ಶುಕ್ರವಾರ, 29 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

2013: ಅತ್ಯಾಚಾರದ ವರ್ಷ

Last Updated 23 ಡಿಸೆಂಬರ್ 2013, 19:30 IST
ಅಕ್ಷರ ಗಾತ್ರ

ಕಳೆದ ಡಿಸೆಂಬರ್‌ನಿಂದ ಈ  ಡಿಸೆಂಬ­ರ್‌­ವರೆಗೆ, 2013 ಅತ್ಯಾಚಾರದ ವರ್ಷ­ವೆಂಬಂತಾ­ಗಿದೆ. ದೆಹಲಿ ವಿದ್ಯಾರ್ಥಿ­ನಿ ಮೇಲಿನ ಸಾಮೂ­ಹಿಕ ಅತ್ಯಾಚಾರ ಗುಂಪಿನ­ಲ್ಲಿದ್ದ ಬಾಲಕನಿಂದ ಮೊದಲು­ಗೊಂಡು ನ್ಯಾಯ­ಮೂರ್ತಿ ಗಂಗೂಲಿ ಎಂಬ ವೃದ್ಧರವರೆಗೆ, ಸೈಕೋಪಾತ್‌ ಉಮೇಶ­ನಂತಹ ವ್ಯಕ್ತಿಗಳ ಮೊದಲುಗೊಂಡು ತೆಹೆಲ್ಕಾದ ತರುಣ್ ತೇಜ್‌ಪಾಲ್‌­ವರೆಗೆ, ಆಸಾ­ರಾಮ್‌­ ಮೊದಲು­ಗೊಂಡು ವಿಶ್ವವಿದ್ಯಾಲಯ  ಅಧ್ಯಾಪಕ ರ­ವರೆಗೆ ಈ ಕೀಚಕರ ಕಬಂಧಬಾಹು ಹಬ್ಬಿದೆ.

ಕಾಮಾತುರರಿಗೆ ಲಜ್ಜೆ ಎಂಬುದಿಲ್ಲ, ವಯ­ಸ್ಸಿನ ಅಂತರವಿಲ್ಲ, ತಂದೆಗೆ ಮಗಳೆಂಬ, ಸೋದರಗೆ ಸೋದರಿಯೆಂಬ, ಗುರುವಿಗೆ ಶಿಷ್ಯೆ ಎಂಬ, ಅಧಿಕಾರಿಗೆ ಸಹಾಯಕಿ ಎಂಬ ಕಿಂಚಿತ್‌ ಪರಿ­ಜ್ಞಾನವೂ ಇಲ್ಲ.  ನಿತ್ಯ ಇದೇ ಸುದ್ದಿ!

ಈ ಕೀಚಕ ಪರಂಪರೆ ಮಹಾಭಾರತದಷ್ಟು ಹಳೆಯದು. ಹಿಂದೆ ಹೆಣ್ಣುಮಕ್ಕಳು ಈಗಿನಂತೆ ತಮಗಾದ ಅನ್ಯಾಯ ಅವಮಾನ, ಅತ್ಯಾ­ಚಾರ­­ಗಳನ್ನು ಬಹಿರಂಗಪಡಿಸಲು ಮುಂದೆ ಬರು­ತ್ತಿರ­ಲಿಲ್ಲ. ಆದರೀಗ ಅವರ ಪರ ಕಾನೂನು ಬಿಗಿ ಇರುವುದರಿಂದ  ತಮ­ಗಾದ ಅನ್ಯಾಯಗಳ ವಿರುದ್ಧ  ದನಿ ಎತ್ತುತ್ತಿದ್ದಾರೆ. ಆದ್ದರಿಂದಲೇ ಬಹಳಷ್ಟು ರೇಪ್‌ ಹಗರಣಗಳು ಬಯಲಾಗುತ್ತಿವೆ. ಆದರೂ ಕೆಲವೊಮ್ಮೆ ಗಟ್ಟಿ ಎವಿಡೆನ್‌್ಸ ದೊರೆಯದ ಕಾರಣ ಕೆಲವು ಅಪರಾಧಿಗಳು ಶಿಕ್ಷೆಯಿಂದ ತಪ್ಪಿಸಿ ಕೊಳ್ಳುತ್ತಿದ್ದಾರೆ.

ಆದ್ದರಿಂದ ಕಾನೂನಿಗೆ ಇನ್ನಷ್ಟು ಭೀಮ ಬಲ ತುಂಬಿ ಕೀಚಕರು ನುಣುಚಿ­ಕೊಳ್ಳದಂತೆ ಸರ್ಕಾರ ಕಾರ್ಯತತ್ಪರವಾದರೆ ಹೆಣ್ಣು ಮಕ್ಕಳ ಭವಿಷ್ಯ ಉತ್ತಮವಾದೀತು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT