ಗುರುವಾರ, 28 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

20 ಅಭ್ಯರ್ಥಿಗಳ ನಾಮಪತ್ರ ವಾಪಸು

Last Updated 21 ಏಪ್ರಿಲ್ 2013, 10:23 IST
ಅಕ್ಷರ ಗಾತ್ರ

ಬೀದರ್: ವಿಧಾನಸಭೆ ಸಾರ್ವತ್ರಿಕ ಚುನಾವಣೆಗೆ ಜಿಲ್ಲೆಯ ಆರು ಕ್ಷೇತ್ರಗಳಿಂದ ಸಲ್ಲಿಸಿದ್ದ ನಾಮಪತ್ರಗಳನ್ನು ವಾಪಸು ಪಡೆಯಲು ಶನಿವಾರ ಕಡೆಯ ದಿನವಾಗಿದ್ದು, ಒಟ್ಟಾರೆ 20 ಅಭ್ಯರ್ಥಿಗಳು ತಮ್ಮ ಉಮೇದುವಾರಿಕೆ ವಾಪಸು ಪಡೆದಿದ್ದಾರೆ.

ಇವರ ಪೈಕಿ ಬಹುತೇಕ ಪಕ್ಷೇತರರಾಗಿ ನಾಮಪತ್ರ ಸಲ್ಲಿಸಿದ್ದವರು. ಕ್ಷೇತ್ರವಾರು ನಾಮಪತ್ರಗಳನ್ನು ವಾಪಸು ಪಡೆದ ಅಭ್ಯರ್ಥಿಗಳ ವಿವರ ಹೀಗಿದೆ.

ಬೀದರ್ ಕ್ಷೇತ್ರ:  ಮುಸ್ಲಿಂ ಲೀಗ್ ಸೆಕ್ಯುಲರ್ ಪಕ್ಷದ ಸಯ್ಯದ್ ಅಸ್ಲಂ ತಂದೆ ಸಯ್ಯದ್ ಇಷಾಕ್, ಪಕ್ಷೇತರ ಅಭ್ಯರ್ಥಿಗಳಾದ ಅಲೀ ಖಾನ್ ತಂದೆ ಎಂ.ಡಿ. ಖಾನ್, ನಯೀಮುದ್ದೀನ್ ತಂದೆ ರಹೀಂಮುದ್ದೀನ್, ಶ್ರೀಧರ್ ತಂದೆ ಶ್ರೀಪಾಲ್, ಸುದೇಶ್ ಕುಮಾರ್ ತಂದೆ ದೇವಿದಾಸ್, ಎಂ. ಸಯ್ಯದ್ ವಹೀದ್ ತಂದೆ ಸಯ್ಯದ್ ಶಬ್ಬೀರ್ ಅಲಿ. 

ಬೀದರ್ ದಕ್ಷಿಣ:  ಕರ್ನಾಟಕ ಮಕ್ಕಳ ಪಕ್ಷದ ಸಂಜಯ ತಂದೆ ಗುರುಬಸಪ್ಪ, ಪಕ್ಷೇತರ ಅಭ್ಯರ್ಥಿಗಳಾದ ಬಕ್ಕಪ್ಪ ತಂದೆ ಮಲ್ಲಪ್ಪ, ಪ್ರಭುಶೆಟ್ಟಿ ತಂದೆ ರಾಚಪ್ಪ, ಶರಣಯ್ಯ ತಂದೆ ಬಸವಲಿಂಗಯ್ಯ, ಶಿವಾಜಿ ತಂದೆ ಅಡೆಪ್ಪ, ಶಿವರಾಜ್ ತಂದೆ ರಾಮಣ್ಣ, ಸ್ವಾಮಿದಾಸ್ ತಂದೆ ಭಿಮಶಾ ಮತ್ತು ಸಯ್ಯದ್ ರಫಿಯುಲ್ಲಾ ತಂದೆ ಸಯ್ಯದ್ ರಹಮತ್ ಅಲಿ.

ಭಾಲ್ಕಿ ಕ್ಷೇತ್ರ:  ಪಕ್ಷೇತರ ಅಭ್ಯರ್ಥಿಗಳಾದ ಇಂದ್ರಜಿತ್ ರಾವ್ ತಂದೆ ರಾಮಚಂದ್ರ, ಅನಿಲ್ ತಂದೆ ನಾಗನಾಥ್ ಹಾಗೂ ವಿವೇಕಾನಂದ.
ಬಸವಕಲ್ಯಾಣ ಕ್ಷೇತ್ರ: ಲೋಕಸತ್ತಾ ಪಕ್ಷದ ಅಭ್ಯರ್ಥಿ ದೀಪಕ್.

ಔರಾದ್ ಮೀಸಲು:  ಪಕ್ಷೇತರ ಅಭ್ಯರ್ಥಿಗಳಾದ ಹಣಮಂತ ತಂದೆ ನಾಗಪ್ಪ ಹಾಗೂ ಬಾಬುರಾವ್ ತಂದೆ ಅರ್ಜುನ್.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT