ಗುರುವಾರ , ಜನವರಿ 23, 2020
20 °C

20 ಮಹಿಳಾ ವಿವಿಗೆ ಯುಜಿಸಿ ಪ್ರಸ್ತಾವನೆ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ನವದೆಹಲಿ, (ಪಿಟಿಐ): ಮಹಿಳೆಯರಿಗೆ ಉನ್ನತ ಹಾಗೂ ಗುಣಮಟ್ಟದ ಶಿಕ್ಷಣ ಒದಗಿಸುವ ನಿಟ್ಟಿನಲ್ಲಿ  ವಿಶ್ವವಿದ್ಯಾಲಯ ಧನಸಹಾಯ ಆಯೋಗವು (ಯುಜಿಸಿ)  ಅವರಿಗಾಗಿಯೇ ಮೀಸಲಿರುವ  20  ಮಹಿಳಾ ವಿಶ್ವವಿದ್ಯಾಲಯಗಳು ಸೇರಿದಂತೆ 800  ಕಾಲೇಜುಗಳನ್ನು ಸ್ಥಾಪಿಸಲು ಉದ್ದೇಶಿಸಿದೆ.ಮಹಿಳೆಯರಿಗೆ ಗುಣಮಟ್ಟದ ಶಿಕ್ಷಣ ನೀಡುವ ಭರವಸೆಯ ಹಿನ್ನೆಲೆಯಲ್ಲಿ 12ನೇ ಪಂಚವಾರ್ಷಿಕ ಯೋಜನೆಯ ಅಡಿಯಲ್ಲಿ ಈ ವಿಶೇಷ ಮಹಿಳಾ ವಿಶ್ವವಿದ್ಯಾಲಯ ಹಾಗೂ ಕಾಲೇಜುಗಳ ಸ್ಥಾಪನೆಗೆ ಮುಂದಾಗಿದೆ. ವಿಶ್ವವಿದ್ಯಾಲಯ ಧನಸಹಾಯ ಆಯೋಗವು, ಉದ್ದೇಶಿತ ಈ ಪ್ರಸ್ತಾವನೆಗಾಗಿಯೇ 12 ಪಂಚವಾರ್ಷಿಕ ಯೋಜನೆಯಲ್ಲಿ ನಿಗದಿ ಮಾಡಿದ್ದ 46,632 ಕೋಟಿ ಹಣದ ಪ್ರಸ್ತಾವನೆಯನ್ನು  ನಾಲ್ಕು ಪಟ್ಟು ಎಂದರೆ ರೂ.1,84,740 ಕೋಟಿಗೆ ಹೆಚ್ಚಿಸಿದೆ.

ಪ್ರತಿಕ್ರಿಯಿಸಿ (+)