ಶನಿವಾರ, ಮೇ 8, 2021
26 °C

200 ಕೋಟಿ ಡಾಲರ್ ದಾಟಿದ ಟೈಟಾನಿಕ್ ಗಳಿಕೆ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಲಾಸ್ ಏಂಜಲೀಸ್ (ಎಪಿ): ಖ್ಯಾತ ನಿರ್ದೇಶಕ ಜೇಮ್ಸ ಕ್ಯಾಮರಾನ್ ಅವರ ನಿರ್ದೇಶನದ `ಟೈಟಾನಿಕ್~ ಚಿತ್ರದ 3ಡಿ ಅವತರಣಿಗೆ ಬಿಡುಗಡೆಯಾಗುವುದರೊಂದಿಗೆ ಚಿತ್ರದ ಒಟ್ಟು ಗಳಿಕೆ 200 ಕೋಟಿ ಡಾಲರ್ (ಸುಮಾರು 10,000 ) ದಾಟಿದೆ.   ಕ್ಯಾಮರಾನ್ ಅವರು 1997ರಲ್ಲಿ `ಟೈಟಾನಿಕ್~ ಚಿತ್ರ ನಿರ್ದೇಶಿಸಿದ್ದರು. ಟೈಟಾನಿಕ್ ಹಡಗು ದುರಂತ ಸಂಭವಿಸಿ 100 ವರ್ಷ ಸಂದ ಸಂದರ್ಭದಲ್ಲಿಯೇ ಚಿತ್ರವು 3ಡಿ ರೂಪದಲ್ಲಿ ಮತ್ತೆ ಬಿಡುಗಡೆಯಾಗಿದ್ದು, ಚಿತ್ರದ ಒಟ್ಟು ಗಳಿಕೆಯು 200 ಕೋಟಿ ಡಾಲರ್ ದಾಟಿದೆ.  ಇದಕ್ಕಿಂತಲೂ ಮೊದಲು, 2009ರಲ್ಲಿ  `ಅವತಾರ್~ ಚಿತ್ರ 208 ಕೋಟಿ ಡಾಲರ್ ಸಂಪಾದಿಸಿತ್ತು. ಈ ಚಿತ್ರವನ್ನು ಕೂಡ ಕ್ಯಾಮರಾನ್ ಅವರೇ ನಿರ್ದೇಶಿಸಿದ್ದರು.  ಕಳೆದ ವಾರಾಂತ್ಯದಲ್ಲಿ ಟೈಟಾನಿಕ್-3ಡಿ ಚಿತ್ರ ವಿಶ್ವದಾದ್ಯಂತ ಒಟ್ಟು 10 ಕೋಟಿ ಡಾಲರ್ ಸಂಪಾದಿಸಿದೆ. ಅಮೆರಿಕದಲ್ಲಿ ಒಟ್ಟು 1.16 ಕೋಟಿ ಡಾಲರ್‌ನ್ನು ಗಳಿಸಿದರೆ  ಇತರ 69 ರಾಷ್ಟ್ರಗಳಲ್ಲಿ 8.82 ಕೋಟಿ ಡಾಲರ್‌ನ್ನು ಸಂಪಾದಿಸಿದೆ. ಟೈಟಾನಿಕ್ ಚಿತ್ರ ಮೊದಲ ಬಾರಿಗೆ ಅಂದರೆ 1997ರಲ್ಲಿ ಬಿಡುಗಡೆಯಾದಾಗ ಒಟ್ಟು 184ಕೋಟಿ  ಡಾಲರ್ ಸಂಪಾದಿಸಿತ್ತು.

ಫಲಿತಾಂಶ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.