2012ಕ್ಕೆ ಪ್ರಳಯ. ಬರೀ ಬೊಗಳೆ - ನಾಸಾ

7

2012ಕ್ಕೆ ಪ್ರಳಯ. ಬರೀ ಬೊಗಳೆ - ನಾಸಾ

Published:
Updated:
2012ಕ್ಕೆ ಪ್ರಳಯ. ಬರೀ ಬೊಗಳೆ - ನಾಸಾ

ವಾಷಿಂಗ್ಟನ್ (ಐಎಎನ್‌ಎಸ್): 2012ಕ್ಕೆ ಮಹಾಪ್ರಳಯ ಸಂಭವಿಸಿ ಇಡೀ ಭುವಿ ನಾಶವಾಗಲಿದೆ ಎಂಬ ಸಮೂಹ ಸನ್ನಿ ಎಲ್ಲೆಡೆ ವ್ಯಾಪಿಸಿದೆ. 2012 ರಲ್ಲಿ ಸೂರ್ಯನಿಂದ ಹೊರಹೊಮ್ಮುವ ದೈತ್ಯ ಸೌರ ಜ್ವಾಲೆಗಳು ಭೂಮಂಡಲಕ್ಕೆ ಸಂಚಕಾರ ತರಲಿದೆ ಎಂಬ ಕೆಲವರ ಆತಂಕವನ್ನು ಅಮೆರಿಕದ ಬಾಹ್ಯಾಕಾಶ ಸಂಸ್ಥೆ ನಾಸಾ ಸಾರಸಗಟಾಗಿ ತಳ್ಳಿ ಹಾಕಿದೆ.ದೈತ್ಯ ಸೌರ ಜ್ವಾಲೆಗಳು ಸೂರ್ಯನಿಂದ ಹೊರಹೊಮ್ಮುವುದು ಖಚಿತ ಎಂದಿರುವ ನಾಸಾ, ಅವು ಭೂಮಿಯನ್ನು ತಲುಪುವುದಿಲ್ಲ ಎಂದು ಸ್ಪಷ್ಟಪಡಿಸಿದೆ. ಇದರಿಂದ ಭೂಮಿಯ ಮೇಲೆ ಯಾವುದೇ ಪ್ರಳಯ ಸಂಭವಿಸಲಾರದು ಎಂದು ಹೇಳಿದೆ. ಆದರೆ ದೈತ್ಯ ಸೌರ ಜ್ವಾಲೆಗಳಿಂದ ಉಂಟಾಗುವ ವಿದ್ಯುತ್ ಕಾಂತೀಯ ವಿಕರಣದಿಂದ ನಮ್ಮ ರೇಡಿಯೊ ತರಂಗಗಳಿಗೆ ಹಾಗೂ ಸಂಹವನ ವ್ಯವಸ್ಥೆಯ ಉಪಗ್ರಹಗಳ ಕಾರ್ಯಾಚರಣೆಗೆ ಅಲ್ಪಪ್ರಮಾಣದಲ್ಲಿ  ತೊಂದರೆ ಮಾಡಬಹುದು ಎಂದು ಹೇಳಿದೆ.ಅದೂ ಈ ದೈತ್ಯ ಸ್ವಾರಜ್ವಾಲೆಗಳು ಹೊರಹೊಮ್ಮುವುದು 2012ರಲ್ಲಿ ಅಲ್ಲ. ಬದಲಿಗೆ 2013ರ ಕೊನೆ ಅಥವಾ 2014ನೇ ವರ್ಷದ ಆರಂಭದಲ್ಲಿ ಎಂದು ವಿಜ್ಞಾನಿಗಳು ತಿಳಿಸಿದ್ದಾರೆ.

 

ಪ್ರತಿ ಹನ್ನೊಂದು ವರ್ಷಗಳಿಗೊಮ್ಮೆ ಸೌರಜ್ವಾಲೆಗಳು ದೈತ್ಯ ಗಾತ್ರ ಪಡೆಯುವುದು ಸಹಜ ಸಂಗತಿ. ಹಿಂದೆಯೂ ಹೀಗಾಗಿದ್ದು, ಈಗ ಹನ್ನೊಂದು ವರ್ಷದ ವಯೋಮಾನದವರಿಗೆ ಏನೂ ತೊಂದರೆ ಕಾಣಿಸಿಕೊಂಡಿಲ್ಲ ಎಂದರೆ ಈಗಲೂ ಯಾವ ತೊಂದರೆಯೂ ಉಂಟಾಗದು ಎಂದು ನಾಸಾ ವಿಜ್ಞಾನಿಗಳು ಸ್ಪಷ್ಟಪಡಿಸಿದ್ದಾರೆ.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry