2014ರ ಚುನಾವಣೆ ಸಾರಥ್ಯ ರಾಹುಲ್‌ಗೆ

7

2014ರ ಚುನಾವಣೆ ಸಾರಥ್ಯ ರಾಹುಲ್‌ಗೆ

Published:
Updated:

ನವದೆಹಲಿ (ಪಿಟಿಐ): ರಾಹುಲ್ ಗಾಂಧಿ ನೇತೃತ್ವದಲ್ಲಿಯೇ ಕಾಂಗ್ರೆಸ್ 2014ರ ಲೋಕಸಭಾ ಚುನಾವಣೆ ಎದುರಿಸಲಿದೆ ಮತ್ತು ಅವರು ಅತಿ ಶೀಘ್ರದಲ್ಲಿಯೇ ಪಕ್ಷದಲ್ಲಿ ಮಹತ್ತರವಾದ ಜವಾಬ್ದಾರಿ ವಹಿಸಿಕೊಳ್ಳಲಿದ್ದಾರೆ ಎಂದು

ಕಾಂಗ್ರೆಸ್ ಸೋಮವಾರ ಘೋಷಿಸಿದೆ.ಚುನಾವಣಾ ಪೂರ್ವ ಮತ್ತು ಚುನಾವಣೆ ನಂತರದ ಮೈತ್ರಿ ಬಗ್ಗೆ ಕಾಂಗ್ರೆಸ್ ಪಕ್ಷವು ಯೋಜನೆಗಳನ್ನು ಹಾಕಿಕೊಂಡಿದ್ದು ಮುಂದಿನ ಚುನಾವಣೆಯಲ್ಲಿ ಯುಪಿಎ- 3 ಸರ್ಕಾರ ರಚಿಸುವ ಭರವಸೆಯಿದೆ ಎಂದ ಕಾಂಗ್ರೆಸ್‌ನ ವಕ್ತಾರ ಪಿ.ಸಿ. ಚಾಕೋ ಹೇಳಿದ್ದಾರೆ.  ರಾಹುಲ್ ಅವರು ಹೆಚ್ಚುವರಿ ಜವಾಬ್ದಾರಿಯನ್ನು ವಹಿಸಿಕೊಳ್ಳಲು ಸಿದ್ಧರಿದ್ದಾರೆ ಎಂದೂ ತಿಳಿಸಿದ್ದಾರೆ

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry