ಬುಧವಾರ, ಮೇ 18, 2022
27 °C

20 ಮಂದಿಗೆ ನರಸಿಂಹಯ್ಯ ಪ್ರಶಸ್ತಿ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಹೊಸಪೇಟೆ: ಬಳ್ಳಾರಿಯ ಡಾ. ಸುಭಾಷ್ ಭರಣಿ ಸಾಂಸ್ಕೃತಿಕ ವೇದಿಕೆ ನೀಡುವ ರಾಜ್ಯಮಟ್ಟದ ಡಾ.ಎಚ್. ನರಸಿಂಹಯ್ಯ ಪ್ರಶಸ್ತಿಗೆ ಬೆಂಗಳೂರು ವಿವಿ ಪ್ರಾಧ್ಯಾಪಕ ಡಾ.ಬಸವರಾಜ ಕಲ್ಗುಡಿ, ಹಂಪಿ ಕನ್ನಡ ವಿವಿಯ ಡಾ.ಬಿ.ಎಂ.ಪುಟ್ಟಯ್ಯ ಬಳ್ಳಾರಿ ಜಿಲ್ಲಾ ಡಿಡಿಪಿಐ ಡಾ.ಎಚ್.ಬಾಲರಾಜ ಸೇರಿದಂತೆ 20 ಜನ ಸಾಧಕರು ಆಯ್ಕೆಯಾಗಿದ್ದಾರೆ.ಶನಿವಾರ ಸುದ್ದಿಗೋಷ್ಠಿಯಲ್ಲಿ  ವೇದಿಕೆಯ ಅಧ್ಯಕ್ಷ ಸಿ.ಮಂಜುನಾಥ ಆಯ್ಕೆ ಪಟ್ಟಿಯನ್ನು ಬಿಡುಗಡೆ ಮಾಡಿದರು.

ಕಳೆದ 2010 ಮತ್ತು 11ನೇ ಸಾಲಿಗೆ ಆಯ್ಕೆಯಾದವರ ವಿವಿರ ಹೀಗಿದೆ.2010ರ ಪ್ರಶಸ್ತಿಗೆ ಆಯ್ಕೆಯಾದವರು: ಬೆಂಗಳೂರು ವಿವಿಯ ಕನ್ನಡ ಪ್ರಾಧ್ಯಾಪಕ ಪ್ರೊ. ಡಾ.ಬಸವರಾಜ ಕಲ್ಗುಡಿ, ಪತ್ರಿಕೋದ್ಯಮದ ಸಹ ಪ್ರಾಧ್ಯಾಪಕ ಪ್ರೊ.ಎಚ್.ಕೆ.ಮರಿಸ್ವಾಮಿ, ಬಳ್ಳಾರಿ ಡಿಡಿಪಿಐ ಡಾ.ಎಚ್. ಬಾಲರಾಜ, ನಿವೃತ್ತ ಪ್ರಾಧ್ಯಾಪಕಿ ಪ್ರಮೀಳಾ ಮಾಧವ್, ಹೊಸಪೇಟೆ ವಿಜಯನಗರ ಕಾಲೇಜಿನ ಕನ್ನಡ ವಿಭಾಗದ ಮುಖ್ಯಸ್ಥ ಡಾ.ಎಸ್. ಶಿವಾನಂದ, ವಿಮ್ಸ ಮೆಡಿಕಲ್ ಕಾಲೇಜಿನ ಸಹ ಪ್ರಾಧ್ಯಾಪಕ ಡಾ.ವಿಶ್ವನಾಥ, ಸೇಂಟ್ ಫಿಲೋಮಿನಾ ಶಾಲೆಯ ಅಂಬು ಕ್ರಿಶ್ಚಿಯನ್, ಕಮಲಾಪುರದ ಸಿದ್ದೇಶ್ವರ ಶಾಲೆಯ ಶಿಕ್ಷಕಿ ಮುಕ್ತಿಯಾರ್ ಬೀ, ಚಿಕ್ಕಮಗಳೂರಿನ ನಿವೃತ್ತ ಅಧ್ಯಾಪಕ ಭೋಜ ಸಿ, ಸಿರುಗುಪ್ಪದ ವಿಜ್ಞಾನ ಶಿಕ್ಷಕ ಎಸ್.ಎಂ.ಹಿರೇಮಠ.2011ರ ಪ್ರಶಸ್ತಿಗೆ ಆಯ್ಕೆಯಾದವರು: ಕುವೆಂಪು ವಿವಿಯ ಪ್ರಾಧ್ಯಾಪಕ ಪ್ರೊ.ಎಂ. ಕೃಷ್ಣಪ್ಪ, ಬಳ್ಳಾರಿ ಕೃಷ್ಣ ದೇವರಾಯ ವಿವಿಯ ಕುಲಸಚಿವ ಡಾ.ರಂಗರಾಜ ವನದುರ್ಗ, ವಿಜಯ ನಗರ ಕಾಲೇಜಿನ ಸಹ ಪ್ರಾಧ್ಯಾಪಕ ಡಾ.ಮೃತ್ಯುಂಜಯ ರುಮಾಲೆ, ಕನ್ನಡ ವಿವಿಯ ಪ್ರಾಧ್ಯಾಪಕ ಡಾ.ಎಂ.ಬಿ. ಪುಟ್ಟಯ್ಯ, ಬಳ್ಳಾರಿ ಸರ್ಕಾರಿ ಕಾಲೇಜಿನ ಸಹಾಯಕ ಪ್ರಾಧ್ಯಾಪಕ ಡಾ.ಹೊನ್ನೂರ ಅಲಿ, ಹೊಸಪೇಟೆ ಸರ್ಕಾರಿ  ಶಾಲೆಯ ಮುಖ್ಯೋ ಪಾಧ್ಯಾಯ ಸಣ್ಣ ಈರಪ್ಪ, ಜಿಲ್ಲಾ ಲೋಕ ಶಿಕ್ಷಣ ಸಮಿತಿ ಸಹಾಯಕ ಸಿ.ನಿಂಗಪ್ಪ, ನಿವೃತ್ತ ಪ್ರಾಧ್ಯಾಪಕಿ ನಾಗರತ್ನಮ್ಮ, ದೀಪಾಯನ ಶಾಲೆಯ ಮುಖ್ಯೋಪಾಧ್ಯಾಯ ಎಸ್. ರವೀಂದ್ರನಾಥ, ಹನಸಿ ವಿಜ್ಞಾನ ಶಿಕ್ಷಕ ಸಿದ್ದನಗೌಡ.ಪ್ರಶಸ್ತಿ ಪ್ರದಾನ: ಸೋಮವಾರ ಹೊಸಪೇಟೆಯ ಮಲ್ಲಿಗೆ ಸಭಾಂಗಣ ದಲ್ಲಿ ಹಂಪಿ ಕನ್ನಡ ವಿಶ್ವವಿದ್ಯಾಲಯದ ಕುಲಪತಿ ಡಾ.ಎ.ಮುರಿಗೆಪ್ಪ ಪ್ರಶಸ್ತಿ ಪ್ರದಾನ ಮಾಡುವರು. ಶಾಸಕ ಆನಂದ ಸಿಂಗ್, ಕನ್ನಡ ಸೇನೆಯ ರಾಜ್ಯ ಘಟಕದ ಅಧ್ಯಕ್ಷ ಕೆ.ಆರ್.ಕುಮಾರ್ ಇತರರು ಪಾಲ್ಗೊಳ್ಳಲಿದ್ದಾರೆ ಎಂದರು.ಕನ್ನಡ ಸೇನೆಯ ಜಿಲ್ಲಾ ಘಟಕದ ಅಧ್ಯಕ್ಷ ವಸಂತ ಕುಮಾರ, ತಾಲ್ಲೂಕು ಅಧ್ಯಕ್ಷ ತಾರಿಹಳ್ಳಿ ವೆಂಕಟೇಶ ಹಾಜರಿದ್ದರು.

 

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.