2007ರ ತಪ್ಪುಗಳಿಂದ ಪಾಠ ಕಲಿತಿದ್ದೇವೆ: ಆ್ಯಂಡ್ರ್ಯೂ ಸ್ಟ್ರಾಸ್

7

2007ರ ತಪ್ಪುಗಳಿಂದ ಪಾಠ ಕಲಿತಿದ್ದೇವೆ: ಆ್ಯಂಡ್ರ್ಯೂ ಸ್ಟ್ರಾಸ್

Published:
Updated:

ಢಾಕಾ (ಐಎಎನ್‌ಎಸ್): ಈ ಬಾರಿ ಖಂಡಿತವಾಗಿಯೂ ವಿಶ್ವಕಪ್ ಗೆದ್ದೇ ಗೆಲ್ಲುತ್ತೇವೆ ಎನ್ನುವ ವಿಶ್ವಾಸ ಕ್ರಿಕೆಟ್ ಜನಕರ ನಾಡು ಇಂಗ್ಲೆಂಡ್ ತಂಡದ ನಾಯಕ ಆ್ಯಂಡ್ರ್ಯೂ ಸ್ಟ್ರಾಸ್‌ರದ್ದು!2007ರ ವಿಶ್ವಕಪ್ ಟೂರ್ನಿಯಲ್ಲಿ ಮಾಡಿದ ತಪ್ಪುಗಳನ್ನು ನಾವು ಅರಿ ತಿದ್ದೇವೆ. ಈ ಬಾರಿ ಅಂತಹ ತಪ್ಪುಗಳಿಗೆ ಅವಕಾಶ ಇಲ್ಲ. ತಮ್ಮ ತಂಡ ಗಂಭೀರ ವಾಗಿ ಸಿದ್ಧತೆ ಮಾಡಿಕೊಂಡು ಬಂದಿದೆ. ಎಂತಹ ಬಲಿಷ್ಠ ತಂಡ ಬಂದರೂ ಉತ್ತಮ ಪ್ರದರ್ಶನ ನೀಡುವ ಆತ್ಮ ವಿಶ್ವಾಸ ನಮ್ಮಲಿದೆ ಎಂದು ನುಡಿಯುತ್ತಾರ ಸ್ಟ್ರಾಸ್.

‘ಪಾಲ್ ಕಾಲಿಂಗ್‌ವುಡ್ ನೇತೃತ್ವದಲ್ಲಿ ಗೆದ್ದಿರುವ ಟ-20 ವಿಶ್ವಕಪ್ ಅನ್ನು ಇಂಗ್ಲೆಂಡ್ ತಂಡ ಗೆದ್ದು ಕೊಂಡಿದೆ. ಅದರೊಂದಿಗೆ ಏಕದಿನ ಕ್ರಿಕೆಟ್ ವಿಶ್ವಕಪ್ ಅನ್ನು ಗೆಲುವಿನ ಸಾಧನೆಯೂ ಸೇರಬೇಕು.ಆಸ್ಟ್ರೇಲಿಯ ವಿರುದ್ಧ ಏಕದಿನ ಸರಣಿಯನ್ನು ಸೋತಿರುವುದು ವಿಶ್ವಕಪ್ ಟೂರ್ನಿ ಪ್ರದರ್ಶನದ ಮೇಲೆ ಯಾವುದೇ ಪರಿಣಾಮ ಬೀರುವುದಿಲ್ಲ’ ಎಂದರು.ಗಾಯಾಳುಗಳ ಸಮಸ್ಯೆಯಿಂದ ನರಳುತ್ತಿರುವ ಇಂಗ್ಲೆಂಡ್ ತಂಡಕ್ಕೆ ಮಧ್ಯಮ ಕ್ರಮಾಂಕದ ಬ್ಯಾಟ್ಸ್‌ಮನ್ ಇಯಾನ್ ಮೊರ್ಗನ್, ವೇಗಿಗಳಾದ ಟಿಮ್ ಬ್ರೆಸ್ನಾನ್, ಅಜ್ಮಲ್ ಶಹಜಾದ್ ಫಿಟ್‌ನೆಸ್ ಬಗ್ಗೆ ಚಿಂತೆಯಿದೆ. ಸ್ಟುವರ್ಟ್ ಬ್ರಾಡ್ ಮತ್ತೆ ಫಿಟ್ ಆಗಿ ಆಟಕ್ಕಿಳಿಯುವ ವಿಶ್ವಾಸ ಸ್ಟ್ರಾಸ್‌ಗಿದೆ.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry