ಮೀನುಗಾರರ ಬಂಧನ

Published:
Updated:

 

ಇಸ್ಲಾಮಾಬಾದ್ (ಪಿಟಿಐ): ಪಾಕಿಸ್ತಾನದ ಸಮುದ್ರದ ಗಡಿಯಲ್ಲಿ ಅಕ್ರಮವಾಗಿ ಪ್ರವೇಶಿಸಿದ ಆರೋಪದ ಮೇಲೆ ಸಾಗರ ಭದ್ರತಾ ಪಡೆ, ಬುಧವಾರ ಬೆಳಗಿನ ಜಾವ  20 ಮಂದಿ ಭಾರತದ ಮೀನುಗಾರರನ್ನು ಬಂಧಿಸಿ ಅವರ ನಾಲ್ಕು ನಾವೆಗಳನ್ನು ವಶಪಡಿಸಿಕೊಂಡಿದೆ ಎಂದು ಗುರುವಾರ ಇಲ್ಲಿ ಹೊರಡಿಸಿದ ಅಧಿಕೃತ ಪ್ರಕಟಣೆಯಲ್ಲಿ ತಿಳಿಸಲಾಗಿದೆ.

ಪಾಕಿಸ್ತಾನದ ಗಡಿಯಲ್ಲಿ ಪದೇ ಪದೇ ಅತಿಕ್ರಮಣ ಪ್ರವೇಶಮಾಡಿದ ಕಾರಣ ಈ ಮೀನುಗಾರರನ್ನು ಬಂಧಿಸಲಾಗಿದೆ ಎಂದು ಹೇಳಿಕೊಂಡಿರುವ ಅಧಿಕಾರಿಗಳು ಬಂಧಿತ ಮೀನುಗಾರರನ್ನು ಮುಂದಿನ ಕ್ರಮ ಜರುಗಿಸಲು ಅನುವಾಗುವಂತೆ ಕರಾಚಿಯ ಪೊಲೀಸರಿಗೆ ಒಪ್ಪಿಸಲಾಗಿದೆ ಎಂದು ತಿಳಿಸಿದ್ದಾರೆ.

ಸಾಗರ ಗಡಿ ಉಲ್ಲಂಘನೆಯ ಆರೋಪದ ಮೇಲೆ ಭಾರತ ಮತ್ತು ಪಾಕಿಸ್ತಾನಗಳು ಪ್ರತಿವರ್ಷವೂ ನೂರಾರು ಮೀನುಗಾರರನ್ನು ಬಂಧಿಸುತ್ತವೆ. ಈಚೆಗೆ ಉಭಯ ರಾಷ್ಟ್ರಗಳು ಶಿಕ್ಷೆಯ ಅವಧಿ ಪೂರೈಸಿದ್ದ ಮೀನುಗಾರರ ಬಿಡುಗಡೆಗೆ ಕ್ರಮ ಕೈಗೊಳ್ಳಲು ಮುಂದಾಗಿವೆ.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry