200ನೇ ಟೆಸ್ಟ್‌ ಬಗ್ಗೆ ಯೋಚಿಸುತ್ತಿಲ್ಲ: ಸಚಿನ್‌

7

200ನೇ ಟೆಸ್ಟ್‌ ಬಗ್ಗೆ ಯೋಚಿಸುತ್ತಿಲ್ಲ: ಸಚಿನ್‌

Published:
Updated:

ನವದೆಹಲಿ (ಪಿಟಿಐ): ‘ನಾನು 23 ವರ್ಷಗಳಿಂದ ಕ್ರಿಕೆಟ್‌ ಆಡುತ್ತಿದ್ದೇನೆ. ಇಷ್ಟು ಪಂದ್ಯ ಆಡುತ್ತೇನೆ ಎಂದು ನಾನು ಯಾವತ್ತೂ ಯೋಚಿಸಿರಲಿಲ್ಲ. ಹಾಗಾಗಿ 200ನೇ ಪಂದ್ಯದ ಬಗ್ಗೆಯೂ ನಾನು ಹೆಚ್ಚು ಯೋಚಿಸುತ್ತಿಲ್ಲ’ ಎಂದು ಸಚಿನ್‌ ತೆಂಡೂಲ್ಕರ್‌ ತಿಳಿಸಿದ್ದಾರೆ.ಸಚಿನ್‌ ದಕ್ಷಿಣ ಆಫ್ರಿಕಾ ಪ್ರವಾಸದಲ್ಲಿ 200ನೇ ಟೆಸ್ಟ್‌ ಪಂದ್ಯ ಆಡಬೇಕಿತ್ತು. ಆದರೆ ಅದಕ್ಕೂ ಮುನ್ನವೇ ಬಿಸಿಸಿಐ ಸ್ವದೇಶದಲ್ಲಿ ವೆಸ್ಟ್‌ಇಂಡೀಸ್‌ ವಿರುದ್ಧ ಟೆಸ್ಟ್‌ ಸರಣಿ ಆಯೋಜಿಸಲು ಯೋಜನೆ ರೂಪಿಸಿದೆ. ಚಾಂಪಿಯನ್‌ ಬ್ಯಾಟ್ಸ್‌ಮನ್‌ ವಿದಾಯ ಹೇಳಲು ವೇದಿಕೆ ಎಂದೇ ಈ ಸರಣಿಯನ್ನು ಬಿಂಬಿಸಲಾಗಿದೆ.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry