ಶನಿವಾರ, ಜನವರಿ 18, 2020
21 °C

2008ರ ಸ್ಫೋಟ ಪ್ರಕರಣ: ಭಟ್ಕಳ್, ಆಪ್ತ ಪೊಲೀಸ್‌ ವಶಕ್ಕೆ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ನವದೆಹಲಿ (ಪಿಟಿಐ): 2008ರ ಸೆಪ್ಟಂಬರ್‌ 13 ರಂದು ಇಲ್ಲಿ ನಡೆದಿದ್ದ ಸರಣಿ ಬಾಂಬ್‌ಸ್ಫೋಟ ಪ್ರಕರಣಕ್ಕೆ ಸಂಬಂಧಿಸಿದಂತೆ ಸ್ಥಳೀಯ ನ್ಯಾಯಾಲಯವೊಂದು ಇಂಡಿಯನ್‌ಮುಜಾಹಿದ್ದೀನ್‌ ಸಹ ಸಂಸ್ಥಾಪಕ ಯಾಸೀನ್‌ ಭಟ್ಕಳ್‌ ಹಾಗೂ ಅವನ ಆಪ್ತ ಅಸಾದುಲ್ಲಾಹ್ ಅಖ್ತರ್‌ನನ್ನು ಡಿಸೆಂಬರ್‌ 20ರ ವರೆಗೂ ದೆಹಲಿ ಪೊಲೀಸ್ ವಶಕ್ಕೆ ನೀಡಿದೆ.

2010ರ ಸೆಪ್ಟೆಂಬರ್‌ನಲ್ಲಿ ಇಲ್ಲಿನ ಜುಮ್ಮಾ ಮಸೀದಿ ಭಯೋತ್ಪಾದಕ ದಾಳಿ ಪ್ರಕರಣದಲ್ಲಿ ಭಟ್ಕಳ್ ಹಾಗೂ ಅಖ್ತರ್ ವಶದ ಅವಧಿ ಮುಕ್ತಾಯಗೊಂಡಿದ್ದರಿಂದ, ಹೆಚ್ಚುವರಿ ಸೆಶನ್ಸ್‌ ನ್ಯಾಯಾಧೀಶ ದಯಾ ಪ್ರಕಾಶ್  ಎದುರು ಅವರನ್ನು ಹಾಜರು ಪಡಿಸಲಾಯಿತು.

ಜಮ್ಮಾ ಮಸೀದಿ ಭಯೋತ್ಪಾದಕ ದಾಳಿ ಪ್ರಕರಣದಲ್ಲಿ ಉಭಯ ಆರೋಪಿಗಳ ವಶದ ಅಗತ್ಯವಿಲ್ಲ ಎಂದು ದೆಹಲಿ ಪೊಲೀಸ್ ಘಟಕದ ವಿಶೇಷ ವಿಭಾಗ ನ್ಯಾಯಾಲಯಕ್ಕೆ ಹೇಳಿತು. ಆದರೆ 2008ರ ಸೆಪ್ಟಂಬರ್‌13 ರಂದು ಕರೋಲ್ ಬಾಗ್‌ನಲ್ಲಿ ನಡೆದ ಸ್ಫೋಟ ಸಂಬಂಧ, ಅವರ  ವಿಚಾರಣೆ ಅಗತ್ಯವಿದೆ ಎಂದು ಹೇಳಿದರು.

ಪೊಲೀಸರು ಮನವಿಯನ್ನು ಪುರಸ್ಕರಿಸಿದ ನ್ಯಾಯಾಲಯ, ಉಭಯ ಭಟ್ಕಳ್‌ ಹಾಗೂ ಅಖ್ತರ್‌ನನ್ನು ಡಿಸೆಂಬರ್‌20ರ ವರೆಗೂ ವಶಕ್ಕೆ ನೀಡಿ ಆದೇಶಿಸಿತು.

ನಗರದ ಕರೋಲ್ ಬಾಗ್‌ಸ್ಫೋಟ ಪ್ರಕರಣದಲ್ಲಿ 26 ಮಂದಿ ಸಾವನ್ನಪ್ಪಿ 135 ಮಂದಿ ಗಾಯಗೊಂಡಿದ್ದರು.

ಪ್ರತಿಕ್ರಿಯಿಸಿ (+)