ಶುಕ್ರವಾರ, ಮೇ 20, 2022
21 °C
ಪೂಜ್ಯ ದೊಡ್ಡಪ್ಪ ಅಪ್ಪ ಎಂಜಿನಿಯರಿಂಗ್ ಕಾಲೇಜು

20 ವಿದ್ಯಾರ್ಥಿಗಳಿಗೆ `ಚಿನ್ನ'ದ ಗರಿ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಗುಲ್ಬರ್ಗ: ವಿಶ್ವೇಶ್ವರಯ್ಯ ತಾಂತ್ರಿಕ ವಿಶ್ವವಿದ್ಯಾಲಯ ಅಡಿಯಲ್ಲಿ 2012ರಲ್ಲಿ ನಡೆದ ಎಂಜಿನಿಯರಿಂಗ್ ಪದವಿ ಹಾಗೂ ಸ್ನಾತಕೋತ್ತರ ಪರೀಕ್ಷೆಯಲ್ಲಿ ಗುಲ್ಬರ್ಗದ ಪೂಜ್ಯ ದೊಡ್ಡಪ್ಪ ಅಪ್ಪ (ಪಿಡಿಎ) ಎಂಜಿನಿಯರಿಂಗ್ ಕಾಲೇಜಿನ 796 ವಿದ್ಯಾರ್ಥಿಗಳು ತೇರ್ಗಡೆಯಾಗಿದ್ದು, ವಿವಿಧ ವಿಭಾಗಗಳಿಗೆ ನೀಡುವ ಒಟ್ಟು 24 ಚಿನ್ನದ ಪದಕಕ್ಕೆ 20 ವಿದ್ಯಾರ್ಥಿಗಳು ಭಾಜನರಾಗಿದ್ದಾರೆ.ಎಂಜಿನಿಯರಿಂಗ್ 11 ಪದವಿ ವಿಭಾಗದಲ್ಲಿ 660 ವಿದ್ಯಾರ್ಥಿಗಳು ತೇರ್ಗಡೆಯಾಗಿದ್ದು, ಅದರಲ್ಲಿ 12 ವಿದ್ಯಾರ್ಥಿಗಳು ಒಟ್ಟು 16 ಚಿನ್ನದ ಪದಕ ಪಡೆದಿದ್ದಾರೆ. ಎಂಜಿನಿಯರಿಂಗ್ 8 ಸ್ನಾತಕೋತ್ತರ ವಿಭಾಗದಲ್ಲಿ 136 ವಿದ್ಯಾರ್ಥಿಗಳು ತೇರ್ಗಡೆಯಾಗಿದ್ದು, ಪ್ರತಿ ವಿಭಾಗದಲ್ಲಿ ಗರಿಷ್ಠ ಅಂಕಗಳಿಸಿದ ಒಬ್ಬ ವಿದ್ಯಾರ್ಥಿಗೆ ಒಂದು ಚಿನ್ನದ ಪದಕ ನೀಡಲಾಗುತ್ತಿದೆ.ನಿದಾಗೆ ಐದು ಚಿನ್ನದ ಪದಕ: ಮಾಹಿತಿ ವಿಜ್ಞಾನ ಮತ್ತು ಎಂಜಿನಿಯರಿಂಗ್ ಪದವಿ ವಿಭಾಗದಲ್ಲಿ ಪಾಸಾದ ನಿದಾ ಸುಮೆಯಾ ವಿದ್ಯಾರ್ಥಿನಿಯು ಐದು ಚಿನ್ನದ ಪದಕ ಗೌರವಕ್ಕೆ ಪಾತ್ರರಾಗಿದ್ದಾರೆ. ಕಾಲೇಜಿಗೆ ಗರಿಷ್ಠ ಅಂಕ ಪಡೆದಿದ್ದಕ್ಕಾಗಿ 3, ವಿಭಾಗದಲ್ಲಿ ಗರಿಷ್ಠ ಅಂಕ ಪಡೆದಿದ್ದಕ್ಕಾಗಿ 1 ಹಾಗೂ ವಿದ್ಯಾರ್ಥಿನಿಯರಲ್ಲಿ ಗರಿಷ್ಠ ಅಂಕ ಪಡೆದಿದ್ದಕ್ಕಾಗಿ 1, ಒಟ್ಟು ಐದು ಚಿನ್ನದ ಪದಕಗಳನ್ನು ಪಡೆದಿದ್ದಾರೆ.ಒಂದು ಚಿನ್ನದ ಪದಕ ಪಡೆದವರು: ಪದವಿ ವಿಭಾಗ- ಶ್ರುತಿ (ಕಂಪ್ಯೂಟರ್ ಸೈನ್ಸ್ ), ಶ್ರುತಿ ಎಂ. (ಎಲೆಕ್ಟ್ರಿಕಲ್ ಆ್ಯಂಡ್ ಎಲೆಕ್ಟ್ರಾನಿಕ್), ಅಪೂರ್ವ ಜಿ. (ಇಂಡಸ್ಟ್ರೀಯಲ್ ಪ್ರೋಡಕ್ಷನ್ ), ಪ್ರೀತಿ ಒ.ಟಿ. (ಎಲೆಕ್ಟ್ರಾನಿಕ್ಸ್ ಆ್ಯಂಡ್ ಕಮ್ಯೂನಿಕೇಷನ್), ಗಿರೀಶ್ ಎಚ್. (ಮೆಕ್ಯಾನಿಕಲ್), ನಯನಾ ಆರ್. (ಸಿವಿಲ್), ವಿಜೇತಾ ಎಸ್.ಎಂ. (ಇನ್ಫಾರ್ಮೆಷನ್ ಟೆಕ್ನಾಲಾಜಿ), ಪ್ರಶಾಂತ ಎಸ್.ಎಂ. (ಅಟೋಮೊಬೈಲ್), ವೈಭವ ವಿ.ಎಂ. (ಆರ್ಟಿಟೆಕ್ಚರ್), ಅಮರಸಿಂಗ್ ಆರ್. (ಸೆರಾಮಿಕ್ ಆ್ಯಂಡ್ ಸಿಮೆಂಟ್  ಟೆಕ್ನಾಲಾಜಿ).ಸ್ನಾತಕೋತ್ತರ ವಿಭಾಗ- ತೃಪ್ತಿ (ಇನ್ಫಾರ್ಮೆಷನ್ ಸೈನ್ಸ್), ಅಶ್ವಿನಿ ಡಿ. (ಕಂಪ್ಯೂಟರ್ ಸೈನ್ಸ್), ಪಿ. ಶರಣಪ್ಪ ಎಂ. (ಥರ್ಮಲ್ ಪವರ್), ದಿಗಂಬರ (ಪ್ರೊಡಕ್ಷನ್), ತೃಪ್ತಿ ಎನ್.ಪಿ. (ಎನ್ವಿರಾನ್‌ಮೆಂಟ್), ಮುಖ್ತಾರ್ ಅಹ್ಮದ್ (ಸ್ಟ್ರಕ್ಚರಲ್), ಶಾಯಿಸ್ತಾ ಪರ್ವಿನ್ (ಬಯೋ ಮೆಡಿಕಲ್ ಎಲೆಕ್ಟ್ರಾನಿಕ್ಸ್ ಆ್ಯಂಡ್ ಇಂಡಸ್ಟ್ರೀಯಲ್ ಇನ್‌ಸ್ಟ್ರುಮೆಂಟೇಷನ್), ಪ್ರತಿಭಾ ಕೆ. (ಕಮ್ಯೂನಿಕೇಷನ್ ಸಿಸ್ಟಮ್), ಸಪ್ನಾ ಎಲ್. (ಪವರ್  ಎಲೆಕ್ಟ್ರಾನಿಕ್ಸ್).2ನೇ ಘಟಿಕೋತ್ಸವ ನಾಳೆ

ಗುಲ್ಬರ್ಗದ ಪೂಜ್ಯ ದೊಡ್ಡಪ್ಪ ಅಪ್ಪ ಎಂಜಿನಿಯರಿಂಗ್ (ಪಿಡಿಎ) ಕಾಲೇಜಿನ 2ನೇ ಘಟಿಕೋತ್ಸವ ಸಮಾರಂಭವು ಜುಲೈ 6ರಂದು ಬೆಳಿಗ್ಗೆ 11ಕ್ಕೆ ನಡೆಯಲಿದೆ ಎಂದು ಕಾಲೇಜಿನ ಆಡಳಿತ ಮಂಡಳಿಯ ಉಪಾಧ್ಯಕ್ಷ ಬಾಬುರಾವ ಮಂಗಾಣೆ ಗುರುವಾರ ಸುದ್ದಿಗೋಷ್ಠಿಯಲ್ಲಿ ವಿವರಿಸಿದರು.ನವದೆಹಲಿಯ ಎಐಸಿಟಿಇ ಅಧ್ಯಕ್ಷ ಡಾ.ಎಸ್.ಎಸ್. ಮಂಥಾ ಮುಖ್ಯ ಅತಿಥಿಯಾಗಿ ಆಗಮಿಸುವರು. ತಾಂತ್ರಿಕ ಶಿಕ್ಷಣ ನಿರ್ದೇಶನಾಲಯದ ಎಚ್.ಯು. ತಳವಾರ, ವಿಶ್ವೇಶ್ವರಯ್ಯ ತಾಂತ್ರಿಕ ವಿಶ್ವವಿದ್ಯಾಲಯದ ಕುಲಸಚಿವ ಡಾ. ಕೆ.ಇ. ಪ್ರಕಾಶ್ ಅತಿಥಿಯಾಗಿ ಆಗಮಿಸಲಿದ್ದಾರೆ ಎಂದರು.

ಎಚ್‌ಕೆಇ ಆಡಳಿತ ಮಂಡಳಿ ಅಧ್ಯಕ್ಷ ಶಶೀಲ್ ಜಿ. ನಮೋಶಿ ಸಮಾರಂಭದ ಅಧ್ಯಕ್ಷತೆ ವಹಿಸುವರು. ಆಡಳಿತ ಮಂಡಳಿಯ ಎಲ್ಲ ಪದಾಧಿಕಾರಿಗಳು ಹಾಗೂ ನಿರ್ದೇಶಕರು ಹಾಜರಾಗುವರು.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.