ಮಂಗಳವಾರ, 23 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

2011:ಅಪ್ಲಿಕೇಷನ್ಸ್‌ಗಳ ವರ್ಷ

Last Updated 3 ಜನವರಿ 2012, 19:30 IST
ಅಕ್ಷರ ಗಾತ್ರ

ಮೊಬೈಲ್ ಅಪ್ಲಿಕೇಷನ್ಸ್‌ಗಳ ಅಭಿವೃದ್ಧಿಯಲ್ಲಿ ಹೊಸ ದಾಖಲೆ ಬರೆದ ವರ್ಷ 2011. ಸೀರೆ ಉಡುವುದು ಹೇಗೆ ಎನ್ನುವುದರಿಂದ ಹಿಡಿದು, ಆಗಸದಲ್ಲಿರುವ ಚುಕ್ಕಿಗಳನ್ನು ಎಣಿಸುವಂತ ಅಪ್ಲಿಕೇಷನ್ಸ್‌ಗಳೂ ಈ ಅವಧಿಯಲ್ಲಿ ಹೊರಬಂದವು.  ಮಾರುಕಟ್ಟೆ ಅಧ್ಯಯನ ಸಂಸ್ಥೆ `ಗಾರ್ಟ್‌ನರ್~ ಅಂದಾಜಿಸಿರುವಂತೆ ಸುಮಾರು 7 ಲಕ್ಷದಷ್ಟು ಹೊಸ ಅಪ್ಲಿಕೇಷನ್ಸ್‌ಗಳು ಕಳೆದ 10 ತಿಂಗಳಲ್ಲಿ ಅಭಿವೃದ್ಧಿಯಾಗಿವೆ. 

ಸದ್ಯದ ಬೆಳವಣಿಗೆ ಗಮನಿಸಿದರೆ ಮಾರುಕಟ್ಟೆ  ಏಕಸ್ವಾಮ್ಯ ಹೊಂದಿರುವ ಆ್ಯಪಲ್ `ಆ್ಯಪ್‌ಸ್ಟೋರ್ ಅನ್ನು ಗೂಗಲ್ ಆಂಡ್ರಾಯ್ಡ ಶೀಘ್ರದಲ್ಲೇ ಹಿಂದಿಕ್ಕುವ ಸೂಚನೆಗಳು ಕಾಣುತ್ತಿವೆ.  ಕಳೆದ 5 ವರ್ಷಗಳಲ್ಲಿ ಆಂಡ್ರಾಯ್ಡನ  7 ಪರಿಷ್ಕೃತ ಆವೃತ್ತಿಗಳು ಬಿಡುಗಡೆಯಾಗಿವೆ. ಈ ಹಿನ್ನೆಲೆಯಲ್ಲಿ 2012ರ ಮಧ್ಯದ ವೇಳೆಗೆ ಜಾಗತಿಕ ಅಪ್ಲಿಕೇಷನ್ ಮಾರುಕಟ್ಟೆಯಲ್ಲಿ ಆಂಡ್ರಾಯ್ಡ ಪಾಲು ಶೇ 50ನ್ನು ದಾಟಲಿದೆ ಎನ್ನುತ್ತದೆ ಗಾರ್ಟ್‌ನರ್.

ಡಿಸೆಂಬರ್ ತಿಂಗಳ ಅಂಕಿ ಅಂಶಗಳ ಪ್ರಕಾರ, ಗೂಗಲ್ `ಆಂಡ್ರಾಯ್ಡ~ 10 ಶತಕೋಟಿಗಳಷ್ಟು ಬಾರಿ ಡೌನ್‌ಲೋಡ್ ಆಗಿದೆ. `ಆ್ಯಪ್ ಸ್ಟೋರ್~ನಿಂದ ಈ ಅವಧಿಯಲ್ಲಿ 15 ಶತಕೋಟಿಗಳಷ್ಟು ಅಪ್ಲಿಕೇಷನ್ಸ್‌ಗಳು ಡೌನ್‌ಲೋಡ್ ಆಗಿವೆ.

ಹೆಚ್ಚುತ್ತಿರುವ ಸ್ಮಾರ್ಟ್‌ಫೋನ್‌ಗಳ ಬಳಕೆ ಮತ್ತು ಮೊಬೈಲ್ ಕಂಪ್ಯೂಟಿಂಗ್ ಜನಪ್ರಿಯತೆ ಅಪ್ಲಿಕೇಷನ್ಸ್‌ಗಳ ಬೇಡಿಕೆ  ಇಮ್ಮಡಿಗೊಳಿಸಿದೆ. ಸದ್ಯ ಸರಾಸರಿ ತಿಂಗಳೊಂದಕ್ಕೆ ಒಂದು ಶತಕೋಟಿಗಳಷ್ಟು ಅಪ್ಲಿಕೇಷನ್ಸ್‌ಗಳು ಡೌನ್‌ಲೋಡ್ ಆಗುತ್ತಿವೆ. `ಆಂಡ್ರಾಯ್ಡ ತಂತ್ರಾಂಶ ಪ್ರಾರಂಭದಲ್ಲಿ ಒಂದು ಶತಕೋಟಿ ಡೌನ್‌ಲೋಡ್ ಗಡಿ ದಾಟಲು  22 ತಿಂಗಳು ಸಮಯ ತೆಗೆದುಕೊಂಡಿತು. ಆದರೆ, ನಂತರದ 3 ತಿಂಗಳಲ್ಲಿ ಡೌನ್‌ಲೋಡ್‌ಗಳ ಸಂಖ್ಯೆ 9ರಿಂದ 10 ಶತಕೋಟಿಗಳಿಗೆ ಏರಿಕೆ ಕಂಡಿತು.
 
ಸದ್ಯ `ಆ್ಯಪ್ ಸ್ಟೋರ್‌ನಲ್ಲಿ 6 ಲಕ್ಷದಷ್ಟು ಅಪ್ಲಿಕೇಷನ್ಸ್‌ಗಳು ಲಭ್ಯಇವೆ. ಆದರೆ, ಎಷ್ಟೇ ಹೊಸ ಅಪ್ಲಿಕೇಷನ್ಸ್‌ಗಳು ಬಂದರೂ ಬಳಕೆದಾರ ತನಗೆ ಇಷ್ಟವಾದ ಸೀಮಿತ ಸೇವೆಗಳನ್ನು ಮಾತ್ರ ಬಳಸಲು ಇಷ್ಟಪಡುತ್ತಾರೆ. ಹೆಚ್ಚಿನವರು ಅಪ್ಲಿಕೇಷನ್ಸ್‌ಗಳ ಗುಣಮಟ್ಟ ಮತ್ತು ಸುರಕ್ಷತೆಗೆ ಹೆಚ್ಚಿನ ಗಮನ ಹರಿಸುತ್ತಾರೆ.

ಈಗಂತೂ ಸ್ಮಾರ್ಟ್‌ಫೋನ್‌ಗಳನ್ನು ಬಹುಮಾಧ್ಯಮ ಉಪಕರಣವಾಗಿ ಬಳಸುತ್ತಿರುವುದರಿಂದ ಈ ಅಪ್ಲಿಕೇಷನ್ಸ್‌ಗಳ ಗುಚ್ಚ ಜೇಬಿನಲ್ಲಿ ಇಟ್ಟುಕೊಳ್ಳಬಹುದಾದ ಬಹೂಪಯೋಗಿ ಸ್ವಿಟ್ಜರ್‌ಲೆಂಡ್ ಚಾಕುವಿನಂತೆ ಆಗಿದೆ ಎನ್ನುತ್ತಾರೆ ಮೊಬೈಲ್ ಮಾರುಕಟ್ಟೆ ತಜ್ಞರು.

ಬದಲಾಗುತ್ತಿರುವ ಗ್ರಾಹಕರ ಆದ್ಯತೆಗಳಿಗೆ ತಕ್ಕಂತೆ ಹೊಸ ಹೊಸ ಅಪ್ಲಿಕೇಷನ್ಸ್‌ಗಳು ಮಾರುಕಟ್ಟೆಗೆ ಬರುತ್ತಲೇ ಇವೆ. ಈ ಹಿನ್ನೆಲೆಯಲ್ಲಿ, ಪ್ರವರ್ಧಮಾನಕ್ಕೆ ಬರುತ್ತಿರುವ ಹೊಸ ಅಪ್ಲಿಕೇಷನ್ಸ್ ಅಭಿವೃದ್ಧಿದಾರರಿಗೆ `ಗೂಗಲ್ ಆಂಡ್ರಾಯ್ಡ~ ದೊಡ್ಡದೊಂದು ವೇದಿಕೆಯನ್ನೇ ಸೃಷ್ಟಿಸಿದೆ.

ವಿಶೇಷವಾಗಿ ಭಾರತೀಯ ಬಳಕೆದಾರರು ಅದರಲ್ಲೂ ನೋಕಿಯಾ ಸಿಂಬಿಯಾನ್ ತಂತ್ರಾಂಶದಿಂದ `ಆಂಡ್ರಾಯ್ಡ~ಗೆ ಬದಲಾಗಲು ಬಯಸುವವರಿಗೆ ಈ ವೇದಿಕೆಯು ಹೊಸ ಸಾಧ್ಯತೆಗಳನ್ನು ಸೃಷ್ಟಿಸಿದೆ. ಇತ್ತೀಚೆಗಷ್ಟೇ `ಆಂಡ್ರಾಯ್ಡ~ ಸಿಂಬಿಯಾನ್ ಅನ್ನು ಹಿಂದಿಕ್ಕಿ ಜಗತ್ತಿನ ಅತ್ಯಂತ ಜನಪ್ರಿಯ ಮೊಬೈಲ್ ಕಾರ್ಯ ನಿರ್ವಹಣಾ ತಂತ್ರಾಂಶ (ಒಎಸ್) ಪಟ್ಟ ವನ್ನೂ ಅಲಂಕರಿಸಿದೆ.

ಐಫೋನ್ ಸುಗ್ಗಿ: ಆ್ಯಪಲ್ ಐಫೋನ್ ಬಳಕೆದಾರರಿಗೆ 2011 ಸುಗ್ಗಿಯ ವರ್ಷ. ಅಪ್ಲಿಕೇಷನ್ಸ್‌ಗಳ ಮಹಾಪೂರವೇ ಈ ಅವಧಿಯಲ್ಲಿ ಹರಿದುಬಂದಿತು. ಆದರೆ, ಕಳೆದ ವರ್ಷಕ್ಕೆ ಹೋಲಿಸಿದರೆ ಉತ್ತಮ ಎನಿಸಿಕೊಂಡವು ಬೆರಳೆಣಿಕೆಯ ಅಪ್ಲಿಕೇಷನ್ಸ್‌ಗಳು ಮಾತ್ರ. ಇವುಗಳಲ್ಲಿ 10 ಅತ್ಯತ್ತಮ ಅಪ್ಲಿಕೇಷನ್ಸ್‌ಗಳನ್ನು ಈ ಕೆಳಗಿನಂತೆ ಪಟ್ಟಿ ಮಾಡಬಹುದು.

ಪ್ಲಿಪ್‌ಬೋರ್ಡ್ (Flip­board):  ಟ್ವಿಟ್ಟರ್, ಫೇಸ್‌ಬುಕ್ ಮತ್ತು ಇತರೆ ಸಾಮಾಜಿಕ ಸಂವಹನ ತಾಣಗಳನ್ನು ಪೂರ್ಣ ದೃಶ್ಯ ಪರದೆಯಲ್ಲಿ ವೀಕ್ಷಿಸಬಹುದಾದ ಮತ್ತು ಸಂಪರ್ಕಿಸಬಹುದಾದ ಸರಳ ಆಪ್ಲಿಕೇಷನ್. ಇತ್ತೀಚೆಗೆ ಐಫೋನ್ ಉಚಿತ ಆವೃತ್ತಿ ಕೂಡ ಬಿಡುಗಡೆಯಾಗಿದೆ.

ಬ್ಯಾಂಡ್ ಆಫ್ ದ ಡೆ Band of the Day: ರೇಡಿಯೊದಲ್ಲಿ ಪ್ರಸಾರವಾಗುವ ಹೊಸ ಹಾಡುಗಳನ್ನು ರೆಕಾರ್ಡ್ ಮಾಡಿಕೊಂಡು ಕೇಳಲು ಬಳಸುವ ಉಚಿತ ಅಪ್ಲಿಕೇಷನ್. ಇದನ್ನು ಬಳಸಿ ಜಾಹೀರಾತು ಮುಕ್ತ  ಸಂಗೀತ ಆಲಿಸಬಹುದು. ಆಯ್ಕೆಗೆ ತಕ್ಕಂತೆ ಹಾಡುಗಳ ಪಟ್ಟಿ ಮಾಡಿಕೊಳ್ಳಬಹುದು.

ಮೈಸ್ವಿಂಗ್: ಖ್ಯಾತ ಗಾಲ್ಫ್ ಆಟಗಾರ ಟೈಗರ್ ವುಡ್ ಅವರ ತರಬೇತಿ ಮಾರ್ಗದರ್ಶನಗಳನ್ನು ಒಳಗೊಂಡ ಅಪ್ಲಿಕೇಷನ್ ಇದು. ಈ ವರ್ಷದ ಅತ್ಯುತ್ತಮ ಕ್ರೀಡಾ ಅಪ್ಲಿಕೇಷನ್ ಎನ್ನುವ ಹೆಗ್ಗಳಿಕೆಗೂ ಮೈಸ್ವಿಂಗ್ ಪಾತ್ರವಾಗಿದೆ. ಗಾಲ್ಫ್  ತರಬೇತಿ ಪಡೆಯುತ್ತಿರುವವರು ಈ ಅಪ್ಲಿಕೇಷನ್ಸ್ ಬಳಸಿ ತಮ್ಮ ಆಟದ ಕೌಶಲ್ಯ ಹೆಚ್ಚಿಸಿಕೊಳ್ಳಬಹುದು.
ಸ್ಕೈವ್ಯೆವ್ SkyView: ನಕ್ಷತ್ರಗಳು, ಗ್ರಹಗಳು, ಆಕಾಶದ ಕುರಿತು ಆಸಕ್ತಿ ಹೊಂದಿರುವ ಖಗೋಳ ವೀಕ್ಷಕರಿಗೆ ಅತ್ಯುತ್ತಮ ಅಪ್ಲಿಕೇಷನ್ ಇದು. ಐಫೋನ್ ತೆರೆದು ಆಕಾಶದ ಯಾವುದೋ ಒಂದು  ಭಾಗದ ಚಿತ್ರ ತೆಗೆದರೆ ಸಾಕು. ಆ ಭಾಗದಲ್ಲಿರುವ ಕಾಯಗಳ ಕುರಿತು ಈ ಅಪ್ಲಿಕೇಷನ್ ಸಂಪೂರ್ಣ ವಿವರ ನೀಡುತ್ತದೆ. ಸ್ಕೈವ್ಯೆವ್‌ನ ಡೌನ್‌ಲೋಡ್ ದರ  100.

ಗೂಗಲ್ ಟ್ರಾನ್ಸ್‌ಲೇಟ್ Google Translate:    ಆ್ಯಪ್‌ಲ್ ಬಳಕೆದಾರರು ಈ ವರ್ಷದಿಂದ ಗೂಗಲ್ ಭಾಷಾಂತರ ಸೇವೆ ಪಡೆಯುತ್ತಿದ್ದಾರೆ. ಗೂಗಲ್ ಟ್ರಾನ್ಸ್‌ಲೇಟ್‌ನ ಉಚಿತ ಆವೃತ್ತಿ ಐಫೋನ್ ಬಳಕೆದಾರರಿಗೆ ಲಭ್ಯವಿದೆ. ಇದನ್ನು ಬಳಸಿ ಆಡುಮಾತನ್ನು ಪಠ್ಯಕ್ಕೆ ಪರಿವರ್ತಿಸಬಹುದು. ಸದ್ಯ 17 ವಿದೇಶಿ ಭಾಷೆಗಳಲ್ಲಿ ಈ ಸೇವೆ ಲಭ್ಯವಿದೆ.

ವಿದ್‌ರಿದಮ್ VidRhythm: ಇದೊಂದು ವಿನೋದದ ಅಪ್ಲಿಕೇಷನ್. ವಿವಿಧ ಧ್ವನಿ ಮತ್ತು ದೃಶ್ಯಗಳನ್ನು ಸಂಗ್ರಹಿಸಿ ನಂತರ ಅವುಗಳನ್ನು ಸಂಯೋಜಿಸಿ ಹೊಸ ಸಂಗೀತದ ಅಲೆ  ಸೃಷ್ಟಿಸಬಹುದು. ಧ್ವನಿ, ದೃಶ್ಯ ಸಂಕಲನಕ್ಕೂ ಅವಕಾಶವಿದೆ. ಫೇಸ್‌ಬುಕ್ ಮತ್ತು ಯೂಟ್ಯೂಬ್ ತಾಣಗಳಿಗೆ  ನೇರವಾಗಿ ಸಂಪರ್ಕ ಸಾಧಿಸಿ ದೃಶ್ಯ ತುಣುಕುಗಳನ್ನು ಬೇಕಾದ ಹಾಗೆ ಸಂಕಲನ ಮಾಡಬಹುದಾದುದು ಇದರ ವಿಶೇಷತೆ.

ಡ್ರ್ಯಾಗನ್ ಗೊ Dragon Go:  ಐಫೋನ್  ಬಳಕೆದಾರರು ತಮಗೆ ಬೇಕಾದ ಮಾಹಿತಿಯನ್ನು ಅತ್ಯಂತ ಸುಲಭವಾಗಿ ಹುಡುಕಲು ಬಳಸುವ ಉಚಿತ ಅಪ್ಲಿಕೇಷನ್. `ಸರ್ಚ್~ ಸೌಲಭ್ಯದಂತೆ ಇದು ಕಾರ್ಯನಿರ್ವಹಿಸುತ್ತದೆ.

ಲಿಸ್ಟ್ Wunderlist:  ಸುಲಭವಾಗಿ  ನೆನಪಿನ ಓಲೆಗಳನ್ನು ಕಳುಹಿಸಿಲು, ಮಾಹಿತಿಗಳನ್ನು ಕ್ರೋಡಿಕರಿಸಲು, ಕೆಲಸದ ಪಟ್ಟಿಯನ್ನು ತಯಾರಿಸಲು ಈ ಉಚಿತ ಅಪ್ಲಕೇಷನ್ ನೆರವಿಗೆ ಬರುತ್ತದೆ.

ಗ್ಯಾರೇಜ್ ಬ್ಯಾಂಡ್ Garage­Band:  ಆ್ಯಪಲ್‌ನ ಡೆಸ್ಕ್‌ಟಾಪ್ ಆವೃತ್ತಿ. ವೃತ್ತಿಪರ ಸಂಗೀತಗಾರರಿಗೆ  ಹೆಚ್ಚಿನ ಅನುಕೂಲ ಇರುವ ಈ ಅಪ್ಲಿಕೇಷನ್‌ನ ಮೊಬೈಲ್ ಆವೃತ್ತಿ ಬೆಲೆ ರೂ250.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT